Advertisement

ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು “ಛಬ್ಬಿಯ ಕೆಂಪು ಗಣಪ”

06:01 PM Aug 27, 2021 | ಗಣೇಶ್ ಹಿರೇಮಠ |
1827 ರಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದ ಕೃಷ್ಣೇಂದ್ರ ಸ್ವಾಮಿಗಳು ಛಬ್ಬಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿನ ಶಾನಭೋಗ ತಿಮ್ಮಪ್ಪನ್ನವರು ಗುರುಗಳನ್ನ ಅದ್ಧೂರಿಯಾಗಿ ಬರಮಾಡಿಕೊಂಡು ಪಾದ ಪೂಜೆ ಮಾಡಿ ಸಂತೃಪ್ತರಾಗಿದ್ದರು‌. ಅಂದೇ ಸ್ವಾಮಿಗಳು ವಿಘ್ನವಿನಾಶಕ ಗಣೇಶನನ್ನ ಪೂಜೆ ಮಾಡಿ ಪ್ರತಿ ವರ್ಷ ಉತ್ಸವವನ್ನ ಆಚರಿಸುವಂತೆ ಆಶೀರ್ವದಿಸಿದ್ದರಂತೆ. ಹೀಗಾಗಿ ಅಂದಿನಿಂದ ಇಂದಿನವರೆಗೂ ಛಬ್ಬಿ ಗ್ರಾಮ ಕೆಂಪು ಗಣೇಶನ ಕಾಶಿಯಾಗಿ ಪರಿಣಮಿಸಿದೆ. ಪ್ರತಿ ವರ್ಷ ಗಣೇಶ್ ಚತುರ್ಥಿಯಂದು ಈ ಗ್ರಾಮದಲ್ಲಿ ಭಕ್ತಿಯ ಪರಾಕಾಷ್ಠೆಯ ಮುಗಿಲು ಮುಟ್ಟಿರುತ್ತೆ.
Now pay only for what you want!
This is Premium Content
Click to unlock
Pay with

ಮುಂದಿನ ತಿಂಗಳು ಸೆಪ್ಟೆಂಬರ್ ನಲ್ಲಿ ಗಣೇಶನ ಹಬ್ಬಕ್ಕೆ ಸಿದ್ಧತೆ ಈಗಾಗಲೇ ನಡೆದಿದೆ. ಕೋವಿಡ್ ಸೋಂಕಿನ ಭೀತಿಯ ನಡುವೆಯೂ ಹಬ್ಬವನ್ನು ಸರಳವಾಗಿ ಆಚರಿಸಲು ಭಕ್ತರು ಸಜ್ಜಾಗಿದ್ದಾರೆ. ನಾಡಿನಾದ್ಯಂತ ಗಣೇಶ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗ್ತಿದೆಯಾದರೂ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿನ ಕೆಂಪು ಗಣೇಶನ ಉತ್ಸವ ವಿಶಿಷ್ಠವಾದದ್ದು. ‘ಛಬ್ಬಿ ಗಣೇಶ’ ಎಂದೇ ಖ್ಯಾತಿ ಪಡೆದಿದ್ದು, ಐತಿಹಾಸಿಕ ಹಿನ್ನೆಲೆ ಕೂಡ ಹೊಂದಿದೆ. ಬೇಡಿದ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಈ ಗಣಪ ಎನ್ನುವ ನಂಬಿಕೆ ಇಲ್ಲಿಗೆ ಬರುವ ಲಕ್ಷಾಂತರ ಭಕ್ತರಲ್ಲಿದೆ.

Advertisement

3 ದಿನಗಳ ಕಾಲ ನಡೆಯುವ ಉತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಭಕ್ತರ ಸಂಕಷ್ಟಗಳನ್ನು ನಿವಾರಿಸೋ ಕೆಂಪು ಗಣಪ ಅನ್ನೋ ನಂಬಿಕೆ ಇದ್ದು ಇಲ್ಲಿನ 6 ಜನ ಕುಲಕರ್ಣಿ ಕುಟುಂಬಸ್ಥರು ಕೆಂಪು ಗಣಪನನ್ನ ಪ್ರತಿಷ್ಠಾಪನೆ ಮಾಡುತ್ತಾರೆ. ಕ್ರಿ.ಶ 1827ರಿಂದಲೇ ಶ್ರೀ ಕೃಷ್ಣೇಂದ್ರ ಸ್ವಾಮಿಗಳ ಆಶೀರ್ವಾದದಿಂದ ಇಂದಿನವರೆಗೂ ಉತ್ಸವ ಮಾಡುತ್ತಾ ಬರಲಾಗ್ತಿದೆ.

