ನವದೆಹಲಿ:ಗಣರಾಜ್ಯೋತ್ಸವ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಆರೋಪಿ ಮಣೀಂದರ್ ಸಿಂಗ್ ನನ್ನು ದೆಹಲಿ ಸ್ಪೆಷಲ್ ಸೆಲ್ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಾಮಮಂದಿರಕ್ಕೆ ದೇಣಿಗೆ ಕೇಳಲು ಬಂದವರು ನನಗೆ ಬೆದರಿಕೆ ಹಾಕಿದ್ದರು: ಹೆಚ್ ಡಿಕೆ ಗಂಭೀರ ಆರೋಪ
ಆರೋಪಿಯ ಸ್ವರೂಪ್ ನಗರ್ ನಿವಾಸದಲ್ಲಿದ್ದ ಎರಡು (4.3 ಅಡಿ ಉದ್ದದ) ಖಡ್ಗಗಳನ್ನು ವಶಪಡಿಸಿಕೊಂಡಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಜನವರಿ 26ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ಹಿಂಸಾಚಾರಾ ನಡೆದ ವೇಳೆ ಎರಡು ಖಡ್ಗಗಳನ್ನು ಝಳಪಿಸುವ ಮೂಲಕ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವವರನ್ನು ಉತ್ತೇಜಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿರುವುದಾಗಿ ವರದಿ ವಿವರಿಸಿದೆ.
ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರಾಲಿ ವೇಳೆ ಕೆಂಪುಕೋಟೆಯಲ್ಲಿ ಹಿಂಸಾಚಾರ ನಡೆಸುವ ಬಗ್ಗೆ ಇನ್ನೂ ಆರು ಜನರ ಮೇಲೆ ಪ್ರಭಾವ ಬೀರಿದ್ದು, ಅವರು ಕೂಡಾ ಶಾಮೀಲಾಗಿರುವುದಾಗಿ ಸಿಂಗ್ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಸಿಂಗ್ ಹಾಗೂ ಆತನ ಹಿಂಬಾಲಕರು ಕೆಂಪುಕೋಟೆಗೆ ನುಗ್ಗಿದ್ದು, ಈ ಸಂದರ್ಭದಲ್ಲಿ ಮಣಿಂದರ್ ಸಿಂಗ್ ಖಡ್ಗವನ್ನು ಝಳಪಿಳಿಸುತ್ತಾ ನೃತ್ಯ ಮಾಡಿ ಇನ್ನಷ್ಟು ದಾಳಿ ನಡೆಸುವುದಾಗಿ ಪರೋಕ್ಷವಾಗಿ ಎಚ್ಚರಿಕೆ ನೀಡಿರುವುದಾಗಿ ಪೊಲೀಸರು ಆರೋಪಿಸಿದ್ದಾರೆ.