Advertisement
ಪಟ್ಣಣದ ರಾಷ್ಟ್ರೀಯ ಹೆದ್ದಾರಿ 75 ಹೇಮಾವತಿ ಸೇತುವೆ ಸಮೀಪದ ಹಳೆ ಹೆದ್ದಾರಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸುಮಾರು 30ಕ್ಕೂ ಹೆಚ್ಚು ಕೆಂಪು ಮೆಣಸಿನಕಾಯಿ ಬೆಳೆಗಾರರು ಗೂಡ್ಸ್ ಆಟೋದಲ್ಲಿ ತಂದು ಕಳೆದೊಂದು ವಾರದಿಂದ ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದು, ಇದೀಗ ಕೆಲವರ ಒತ್ತಡದ ಪರಿಣಾಮ ಮೆಣಸಿನಕಾಯಿ ಮಾರಾಟ ನಿಲ್ಲಿಸಿದ್ದಾರೆ.
Related Articles
Advertisement
ಪಟ್ಟಣದ ಅಂಗಡಿಗಳಲ್ಲಿ ಇಲ್ಲ ಬೇಡಿಕೆ: ಮಾರುಕಟ್ಟೆ ಯಲ್ಲಿ ದುಬಾರಿ ದರಕ್ಕೆ ಮಾರಾಟವಾಗುತ್ತಿರುವ ಕೆಂಪು ಮೆಣಸಿನಕಾಯಿಯನ್ನು ನೇರವಾಗಿ ಮಾರುತ್ತಿರುವುದ ರಿಂದ ತಾಲೂಕಿನ ಅಂಗಡಿಗಳಿಗೆ ಹೋಗಿ ಖರೀದಿ ಮಾಡಲು ಯಾರು ಮುಂದಾಗದ ಕಾರಣ ಪಟ್ಟಣದ ದಿನಸಿ ಅಂಗಡಿಗಳು ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ಕೆಂಪು ಮೆಣಸಿನಕಾಯಿಗೆ ಬೇಡಿಕೆ ಯಿಲ್ಲದಂತಾ ಗಿದ್ದು, ವ್ಯಾಪಾರಿ ಗಳು ಚಿಂತೆಗೀಡಾಗುವಂತಾಗಿದೆ. ರೈತರಿಗೆ ಬೇಕಾಗಿದೆ ಸರ್ಕಾರದ ಪ್ರೋತ್ಸಾಹ: ರೈತರು ತಾವು ಬೆಳೆದ ಬೆಳೆಯನ್ನು ಮಧ್ಯವರ್ತಿಗಳಿಗೆ ಮಾರದೆ ನೇರವಾಗಿ ಮಾರುಕಟ್ಟೆಗೆ ತಂದರೆ ಉತ್ತಮ ಲಾಭ ಜತೆಗೆ ಗ್ರಾಹಕರಿಗೂ ಸಹ ಕಡಿಮೆ ದರದಲ್ಲಿ ಉತ್ಪನ್ನಗಳು ದೊರಕುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಕೃಷಿ ಉತ್ಪನ್ನಗಳನ್ನು ರೈತರು ನೇರವಾಗಿ ಮಾರಾಟ ಮಾಡಲು ಸರ್ಕಾರ ಪ್ರೋತ್ಸಾಹಿಸಬೇಕಾಗಿದೆ. ಅಲ್ಲದೆ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡುವ ರೈತರಿಗೆ ಸ್ಥಳೀಯ ಗೂಂಡಾಗಳಿಂದ ರಕ್ಷಣೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.
ಸ್ಥಳೀಯ ವ್ಯಾಪಾರಸ್ಥರಿಂದ ಕಿರಿಕಿರಿ: ಸ್ಥಳೀಯ ಕೆಲವು ವರ್ತಕರು ಹೊರ ಊರಿನಿಂದ ಬಂದು ಮೆಣಸಿನಕಾಯಿ ಮಾರಾಟ ಮಾಡುತ್ತಿದ್ದ ವರ ಮೇಲೆ ಗೂಂಡಾಗಿರಿ ತೋರಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ವ್ಯಾಪಾರ ನಿಲ್ಲಿಸಿದ ರೈತರು ತಮ್ಮ ತಮ್ಮ ಊರುಗಳಿಗೆ ಹಿಂತಿರುಗಿ ಬೇರೆ ಊರುಗಳಿಗೆ ಮಾರಾಟ ಮಾಡಲು ತೆರಳಿದರು. ಮುಂದಿನ ದಿನಗಳಲ್ಲಿ ಗ್ರಾಹಕರು ದುಬಾರಿ ದರ ತೆತ್ತು ಮೆಣಸಿನ ಕಾಯಿ ಖರೀದಿ ಅನಿವಾರ್ಯ.
ಮಧ್ಯವರ್ತಿಗಳು ನಾವು ಬೆಳೆದ ಬೆಳೆಗೆ ಅತ್ಯಂತ ಕಡಿಮೆ ದರ ನೀಡುವುದ ರಿಂದ ಬೆಳೆಯನ್ನು ನೇರವಾಗಿ ಮಾರುಕಟ್ಟೆಗೆ ತಂದು ಮಾರುತ್ತಿರುವುದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಮೆಣಸಿನಕಾಯಿ ದೊರಕುವಂತಾಗಿದೆ. ನಮಗೂ ಸಹ ಉತ್ತಮ ಲಾಭ ಸಿಗುತ್ತಿದೆ. ಕೆಲ ಸ್ಥಳೀಯರು ತೊಂದರೆ ನೀಡಿದ್ದರಿಂದ ಇಲ್ಲಿ ವ್ಯಾಪಾರ ಮಾಡುವುದನ್ನು ನಿಲ್ಲಿಸುತ್ತಿದ್ದೇವೆ. ●ಪರಮೇಶ್, ರೈತ ಬೆಳೆಗಾರರು ನೇರವಾಗಿ ಮಾರುಕಟ್ಟೆಗೆ ಮೆಣಸಿನಕಾಯಿ ತಂದು ಮಾರುತ್ತಿರುವುದರಿಂದ ಬೆಳೆಗಾರರಿಗೆ ಉತ್ತಮ ಲಾಭ, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮೆಣಸಿನಕಾಯಿ ದೊರಕುತ್ತಿದೆ. ರೈತರು ಸ್ವಯಂ ಪ್ರೇರಿತವಾಗಿ ತಮ್ಮ ಬೆಳೆಯನ್ನು ನೇರವಾಗಿ ಮಾರುಕಟ್ಟೆಯಲ್ಲಿ ಮಾರಲು ಮುಂದಾಗಬೇಕು. ರೈತರ ಮೇಲೆ ಕೆಲವರು ಗೂಂಡ ವರ್ತನೆ ತೋರಿರುವುದು ಸರಿಯಲ್ಲ. ●ಸುಧೀಶ್ ಪರಮೇಶ್, ವಕೀಲರು
– ಸುಧೀರ್ ಎಸ್.ಎಲ್.