Advertisement

ಸದ್ಯ ಹೊರ ಜಿಲ್ಲೆಗಳದ್ದೇ ಕುಚ್ಚಲಕ್ಕಿ

11:10 PM Jan 08, 2022 | Team Udayavani |

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಬೆಳೆದ ಭತ್ತ ಖರೀದಿಸಿ, ಕುಚ್ಚಲು ಅಕ್ಕಿಯನ್ನು ಪಡಿತರ ವ್ಯವಸ್ಥೆ (ಪಿಡಿಎಸ್‌) ಮೂಲಕ ಸ್ಥಳೀಯವಾಗಿ ವಿತರಿಸಲು ಕೇಂದ್ರ ಸರಕಾರ ಸಮ್ಮತಿಸಿದ್ದರೂ ಭತ್ತ ಅಲಭ್ಯತೆ ಹಿನ್ನೆಲೆಯಲ್ಲಿ ಈ ವರ್ಷ ಹೊರ ಜಿಲ್ಲೆಗಳ ಅಕ್ಕಿ ವಿತರಣೆಯಾಗಲಿದೆ.

Advertisement

ಉಡುಪಿ ಜಿಲ್ಲೆಗೆ ಸುಮಾರು 40 ಸಾವಿರ ಕ್ವಿಂಟಾಲ್‌ ಹಾಗೂ ದ.ಕ. ಜಿಲ್ಲೆಗೆ ಸುಮಾರು 50 ಸಾವಿರ ಕ್ವಿಂಟಾಲ್‌ ಅಕ್ಕಿ ಪ್ರತೀ ತಿಂಗಳು ಪಿಡಿಎಸ್‌ ವ್ಯವಸ್ಥೆಯಡಿ ವಿತರಿಸಬೇಕು. ಸದ್ಯ ಆಂಧ್ರ ಪ್ರದೇಶದ ಕುಚ್ಚಲಕ್ಕಿಯನ್ನು ನೀಡಲಾಗುತ್ತಿದೆ. ಇದರ ಬದಲಿಗೆ ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ಬೆಳೆಯುವ ಕುಚ್ಚಲಕ್ಕಿಯನ್ನು ವಿತರಿಸಲು ಸರಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ.

ಹೊರ ಜಿಲ್ಲೆಯ ಅಕ್ಕಿ
ಎಂಒ4, ಜಯ ಮತ್ತು ಜ್ಯೋತಿ ತಳಿಯ ಕುಚ್ಚಲು ಅಕ್ಕಿಗಳನ್ನು ಬೆಳಗಾವಿ, ಶಿವಮೊಗ್ಗ, ಮಂಡ್ಯ, ಮೈಸೂರು ಜಿಲ್ಲೆಯ ಕೆಲವು ಭಾಗದ ರೈತರು ಬೆಳೆಯುತ್ತಾರೆ. ಆದರೆ ಸದ್ಯಕ್ಕೆ ನಮ್ಮಲ್ಲಿ ಸಾಕಷ್ಟು ಭತ್ತವಿಲ್ಲದ ಕಾರಣ ಬೇರೆ ರಾಜ್ಯಗಳ ಮೊರೆ ಹೋಗಬೇಕಿದೆ.

ಬೊಮ್ಮಾಯಿ ಟ್ವೀಟ್‌ ಮೆಚ್ಚುಗೆ
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಳೆದ ಕುಚ್ಚಲಕ್ಕಿ ನೀಡಲು ಅನುಮತಿ ನೀಡಿರುವ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಧನ್ಯವಾದ ಗಳು. ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡಲು ಇದೊಂದು ಮಹತ್ವದ ಹೆಜ್ಜೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:ಪಂಜಾಬ್‌ನ ಪೊಲೀಸ್‌ ಮಹಾನಿರ್ದೇಶಕರೇ ಬದಲು; 100 ದಿನಗಳಲ್ಲಿ 3ನೇ ಡಿಜಿಪಿ

Advertisement

ಸದ್ಯ ಸ್ಥಳೀಯ ಕುಚ್ಚಲಕ್ಕಿ ಲಭ್ಯ ವಿಲ್ಲದ್ದರಿಂದ ಹೊರ ಜಿಲ್ಲೆಗಳ ಅಕ್ಕಿ ನೀಡಲಾಗುವುದು. ಸ್ಥಳೀಯ ಭತ್ತದ ಬೆಳ್ತಿಗೆ ಅಕ್ಕಿ ವಿತರಣೆಗೆ ಚಿಂತನೆ ನಡೆಸುತ್ತಿದ್ದೇವೆ.
-ಕೋಟ ಶ್ರೀನಿವಾಸ ಪೂಜಾರಿ,
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ

ಸ್ಥಳೀಯ ಭತ್ತ ಖರೀದಿ ಹಾಗೂ ಕುಚ್ಚ ಲಕ್ಕಿ ವಿತರಣೆಗೆ ಕೇಂದ್ರ ಸರಕಾರ ಒಪ್ಪಿರುವ ಕಾರಣ ಕರಾವಳಿಗರ ಬಹು ವರ್ಷದ ಬೇಡಿಕೆ ಈಡೇರಿದೆ.
– ವಿ. ಸುನಿಲ್‌ ಕುಮಾರ್‌,
ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next