Advertisement

ಡಾವಿಂಚಿ ಕಲಾಕೃತಿ 643 ಕೋಟಿಗೆ ಹರಾಜು?

12:48 PM Oct 12, 2017 | Sharanya Alva |

ನ್ಯೂಯಾರ್ಕ: ಪ್ರಖ್ಯಾತ ಕಲಾವಿದ ಡಾ ವಿಂಚಿ ರಚಿಸಿದ್ದ ಜಗದ್ವಿಖ್ಯಾತ ಕಲಾಕೃತಿ “ಮೊನಾಲಿಸಾ’ ರಚಿಸಿದ ವೇಳೆಯಲ್ಲೇ ರಚಿಸಿದ್ದೆನ್ನಲಾದ “ಸಾಲ್ವೇಟರ್‌ ಮುಂಡಿ’ (ಜಗತ್‌ ರಕ್ಷಕ) ಎಂಬ ಹೆಸರಿನ ಯೇಸು ಕ್ರಿಸ್ತನ ಕಲಾಕೃತಿ ಹರಾಜಿಗೆ ಸಿದ್ಧವಾಗಿದ್ದು, ಅದರ ಮೂಲ ಬೆಲೆ 643
ಕೋಟಿ ರು. ಎಂದು ನಿಗದಿಯಾಗಿದೆ. 

Advertisement

ನ.15ರಂದು ಇಲ್ಲಿನ ರಾಕ್‌ಫೆಲ್ಲರ್‌ ಪ್ಲಾಜಾದಲ್ಲಿ ಈ ಕಲಾಕೃತಿಯನ್ನು ಹರಾಜಿಗಿಡಲು ಸದ್ಯಕ್ಕೆ ಇದರ ಮಾಲೀಕತ್ವ ಹೊಂದಿರುವ ಸಂಸ್ಥೆ ತಿಳಿಸಿದೆ. ಈ ಹಿಂದೆ, ಇದೇ ಭಾವಚಿತ್ರವು 1958ರಲ್ಲಿ 45 ಪೌಂಡ್‌ ಗಳಿಗೆ ಹರಾಜಾಗಿತ್ತು. ಈಗ ಅದರ ಮೂಲ ಬೆಲೆ 75 ಮಿಲಿಯನ್‌ ಪೌಂಡ್‌ ಎಂದು ನಿಗದಿಗೊಳಿಸಲಾಗಿದೆ. ಸದ್ಯ ಲಭ್ಯವಿರುವ ಡಾ ವಿಂಚಿಯ 5 ಕಲಾಕೃತಿಗಳಲ್ಲಿ ಇದೂ ಒಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next