Advertisement
ಪಡಿತರದಡಿ ವಿತರಿಸಲು ಪ್ರತೀ ತಿಂಗಳು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ತಲಾ 40 ಸಾವಿರ ಕ್ವಿಂಟಾಲ್ ಅಕ್ಕಿ ಬೇಕು. ಸದ್ಯ ಆಂಧ್ರ ಪ್ರದೇಶದಿಂದ ಬರುವ ಕುಚ್ಚಲಕ್ಕಿಯನ್ನು ವಿತರಿಸ ಲಾಗುತ್ತಿದೆ. ಸ್ಥಳೀಯ ವಾಗಿ ಭತ್ತ ಖರೀದಿಸಿ, ಕುಚ್ಚಲು ಅಕ್ಕಿ ವಿತರಣೆಗೆ ಅವಕಾಶ ಕೊಡುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪರಿಶೀಲನೆಯ ಹಂತ ದಲ್ಲಿದೆ. ಕೇಂದ್ರ ಅನುಮತಿ ನೀಡಿದ ಮೇಲೆ ಸ್ಥಳೀಯ ಅಕ್ಕಿ ವಿತರಣೆ ಆರಂಭವಾಗಲಿದೆ.
ಪಡಿತರದಡಿ ನೀಡುವ ಅಕ್ಕಿ ಯಾ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಅಡಿ ಖರೀದಿಸಬೇಕು. ರೈತರು ಭತ್ತವನ್ನು ನಿರ್ದಿಷ್ಟ ಖರೀದಿ ಕೇಂದ್ರದ ಮೂಲಕವೇ ನೀಡಬೇಕಾಗುತ್ತದೆ. ಉಭಯ ಜಿಲ್ಲೆಗೆ ತಿಂಗಳಿಗೆ 80 ಸಾವಿರ ಕ್ವಿಂ.ಗೂ ಅಧಿಕ ಅಕ್ಕಿ ಬೇಕಿದ್ದು, ಅಷ್ಟು ಎಂಎಸ್‌ಪಿ ಅಡಿ ಖರೀದಿಗೆ ಸಿಗದು. ಮಿಲ್‌ಗಳಿಗೆ ಭತ್ತವನ್ನು ಇಷ್ಟೇ ಒಣಗಿಸಿ ನೀಡಬೇಕು ಎಂಬ ನಿಯಮ ಇಲ್ಲ. ಆದರೆ ಪಡಿತರ ವಿತರಣೆಗೆ ನೀಡುವ ಭತ್ತಕ್ಕೆ ಈ ನಿಯಮವಿದೆ. ಸ್ಥಳೀಯ ಕುಚ್ಚಲಕ್ಕಿ ಈ ಎರಡು ಜಿಲ್ಲೆಗಳಿಗೆ ಸೀಮಿತವಾಗಿದ್ದು, ಕೊರತೆಯಾದರೆ ಬೇರೆಡೆಯಿಂದ ತರಿಸಲಾಗದು. ಕೇಂದ್ರದ ಅನು ಮತಿ, ಸಬ್ಸಿಡಿ, ಬೆಂಬಲ ಬೆಲೆ ಹೀಗೆ ಹಲವು ತಾಂತ್ರಿಕ ತೊಡಕುಗಳಿವೆ. ಶೇ. 50ರಷ್ಟು ಬೇಡಿಕೆ
ಈಗ ನೀಡುತ್ತಿರುವ ಕುಚ್ಚಲು ಅಕ್ಕಿ ಊಟಕ್ಕೆ ಹಿಡಿಸುವುದಿಲ್ಲ. ಮನೆಗಳಲ್ಲಿ ತಿಂಡಿಗೆ ಬೆಳ್ತಿಗೆ ಅಕ್ಕಿಯ ಅಗತ್ಯವಿರುವುದರಿಂದ ಸದ್ಯ ಬಹುತೇಕರು ಅದನ್ನೇ ಕೇಳಿ ಪಡೆಯುತ್ತಿದ್ದಾರೆ. ಸದ್ಯ ಕುಚ್ಚಲು ಮತ್ತು ಬೆಳ್ತಿಗೆ ಅಕ್ಕಿಗೆ ತಲಾ ಶೇ. 50ರಷ್ಟು ಬೇಡಿಕೆಯಿದೆ. ಸ್ಥಳೀಯ ಕುಚ್ಚಲು ಅಕ್ಕಿ ಖರೀದಿಗೆ ಅವಕಾಶ ಸಿಕ್ಕ ಅನಂತರ ಬೇಡಿಕೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Related Articles
Advertisement
ಸ್ಥಳೀಯ ಕುಚ್ಚಲಕ್ಕಿ ವಿತರಣೆಗೆ ಕೇಂದ್ರ ಸರಕಾರ ಅನುಮತಿ ನೀಡಿದ ಅನಂತರ ನಿರ್ದಿಷ್ಟ ಮಾರ್ಗಸೂಚಿಯಂತೆ ಭತ್ತ ಖರೀದಿ ಸಲಾಗುವುದು. ರೈತರಿಗೂ ಈ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೆಲವು ತಾಂತ್ರಿಕ ಸಮಸ್ಯೆ ಎದು ರಾಗುವ ಸಾಧ್ಯತೆಯಿದ್ದು, ಅದನ್ನು ನಿವಾ ರಿಸಲು ಕ್ರಮ ತೆಗೆದುಕೊಳ್ಳಲಿದ್ದೇವೆ.– ಮೊಹಮ್ಮದ್ ಇಸಾಕ್,
ಉಡುಪಿ ಜಿಲ್ಲಾ ಉಪನಿರ್ದೇಶಕ, ಆಹಾರ, ನಾಗರಿಕ ಸರಬರಾಜು- ಗ್ರಾ.ವ್ಯ. ಇಲಾಖೆ ಸ್ಥಳೀಯ ಕುಚ್ಚಲಕ್ಕಿ
ವಿತರಣೆಗೆ ಈಗಾಗಲೇ
ಜಂಟಿ ಸಮೀಕ್ಷೆ ಮಾಡಿ, ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಸ್ಥಳೀಯ ಬೇಡಿಕೆಯಷ್ಟು ಕುಚ್ಚಲು ಅಕ್ಕಿ ಪೂರೈಕೆ ಆಗುವುದೂ ಅಷ್ಟೇ ಮುಖ್ಯ.
-ಕೆ.ಪಿ. ಮಧುಸೂದನ್,
ದ.ಕ. ಜಿಲ್ಲಾ ಉಪನಿರ್ದೇಶಕ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