ಕೆಂಪು ಗಣಪನ ವಿಶೇಷ ಅಂದರೆ ಬಲಗೈಯಲ್ಲಿ ದಂತ, ಎಡಗೈಯಲ್ಲಿ ಈಶ್ವರ ಲಿಂಗ, ಉಳಿದೆರಡು ಕೈಯಲ್ಲಿ ಆಯುಧಗಳನ್ನು ಹೊಂದಿರುತ್ತಾನೆ. ವಿಶೇಷ ಅಂದರೆ ಈ ರೀತಿಯ ಗಣಪ ಮೈಸೂರು ಅರಮನೆಯಲ್ಲಿ ಮಾತ್ರ ಕಂಡು ಬರುತ್ತದೆ. ಈ ಇಷ್ಟಾರ್ಥ ಸಿದ್ಧಿ ಗಣಪನ ದರ್ಶನಕ್ಕೆ ರಾಜ್ಯದ ಮತ್ತು ಹೊರರಾಜ್ಯದ ಭಕ್ತರು ಬರ್ತಾರೆ. ಪ್ರತಿಷ್ಠಾಪನೆಯ ದಿನ ಚಂದ್ರೋದಯಕ್ಕೂ ಮುನ್ನ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಗಣಪನನ್ನ ಪ್ರತಿಷ್ಠಾಪಿಸಿ ಬಳಿಕ ರಾತ್ರಿ 8.30ಕ್ಕೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಉತ್ಸವದ ಹಿನ್ನೆಲೆ..?
1827 ರಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದ ಕೃಷ್ಣೇಂದ್ರ ಸ್ವಾಮಿಗಳು ಛಬ್ಬಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿನ ಶಾನಭೋಗ ತಿಮ್ಮಪ್ಪನ್ನವರು ಗುರುಗಳನ್ನ ಅದ್ಧೂರಿಯಾಗಿ ಬರಮಾಡಿಕೊಂಡು ಪಾದ ಪೂಜೆ ಮಾಡಿ ಸಂತೃಪ್ತರಾಗಿದ್ದರು‌. ಅಂದೇ ಸ್ವಾಮಿಗಳು ವಿಘ್ನವಿನಾಶಕ ಗಣೇಶನನ್ನ ಪೂಜೆ ಮಾಡಿ ಪ್ರತಿ ವರ್ಷ ಉತ್ಸವವನ್ನ ಆಚರಿಸುವಂತೆ ಆಶೀರ್ವದಿಸಿದ್ದರಂತೆ. ಹೀಗಾಗಿ ಅಂದಿನಿಂದ ಇಂದಿನವರೆಗೂ ಛಬ್ಬಿ ಗ್ರಾಮ ಕೆಂಪು ಗಣೇಶನ ಕಾಶಿಯಾಗಿ ಪರಿಣಮಿಸಿದೆ. ಪ್ರತಿ ವರ್ಷ ಗಣೇಶ್ ಚತುರ್ಥಿಯಂದು ಈ ಗ್ರಾಮದಲ್ಲಿ ಭಕ್ತಿಯ ಪರಾಕಾಷ್ಠೆಯ ಮುಗಿಲು ಮುಟ್ಟಿರುತ್ತೆ.

Advertisement

ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು :
ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು ಎಂದೇ ಪ್ರಸಿದ್ಧವಾದ ಛಬ್ಬಿ ಗಣೇಶ, ಈಗ ಕೇವಲ ಹುಬ್ಬಳ್ಳಿ- ಧಾರವಾಡ ಸುತ್ತಮುತ್ತಲಿನ ಜನತೆಗೆ ಮಾತ್ರ ಸೀಮಿತನಲ್ಲ. ಗೋವಾ, ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಎಲ್ಲೆಡೆ ಛಬ್ಬಿ ಗಣೇಶನಿಗೆ ನಡೆದುಕೊಳ್ಳುವರಿದ್ದಾರೆ. ಮೂರು ದಿನಗಳ ಕಾಲ ಗ್ರಾಮದ ಕುಲಕರ್ಣಿ ಮನೆತನದ ಆರು ಮನೆಯಲ್ಲಿ ಪ್ರತಿಷ್ಠಾಪನೆ ಆಗುವ ಗಣೇಶನ ದರ್ಶನ ಮಾಡಿ, ಆಶೀರ್ವಾದ ಪಡೆಯುತ್ತಾರೆ.

