Advertisement
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.10ರಂದು ಜನ್ಮದಿನ ಆಚರಿಸಿಕೊಳ್ಳುವ ದಿನದಂದು ಬಳ್ಳಾರಿಯಲ್ಲಿ ಕರುಣಾಕರರೆಡ್ಡಿ ವಿರುದ್ಧ ಅಮಾಯಕರಿಂದ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿಸಿದ್ದಾರೆ. ಆದರೆ ಏ.9 ಮತ್ತು 10ರಂದು ರೆಡ್ಡಿ ಅವರು ಹರಪನಹಳ್ಳಿ ಕ್ಷೇತ್ರದಲ್ಲಿದ್ದರು.
Related Articles
Advertisement
ದಲಿತ ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆ, ಆಶ್ರಯ ಮನೆ ಕೊಟ್ಟಿದ್ದಾರೆ. ಇಂತವರು ಜಾತಿ ನಿಂದಿಸಲು ಸಾಧ್ಯವೇ ಇಲ್ಲ. ರಾಜಕಾರಣದ ದ್ವೇಷ ತೀರಿಸಿಕೊಳ್ಳಲು ದೊಡ್ಡ ಮನುಷ್ಯರು ಇಂತಹ ಕೃತ್ಯಕ್ಕೆ ಕೈಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಆ ನಾಯಕನ ಹೆಸರು ಬಹಿರಂಗಪಡಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಿಜೆಪಿ ಎಸ್ಟಿ ಘಟಕದ ಅಧ್ಯಕ್ಷ ಆರ್.ಲೋಕೇಶ್ ಮಾತನಾಡಿ, ದಲಿತರು, ಹಿಂದುಳಿದವರ, ಅಲ್ಪಸಂಖ್ಯಾತರ ಬಗ್ಗೆ ಅಪಾರ ಪ್ರೀತಿ, ಕಾಳಜಿ ಹೊಂದಿರುವ ಕರುಣಾಕರರೆಡ್ಡಿ ಅವರ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ.
ಕರುಣಾಕರರೆಡ್ಡಿ ಅವರ ಆಡಳಿತಾವಧಿಧಿಯಲ್ಲಿ ಕ್ಷೇತ್ರದಲ್ಲಿ ಜಾತಿ ನಿಂದನೆ ಪ್ರಕರಣಗಳು ದಾಖಲಾಗದಂತೆ ನೋಡಿಕೊಂಡು ಎಲ್ಲಾ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಿದ್ದರು ಎಂದು ತಿಳಿಸಿದರು. ಬಿಜೆಪಿ ಉಪಾಧ್ಯಕ್ಷ ಸಣ್ಣಹಾಲಪ್ಪ, ಪುರಸಭೆ ಸದಸ್ಯರಾದ ದುರುಗಪ್ಪ, ಜಯಮ್ಮ, ಕೃಷ್ಣ, ಮಾದಿಗ ಸಮಾಜದ ಮುಖಂಡರಾದ ನೀಲಗುಂದ ಹನುಮಂತ, ಹುಲಿಕಟ್ಟಿ ಕೋಟ್ರಪ್ಪ, ಮ್ಯಾಕಿ ದುರುಗಪ್ಪ, ಲಕ್ಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.