Advertisement

ಹಲವು ರಾಜ್ಯಗಳಲ್ಲಿ ವರುಣ ಪ್ರಹಾರ :ಕೇರಳದ ಏಳು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

10:58 AM Aug 10, 2020 | sudhir |

ತಿರುವನಂತಪುರ: ಕೇರಳಾದ್ಯಂತ ಧಾರಾ ಕಾರ ಮಳೆ ಮುಂದುವರಿದಿದ್ದು, ಮುಂದಿನ ಕೆಲವು ದಿನಗಳ ಕಾಲ ದೇವರ ನಾಡು ಭಾರೀ ಮಳೆಗೆ ತುತ್ತಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಅಲ್ಲದೆ, 7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

ಅಲಪ್ಪುಳ, ಕಣ್ಣೂರು, ಕಲ್ಲಿಕೋಟೆ, ವಯ ನಾಡ್‌, ಮಲಪ್ಪುರಂ, ಇಡುಕ್ಕಿ ಮತ್ತು ಕಾಸರಗೋಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಜನರಿಗೆ ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ. ಇಲ್ಲಿ 24 ಗಂಟೆಗಳ ಅವಧಿಯಲ್ಲಿ 204.5 ಮಿ.ಮೀ. ಮಳೆಯಾಗಲಿದ್ದು, ಇದು ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದೂ ಇಲಾಖೆ ಹೇಳಿದೆ.

ಭೂಕುಸಿತ ಸೇರಿದಂತೆ ಅಪಾಯಕಾರಿ ಪ್ರದೇಶಗಳಿಂದ ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುವಂತೆ ಜನರಿಗೆ ನಿರ್ದೇಶನ ನೀಡಲಾಗಿದೆ. ರಾತ್ರಿ ಹೊತ್ತು ಪ್ರಯಾಣ ಮಾಡ ದಂತೆ ಹಾಗೂ ಬೆಟ್ಟ-ಗುಡ್ಡಗಳ ಪ್ರದೇಶಗಳಲ್ಲಿ ಸಂಚರಿಸದಂತೆ ಸೂಚಿಸಲಾಗಿದೆ.

ಕೊಲ್ಲಂ, ಪಟ್ಟಣಂತಿಟ್ಟ, ಕೊಟ್ಟಯಂ, ಎರ್ನಾಕುಳಂ, ತೃಶ್ಶೂರ್‌, ಪಾಲಕ್ಕಾಡ್‌ಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಕೊಚ್ಚಿ ಹೋದ ಕಾರು: ರವಿವಾರ ನಾಲು ಮಣಿ ಕಟ್ಟು ಎಂಬಲ್ಲಿ ಕಾರೊಂದು ಸ್ಕಿಡ್‌ ಆಗಿ, ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ. ಸತತ 4 ಗಂಟೆಗಳ ಶೋಧ ಕಾರ್ಯದ ಬಳಿಕ ಕಾರು ಪತ್ತೆಯಾಗಿದ್ದು, ಒಳಗಿದ್ದ ಚಾಲಕ ಜಸ್ಟಿನ್‌ ಅಸುನೀಗಿದ್ದಾರೆ.

Advertisement

ಪಂಪಾ ಡ್ಯಾಂ ಗೇಟ್‌ ಓಪನ್‌: ಭಾರೀ ಮಳೆಯಿಂದಾಗಿ ಪಟ್ಟಣಂತಿಟ್ಟದ ಪಂಬಾ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಗರಿಷ್ಠ ಮಟ್ಟಕ್ಕೇರಿದ ಹಿನ್ನೆಲೆಯಲ್ಲಿ, ರವಿವಾರ ಡ್ಯಾಂನ 6 ಕ್ರಸ್ಟ್‌ಗೇಟ್‌ಗ‌ಳನ್ನು ತೆರೆದು ನೀರು ಬಿಡಲಾಗಿದೆ.

ಬುಧವಾರದವರೆಗೂ ಮಳೆ: ಇದೇ ವೇಳೆ, ದಿಲ್ಲಿಯಲ್ಲೂ ರವಿವಾರ ಮಳೆಯ ಸಿಂಚನವಾಗಿದ್ದು, ಬುಧವಾರ ದವರೆಗೂ ರಾಷ್ಟ್ರರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜತೆಗೆ, ಉತ್ತರಪ್ರದೇಶ, ರಾಜ ಸ್ಥಾನ, ಪಂಜಾಬ್‌, ಹರ್ಯಾಣ, ಉತ್ತರಾ ಖಂಡ, ಹಿಮಾಚಲ ಪ್ರದೇಶಗಳಲ್ಲೂ ಭಾರೀ ಮಳೆಯಾಗಲಿದೆ.

ಮುಂಬಯಿಯಲ್ಲಿ ಮತ್ತೆ ಇಂದಿನಿಂದ ಮಳೆ
ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಸೋಮ ವಾರದಿಂದ ಮುಂಬಯಿಯಲ್ಲಿ ಮತ್ತೆ ವರುಣ ಅಬ್ಬರಿಸಲಿದ್ದಾನೆ. ಮಧ್ಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ, ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗ ಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸಾವಿನ ಸಂಖ್ಯೆ 43ಕ್ಕೇರಿಕೆ
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಟೀ ಎಸ್ಟೇಟ್‌ ಕಾರ್ಮಿಕರ 20 ಮನೆಗಳನ್ನು ನೆಲಸಮ ಮಾಡಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ರವಿವಾರ ಮತ್ತೆ ಕೆಲವರ ಮೃತದೇಹ ಅವಶೇಷಗಳಡಿ ಪತ್ತೆಯಾಗಿದ್ದು, ಮೃತರ ಸಂಖ್ಯೆ 43ಕ್ಕೇ ರಿದೆ. ಒಟ್ಟಾರೆ 12 ಮಂದಿಯನ್ನು ರಕ್ಷಿಸಲಾ ಗಿದೆ. ಸರಕಾರದ ಮಾಹಿತಿ ಪ್ರಕಾರ, ಅವಘಡ ಸಂಭವಿಸುವ ವೇಳೆ ಸುಮಾರು 78 ಮಂದಿ ಇಲ್ಲಿ ವಾಸವಾಗಿದ್ದರು. ಘಟನೆ ನಡೆದು 3 ದಿನಗಳು ಕಳೆದರೂ, ಇನ್ನೂ 24 ಮಂದಿ ಪತ್ತೆಯಾಗಿಲ್ಲ. ಹೀಗಾಗಿ ಶ್ವಾನದ ಳದ ನೆರವು ಪಡೆಯಲು ಚಿಂತನೆ ನಡೆಸಿ ರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next