ಎರಡು ದಶಕಗಳಿಂದ ಛಬ್ಬಿ ಗಣೇಶನ ಪ್ರಸಿದ್ಧಿ ಹೆಚ್ಚಿದೆ. ಕುಲಕರ್ಣಿ ಮನೆತನ ಮೊದಲಿನಿಂದಲೂ ಮೂರು ದಿನಗಳ ಗಣೇಶ ಪ್ರತಿಷ್ಠಾಪನೆಯನ್ನು ತಲೆತಲಾಂತರಗಳಿಂದ ಮಾಡಿಕೊಂಡು ಬಂದಿದ್ದರೂ, ಎರಡು ದಶಕದಲ್ಲಿ ಈ ಮನೆತನದ ಗಣೇಶನ ಹಬ್ಬ ಸಾರ್ವತ್ರಿಕವಾಗಿದೆ. ಭಕ್ತರ ಭಾಷೆಯಲ್ಲಿ ಹೇಳುವುದಾದರೆ, ‘ಛಬ್ಬಿ ಗಣೇಶ ಬೇಡಿದ ವರವನ್ನು ಕರುಣಿಸುವ ದೇವರು’. ಕುಲಕರ್ಣಿ ಮನೆತನದಲ್ಲಿ ಮೊದಲು ನಾಲ್ಕು ಕುಟುಂಬಗಳಲ್ಲಿ ಮೂರು ದಿನ ಕೆಮ್ಮಣ್ಣಿನ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಕುಟುಂಬಗಳ ವಿಘಟನೆಯ ನಂತರ ಈಗ ಕುಲಕರ್ಣಿ ಮನೆತನದ ಒಟ್ಟು ಆರು ಅಣ್ಣತಮ್ಮಂದಿರು ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಾರೆ.

ಕಾಲಮಾನಕ್ಕೆ ಅನುಗುಣವಾಗಿ ಮನೆಗಳು ಬೇರೆಯಾಗಿರಬಹುದು. ಆದರೆ ಕುಲಕರ್ಣಿ ಮನೆತನದ ಮನಸ್ಸುಗಳು ಒಂದೇ. ಆದ್ದರಿಂದಲೇ ಆರೂ ಕುಟುಂಬಗಳ ಗಣೇಶ ಮೂರ್ತಿಗಳನ್ನು ಗಣೇಶನ ಹಬ್ಬದ ದಿನ ಏಕಕಾಲಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಅವರವರ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಇಲ್ಲಿಗೆ ಬರುವ ಭಕ್ತರು ಎಲ್ಲ ಆರೂ ಮನೆಗಳಿಗೆ ಹೋಗಿ ಗಣೇಶ ದರ್ಶನ ಪಡೆದರಷ್ಟೇ ಒಳಿತಾಗುತ್ತದೆ ಎಂಬ ನಂಬುಗೆ ಹೊಂದಿದ್ದಾರೆ.

ವರ್ಷದಿಂದ ವರ್ಷಕ್ಕೆ ಛಬ್ಬಿ ಗಣಪತಿ ಮಹತ್ವ ಹೆಚ್ಚುತ್ತಿದ್ದು, ಗಣೇಶ ಹಬ್ಬದಲ್ಲಿ ಪುಣ್ಯಕ್ಷೇತ್ರವೇ ಆಗಿ ಹೋಗಿದೆ. ಇಲ್ಲಿಗೆ ಬರುವ ಭಕ್ತಾದಿಗಳ ಒಂದು ಅರ್ಥದಲ್ಲಿ ವರೂರು ಬಳಿಯ ಛಬ್ಬಿ ಗಣಪ, ಉತ್ತರ ಕನ್ನಡ ಇಡಗುಂಜಿ ಗಣಪನಷ್ಟೇ ಪ್ರಸಿದ್ಧಿಗೆ ಬಂದಿದ್ದಾನೆ. 1992ರ ನಂತರ ಹಬ್ಬದ ಮೂರು ದಿನಗಳಲ್ಲಿ ಛಬ್ಬಿ ಗ್ರಾಮದಲ್ಲಿ ಜಾತ್ರೆಯೇ ನಡೆಯಲಾರಂಭಿಸಿತು. ಭಕ್ತರ ನಿಯಂತ್ರಣಕ್ಕೆ ಪೊಲೀಸರೂ ಮೂರು ದಿನಗಳ ಕಾಲ ಇಲ್ಲಿ ಕ್ಯಾಂಪ್ ಮಾಡುತ್ತಾರೆ. ಗ್ರಾಮದಲ್ಲಿ ಮೂರು ದಿನಗಳ ಕಾಲ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಇಲ್ಲಿಗೆ ಆಗಮಿಸಿ ಗಣಪತಿ ದರ್ಶನ ಪಡೆಯುತ್ತಾರೆ. ಇದೊಂದು ಗಜಾನನ ಪುಣ್ಯಕ್ಷೇತ್ರ ಎಂಬ ಖ್ಯಾತಿ ಪಡೆದಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಗಣಪತಿಯಷ್ಟೇ ಖ್ಯಾತಿಯನ್ನು ಪಡೆದಿದೆ.

*ಗಣೇಶ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.