ಕೇರಳ: ನಿವಾರ್ ಚಂಡಮಾರುತ ಅಬ್ಬರಿಸಿದ ಬೆನ್ನಲ್ಲೇ, ಇದೀಗ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಈ ವಾರ ಮತ್ತೊಮ್ಮೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ತೀವ್ರಗೊಂಡಿದ್ದು, ಡಿಸೆಂಬರ್ 1 ರಿಂದ ತಮಿಳುನಾಡು, ಕೇರಳ ಮತ್ತು ದಕ್ಷಿಣ ಕರಾವಳಿ ಆಂಧ್ರಪ್ರದೇಶದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಹೀಗಾಗಿ ಕೇರಳದ ದಕ್ಷಿಣದ ನಾಲ್ಕು ಜಿಲ್ಲೆಗಳಾದ ತಿರುವನಂತಪುರಂ, ಕೊಲ್ಲಂ, ಪತ್ತಂತಿಟ್ಟ, ಮತ್ತು ಆಲಪ್ಪುಳ ಜಿಲ್ಲೆಗಳಿಗೆ ಡಿಸೆಂಬರ್ 3ರವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಅದೇ ದಿನ ಆರೆಂಜ್ ಅಲರ್ಟ್ ನೀಡಲಾಗಿದೆ.
ಇದನ್ನೂ ಓದಿ: 24ನೇ ಮಹಡಿಯಿಂದ ಬಿದ್ದು 17 ವರ್ಷದ ಬಾಲಕ ದಾರುಣ ಸಾವು
Related Articles
ಮತ್ತೊಂದೆಡೆ ತಮಿಳುನಾಡು ರಾಜ್ಯಕ್ಕೆ ನಿವಾರ್ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಭೀತಿ ಎದುರಾಗಿದ್ದು, ತಮಿಳುನಾಡಿನ ಕರಾವಳಿಯಲ್ಲಿ ಮತ್ತೆ ಅಲರ್ಟ್ ಘೋಷಿಸಲಾಗಿದೆ.
ಡಿಸೆಂಬರ್ 2 ರಂದು ಅಪ್ಪಳಿಸಲಿರುವ ಚಂಡಮಾರುತಕ್ಕೆ ‘ಬುರೆವಿ’ ಎಂದು ಹೆಸರಿಡಲಾಗಿದ್ದು, , ತಮಿಳುನಾಡು-ಪುದುಚೇರಿ ಕರಾವಳಿಯಲ್ಲಿ ಭಾಗಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿ. 2ರ ಸಂಜೆ ಶ್ರೀಲಂಕಾ ತೀರದಿಂದ ಮಾರುತಗಳು ಮುನ್ನುಗ್ಗಲಿವೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ: ಎರಡು ದಿನ ಮೊದಲೇ ಚರ್ಚೆಗೆ ಆಹ್ವಾನ !