Advertisement

ಬ್ಯಾಡಗಿ ಎಪಿಎಂಸಿಯಲ್ಲಿ 72 ಸಾವಿರಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕ

04:13 PM Dec 21, 2021 | Team Udayavani |

ಬ್ಯಾಡಗಿ : ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ 72 ಸಾವಿರಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಆವಕದಲ್ಲಿ ನಿರೀಕ್ಷೆಗೂ ಮೀರಿದ ಏರಿಕೆ ಕಂಡು ಬಂದಿದೆ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ಮಾರುಕಟ್ಟೆಯ ಆವಕದಲ್ಲಿ ಬಾರಿ ಇಳಿಕೆ ಕಂಡು ಬಂದಿತ್ತು. ಕೇವಲ 20ರಿಂದ 30 ಸಾವಿರದೊಳಗೆ ಇದ್ದ ಆವಕ ಸೋಮವಾರ
ಏಕಾಏಕಿ ಅರ್ಧ ಶತಕ ದಾಟಿದ್ದು, ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಘಾಟು ಜೋರಾಗಿತ್ತು. ಕಳೆದ ಹಲವುವಾರಗಳಲ್ಲಿಆವಕದಲ್ಲಿಇಳಿಕೆ ಕಂಡುಬಂದಿದ್ದು, ವ್ಯಾಪಾರಸ್ಥರಲ್ಲಿ ಆತಂಕ ಉಂಟು ಮಾಡಿತ್ತು. ಆದರೆ ಸೋಮವಾರ ಮೊದಲ ಬಾರಿಗೆ ಮೆಣಸಿನ ಕಾಯಿ 72,446 ಗಡಿ ಆವಕ ದಾಟಿದ್ದು, ವ್ಯಾಪಾರಸ್ಥರಲ್ಲಿನ ಆತಂಕ ದೂರ ಮಾಡಿದೆ.

Advertisement

ಸೋಮವಾರದ ದರ: ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ತಳಿ ಗರಿಷ್ಠ35,700, ಕನಿಷ್ಟ 1689, ಮಾದರಿ 14,509, ಡಬ್ಬಿತಳಿಗರಿಷ್ಠ50,001, ಕನಿಷ್ಟ2389,
ಮಾದರಿ 20,169, ಗುಂಟೂರು ಗರಿಷ್ಠ 12,869, ಕನಿಷ್ಟ899, ಮಾದರಿ 5209ಮಾರಾಟವಾದರೆ, ಹಸಿಯಾಗಿದ್ದ ಮೆಣಸಿನಕಾಯಿ 498 ಲಾಟ್‌ಗಳಿಗೆ ವ್ಯಾಪಾರಸ್ಥರು ಯಾವುದೇ ಬಿಡ್‌ ಮಾಡಲಿಲ್ಲ.

ಇದನ್ನೂ ಓದಿ : ನನ್ನ ಮಕ್ಕಳ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಮಾಡಲಾಗಿದೆ: ಪ್ರಿಯಾಂಕಾ ಗಾಂಧಿ 

 

Advertisement

Udayavani is now on Telegram. Click here to join our channel and stay updated with the latest news.

Next