ರಾಯ್‌ಪುರ: ಛತ್ತಿಸ್‌ಗಢದ ರಾಯಪುರದಲ್ಲಿ ನಡೆಯುತ್ತಿರುವ ಎಐಸಿಸಿ ಮಹಾ ಅಧಿವೇಶನಕ್ಕೇ ಆಗಮಿಸಿದ ಕಾಂಗ್ರಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಮತ್ತು ಇತರೆ ನಾಯಕರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಅವರ ಸ್ವಾಗತಕ್ಕೆ ಪೂರ್ತಿ ರಸ್ತೆಯನ್ನೇ ಗುಲಾಬಿ ಹೂವುನ ದಳಗಳಿಂದ ಸಿಂಗರಿಸಲಾಗಿತ್ತು. ಇದೀಗ ಈ ಸ್ವಾಗತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಯಪುರದ ಮಹಾ ಅಧಿವೇಶನಕ್ಕೆ ಆಗಮಿಸಿದ್ದ ಪ್ರಿಯಾಂಕಾ ವಾದ್ರಾ ಅವರನ್ನು ಛತ್ತಿಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು. ಆ ಬಳಿಕ ಪ್ರಿಯಾಂಕಾ ಅವರನ್ನು ಗುಲಾಬಿ ಹಾಸಿನ ಮೇಲೆ ಕರೆದೊಯ್ಯಲಾಗಿದೆ.
ಕಾಂಗ್ರೆಸ್‌ನ 85ನೇ ಮಹಾ ಅಧಿವೇಶನ ಶುಕ್ರವಾರ ರಾಯಪುರದಲ್ಲಿ ಆರಂಭವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ಸಂಚಾಲನಾ ಸಭೆ ನಡೆದಿತ್ತು.
ವಿಶೇಷವೆಂದರೆ, ಅಧಿವೇಶನದ ಮೊದಲ ದಿನ ಗಾಂಧಿ ಪರಿವಾರದ ಯಾವುದೇ ಸದಸ್ಯರು ಭಾಗಿಯಾಗಲಿಲ್ಲ. ಆದರೆ ಶನಿವಾರದ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಿಯಾಂಕಾಗೆ ಕೆಂಪು ಗುಲಾಬಿ ದಳಗಳನ್ನು ಚಿಲ್ಲಿದ ರಸ್ತೆಯಲ್ಲಿ ಕರೆದೊಯ್ಯುವ ಮೂಲಕ ಮೂಲಕ ಭರ್ಜರಿ ಸ್ವಾಗತನೀಡಿದ್ಧಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವರ ಬೆಂಗಾವಲು ಪಡೆ ಮೇಲೆ ದಾಳಿ