Advertisement
ಬುಧವಾರ ಈ ಆದೇಶವನ್ನು ಜಾರಿ ಮಾಡಿದ್ದು,ಅಮೆರಿಕನ್ನರ ಉದ್ಯೋಗ ಭದ್ರತೆಗೆ ಯಾವುದೇ ಕುಂದು ತರದಂತೆ ನೋಡಿಕೊಳ್ಳುವುದೇ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ. ಹೀಗಾಗಿ, ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿದ್ದ ಸಾವಿರಾರು ಮಂದಿ ಭಾರತೀಯರೂ ಸೇರಿದಂತೆ ಅಮೆರಿಕನ್ನೇತರರಿಗೆ ಬೇಸರವಾಗಿದೆ. ಗ್ರೀನ್‌ಕಾರ್ಡ್ ವಿತರಣೆ ನಿರ್ಬಂಧ 60 ದಿನಗಳ ಕಾಲ ಜಾರಿಯಲ್ಲಿ ಇರಲಿದ್ದು, ಅನಂತರದ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಅಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಆದೇಶವು ಶಾಶ್ವತ ಪೌರತ್ವ ಬಯಸುವವರಿಗೆ ಮಾತ್ರ ಅನ್ವಯವಾಗಲಿದ್ದು, ತಾತ್ಕಾಲಿಕವಾಗಿ ದೇಶ ಪ್ರವೇಶಿಸುವವರಿಗಲ್ಲ ಎಂದು ತಿಳಿಸಿದ್ದಾರೆ. ದೇಶಿ ತಂತ್ರಜ್ಞಾನ ವೃತ್ತಿಪರರಿಗೆ, ಹೆಚ್-1ಬಿ ವಲಸೆ ರಹಿತ ಕೆಲಸದ ಮೇರೆಗೆ ಮತ್ತು ಕೃಷಿ ಉದ್ದೇಶಗಳಿಗಾಗಿ ಆಗಮಿಸುವ ಕಾಲೋಚಿತ ವಲಸೆ ಕಾರ್ಮಿಕರ ಮೇಲೂ ಪರಿಣಾಮ ಬೀರುದು ಎಂದು ಹೇಳಲಾಗಿದೆ. ಅಮೆರಿಕ ಪ್ರತಿವರ್ಷ ಗರಿಷ್ಠ 1,40,000 ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳನ್ನು ವಿತರಿಸಲಿದೆ. ಅದರಂತೆ, 2019ರ ಆರ್ಥಿಕ ವರ್ಷದಲ್ಲಿ ವರ್ಗ 1 (ಇಬಿ 1) 9,008 (ಭಾರತೀಯ ಪ್ರಜೆಗಳು), ವರ್ಗ 2 (ಇಬಿ 2) 2,908, ಮತ್ತು (ಇಬಿ 3) ವರ್ಗ 3 5,083 ಮಂದಿ ಭಾರತೀಯ ಪ್ರಜೆಗಳು ಗ್ರೀನ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. Advertisement
ಅಮೆರಿಕ: ಗ್ರೀನ್ ಕಾರ್ಡ್ ಗೂ ರೆಡ್ ಸಿಗ್ನಲ್
03:32 PM Apr 23, 2020 | sudhir |
Advertisement
Udayavani is now on Telegram. Click here to join our channel and stay updated with the latest news.