Advertisement

Foreign EV ಕಂಪೆನಿಗಳಿಗೆ ಕೆಂಪುಹಾಸು; ತೆರಿಗೆ ಸೇರಿ ಹಲವು ವಿನಾಯಿತಿ: ಹೊಸ ನೀತಿಯಲ್ಲೇನಿದೆ?

01:19 AM Mar 16, 2024 | Team Udayavani |

ಹೊಸದಿಲ್ಲಿ: ನೂತನ ಎಲೆಕ್ಟ್ರಿಕ್‌ ವಾಹನ­ಗಳ(ಇವಿ) ನೀತಿಗೆ ಕೇಂದ್ರ ಸರಕಾರ ಶುಕ್ರವಾರ ಅನುಮೋದನೆ ನೀಡಿದೆ. ಇದು ಟೆಸ್ಲಾದಂತಹ ದೈತ್ಯ ಕಂಪೆನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿ­ಸಲು ಸಹಕಾರಿಯಾಗಲಿದೆ.
ಈ ನೂತನ ನೀತಿಯಿಂದಾಗಿ ದೇಶದಲ್ಲೇ ಉತ್ಪಾದನ ಘಟಕ ಸ್ಥಾಪಿಸುವುದರ ಜತೆಗೆ ಕನಿಷ್ಠ 4,150 ಕೋ. ರೂ. ಹೂಡಿಕೆ ಮಾಡುವ ವಿದೇಶಿ ಕಂಪೆನಿಗಳಿಗೆ ಇವಿ ವಾಹನಗಳ ಆಮದು ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ. ಈ ವಿದೇಶಿ ಕಂಪೆನಿ­ಗಳು 3 ವರ್ಷಗಳೊಳಗೆ ಭಾರತ­ದಲ್ಲಿ ಉತ್ಪಾದನ ಘಟಕ ಸ್ಥಾಪಿಸಬೇಕು. ಜತೆಗೆ ಶೇ.25ರಷ್ಟು ಬಿಡಿಭಾಗಗಳನ್ನು ದೇಶೀಯವಾಗಿ ಖರೀದಿಸಬೇಕು.

Advertisement

ಇನ್ನೊಂದೆಡೆ, ಈ ಕಂಪೆನಿಗಳು ವಾರ್ಷಿಕವಾಗಿ 8,000 ಎಲೆಕ್ಟ್ರಿಕ್‌ ವಾಹನ­ಗಳನ್ನು ಆಮದು ಮಾಡಿಕೊಳ್ಳಲು ಮಾತ್ರ ಅವಕಾಶ ಇರಲಿದೆ. ಜತೆಗೆ 29 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಇವಿ ವಾಹನಗಳ ಆಮದಿನ ಮೇಲೆ ಕೇವಲ ಶೇ.15ರಷ್ಟು ಆಮದು ಸುಂಕ ವಿಧಿಸಲಾಗುತ್ತದೆ. ಪಸ್ತುತ ಇತರ ಕಾರುಗಳಿಗೆ, ಅದರ ಬೆಲೆಗಳಿಗೆ ಅನುಸಾರವಾಗಿ ಶೇ.70ರಿಂದ ಶೇ.100ರಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ.

“ಈ ಕ್ರಮವು ಭಾರತೀಯ ಗ್ರಾಹ­ಕರಿಗೆ ಅತ್ಯಾಧುನಿಕ ತಂತ್ರ­ಜ್ಞಾನ ಪರಿಚಯಿಸುವುದರ ಜತೆಗೆ ಮೇಕ್‌ ಇನ್‌ ಇಂಡಿಯಾ ಉಪಕ್ರಮವನ್ನು ಉತ್ತೇಜಿಸುತ್ತದೆ. ಇವಿ ಉತ್ಪಾದಕರ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ. ಹೆಚ್ಚಿನ ಪ್ರಮಾ­ಣದ ಇವಿಗಳ ಉತ್ಪಾದನೆಗೆ ಕಾರಣವಾಗುತ್ತದೆ. ಉತ್ಪಾ ದನ ವೆಚ್ಚ, ಕಚ್ಚಾ ತೈಲ ಆಮದು ಕಡಿಮೆ ಮಾಡ ಲಿದೆ. ವಾಯುಮಾಲಿನ್ಯ ತಗ್ಗಿಸಲಿದೆ. ನಗರಗಳ‌ಲ್ಲಿ ಆರೋಗ್ಯ ಮತ್ತು ಪರಿಸರದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯ ಹೇಳಿದೆ.

ಹೊಸ ನೀತಿಯಲ್ಲೇನಿದೆ?
ಕನಿಷ್ಠ 4,150 ಕೋಟಿ ರೂ. ಹೂಡಿಕೆ ಮಾಡಿದರೆ ವಿದೇಶಿ ಕಂಪೆನಿಗಳಿಗೆ ಆಮದು ತೆರಿಗೆಯಲ್ಲಿ ವಿನಾಯಿತಿ ಆ ಕಂಪನಿಗಳು 3 ವರ್ಷಗಳೊಳಗೆ ಭಾರತದಲ್ಲಿ ಉತ್ಪಾದನ ಘಟಕ ಸ್ಥಾಪಿಸಬೇಕು.
ಘಟಕ ಸ್ಥಾಪಿಸುವ ಕಂಪೆನಿಗಳು ಶೇ.25ರಷ್ಟು ಬಿಡಿಭಾಗಗಳನ್ನು ದೇಶೀಯವಾಗಿ ಖರೀದಿಸಬೇಕು.
29 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಇವಿ ವಾಹನಗಳ ಆಮದಿನ ಮೇಲೆ ಕೇವಲ ಶೇ.15ರಷ್ಟು ಆಮದು ಸುಂಕ.
ವಾರ್ಷಿಕವಾಗಿ 8,000 ಎಲೆಕ್ಟ್ರಿಕ್‌ ವಾಹನಗಳನ್ನು ಆಮದು ಮಾಡಿಕೊಳ್ಳಲು ಮಾತ್ರ ಅವಕಾಶ.
ವಾಯುಮಾಲಿನ್ಯ ತಗ್ಗಿಸುವ ಜತೆಗೆ ಕಚ್ಚಾ ತೈಲ ಆಮದು ಕಡಿಮೆ ಮಾಡುವ ಉದ್ದೇಶ

Advertisement

Udayavani is now on Telegram. Click here to join our channel and stay updated with the latest news.

Next