Advertisement
ಬಿಬಿಎಂಪಿಯ ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡುವ ಪ್ರಕ್ರಿಯೆ ಸಂಬಂಧ ಬುಧವಾರ ಮಲ್ಲೇಶ್ವರ ಐಪಿಪಿ ಕೇಂದ್ರದಲ್ಲಿ ಸಭೆ ಏರ್ಪಡಿಸಿ ಎಲ್ಲ ಕಂದಾಯ ಹಾಗೂ ಸಹಾಯ ಕಂದಯ ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನೀಲನಕ್ಷೆಯನ್ನಾಧರಿಸಿ ಹೊಸ ವಾರ್ಡ್‌ಗಳ ರಚನೆಯಲ್ಲಿ ಕಂಡುಬರುವ ಲೋಪಗಳನ್ನು ಪಟ್ಟಿ ಮಾಡಿ ವಾರದೊಳಗಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
Related Articles
Advertisement
“ಬಿಬಿಎಂಪಿ 198 ವಾರ್ಡ್‌ಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಸರಾಸರಿ 42 ಸಾವಿರ ಅನುಪಾತದಲ್ಲಿ ವಾರ್ಡ್‌ಗಳ ಮರುವಿಂಗಡನೆ ಮಾಡಲಾಗುತ್ತಿದೆ. ಅದರಂತೆ ಆಯಾ ವಿಧಾನ ಸಭಾ ಕ್ಷೇತ್ರಗಳಲ್ಲಿರುವ ವಾರ್ಡ್‌ಗಳ ವಿಸ್ತೀರ್ಣ ಮಾತ್ರ ಬದಲಾಗುತ್ತಿದೆ. ಕೆಲ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗಲಿದ್ದು, ಇನ್ನು ಕೆಲವು ವಾರ್ಡ್‌ಗಳಲ್ಲಿ ಹೆಚ್ಚಳವಾಗಲಿವೆ. 13 ವಾರ್ಡ್‌ಗಳಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ’ ಎಂದು ಹೇಳಿದರು.
ಸಭೆಯಲ್ಲಿ ವಿಶೇಷ ಆಯುಕ್ತರು(ಘನತ್ಯಾಜ್ಯ ನಿರ್ವಹಣೆ ಮತ್ತು ಆಡಳಿತ), ವಿಶೇಷ ಆಯುಕ್ತರು(ಹಣಕಾಸು ಮತ್ತು ಕಂದಾಯ), ಎಲ್ಲ ವಲಯಗಳ ಜಂಟಿ ಆಯುಕ್ತರು, ಕಂದಾಯ ವಿಭಾಗದ ಜಂಟಿ ಆಯುಕ್ತರು ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.
ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ: ಬೆಂಗಳೂರು ಮಹಾನಗರ ಪಾಲಿಕೆ(ಬಿಎಂಪಿ) ಇದ್ದ ವೇಳೆ ನಗರದಲ್ಲಿ 100 ವಾರ್ಡ್‌ಗಳಿದ್ದವು. ಬಳಿಕ 2007ರಲ್ಲಿ 7 ನಗರಸಭೆಗಳು, 1 ಪಟ್ಟಣ ಪಂಚಾಯತ್ ಹಾಗೂ 110 ಹಳ್ಳಿಗಳನ್ನು ಸೇರಿಸಿಕೊಂಡು ಒಟ್ಟು 198 ವಾರ್ಡ್‌ಗಳಂತೆ ಪುನರ್ ರಚಿಸಿ ಬಿಬಿಎಂಪಿಯನ್ನಾಗಿ ಮಾಡಲಾಯಿತು.
ಇದೀಗ 2011ರ ಜನಸಂಖ್ಯೆ (84,43,675)ಗೆ ಅನುಗುಣವಾಗಿ ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಲಾಗುತ್ತಿದೆ. ಅದಕ್ಕಾಗಿ ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿದ್ದು, ಯಾವ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ವಾರ್ಡ್‌ಗಳನ್ನು ರಚಿಸಬೇಕು, ವಾರ್ಡ್‌ಗಳ ವ್ಯಾಪ್ತಿ ಎಷ್ಟಿರಬೇಕು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ.
ಕ್ಷೇತ್ರವಾರು ಮರು ವಿಂಗಡನೆ ವಾರ್ಡ್‌ಗಳ ವಿವರಹೊಸ ವಾರ್ಡ್‌ಕ್ಷೇತ್ರ ಹಳೆಯ ವಾರ್ಡ್
ಯಲಹಂಕ 4 4
ಮಹಾಲಕ್ಷ್ಮೀ ಲೇಔಟ್ 7 7
ಸಿ.ವಿ.ರಾಮನ್ ನಗರ 7 7
ವಿಜಯ ನಗರ 8 8
ಬಸವನಗುಡಿ 6 6
ಮಲ್ಲೇಶ್ವರ 7 6
ಹೆಬ್ಟಾಳ 8 7
ಪುಲಕೇಶಿನಗರ 7 6
ಶಿವಾಜಿನಗರ 7 5
ಶಾಂತಿನಗರ 7 6
ಗಾಂಧಿನಗರ 7 6
ರಾಜಾಜಿನಗರ 7 5
ಗೋವಿಂದರಾಜ ನಗರ 9 7
ಚಾಮರಾಜಪೇಟೆ 7 6
ಚಿಕ್ಕಪೇಟೆ 7 6
ಪದ್ಮನಾಭನಗರ 8 7
ಬಿ.ಟಿ.ಎಂ.ಲೆಔಟ್ 8 7
ಜಯನಗರ 7 5
ಕೆ.ಆರ್.ಪುರ 9 11
ಬ್ಯಾಟರಾಯನಪುರ 7 9
ಯಶವಂತಪುರ 5 7
ರಾಜರಾಜೇಶ್ವರಿ ನಗರ 9 11
ದಾಸರಹಳ್ಳಿ 8 10
ಸರ್ವಜ್ಞ ನಗರ 8 9
ಮಹದೇವಪುರ 8 10
ಬೊಮ್ಮನಹಳ್ಳಿ 8 10
ಬೆಂಗಳೂರು ದಕ್ಷಿಣ 7 9
ಆನೇಕಲ್ 1 1