ಇಷ್ಟು ದಿನ ಬೆಳ್ಳಗಿದ್ದ ಚಂದ್ರನ ಬಣ್ಣ ಈ ತಿಂಗಳ ಕೊನೆಯ ದಿನದಂದು (ಜ.31) ಬದಲಾಗಲಿದೆ. ಅಂದು ಚಂದ್ರ ಕೆಂಪಾಗಿಯೂ, ಬಗೆಯ ಬಗೆಯ ಬಣ್ಣದಲ್ಲಿ ದರ್ಶನ ಕೊಡಲಿದ್ದಾನೆ! ಯಾಕೆ ಹೀಗೆ ಅಂತೀರಾ? ಅವತ್ತು ಪ್ರಕಾಶಮಾನ ರಕ್ತಚಂದ್ರ ಸಂಪೂರ್ಣ ಖಂಡಗ್ರಾಸ ಚಂದ್ರಗ್ರಹಣ.
ಈ ಅತ್ಯಪರೂಪದ ಚಂದ್ರಗ್ರಹಣ 150 ವರ್ಷದ ನಂತರ ಘಟಿಸುತ್ತಿದೆ. ಅಂದಹಾಗೆ, ಇಂಥದ್ದೇ ಗ್ರಹಣ 1866ರ ಮಾ.31ರಂದು ಜರುಗಿತ್ತಂತೆ. ಈಗ ಈ ಅಪೂರ್ವ ಕ್ಷಣವನ್ನು ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ತೋರಿಸಲು ಹೊರಟಿರುವುದು, ಇಲ್ಲಿನ ಭಾರತೀಯ ಖಭೌತ ವಿಜ್ಞಾನ ಸಂಸ್ಥೆ.
ಸೂಪರ್ ಬ್ಲೂé- ಬ್ಲಿಡ್ ಮೂನ್‌ನ ದರ್ಶನವನ್ನು ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿದೆ. ಇದು ಸಂಪೂರ್ಣವಾಗಿ ಉಚಿತವಿದ್ದು, ಸಾರ್ವಜನಿಕರೊಂದಿಗೆ ಖಭೌತಶಾಸ್ತ್ರಜ್ಞರೂ ಜತೆಗೂಡಲಿದ್ದಾರೆ. ಗ್ರಹಣದ ಕುರಿತು ಇರುವ ತಪ್ಪುಕಲ್ಪನೆಯನ್ನು ಹೋಗಲಾಡಿಸಲು, ಗ್ರಹಣ ಪ್ರಕ್ರಿಯೆ ಕುರಿತು ಮಾಹಿತಿ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಂಪು ಚಂದ್ರನನ್ನು ಕಣ್ತುಂಬಿಕೊಳ್ಳಲು ಮಿಸ್ ಮಾಡಿಕೊಳ್ಳದಿರಿ…
ಯಾವಾಗ?: ಜ.31, ಬುಧವಾರ, ಸಂ.5- ರಾ.8
ಎಲ್ಲಿ?: ಲಾಲ್‌ಬಾಗ್ ಸಸ್ಯತೋಟ, ಮಾವಳ್ಳಿ
ಪ್ರವೇಶ: ಉಚಿತ