Advertisement

ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ: ಕರಾವಳಿ ಕರ್ನಾಟಕದಿಂದ ಒಬ್ಬರೇ ಆಯ್ಕೆ

11:52 PM Aug 15, 2020 | mahesh |

ಉಡುಪಿ: ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸರಕಾರಿ ಪಿಯು ಉಪನ್ಯಾಸಕರ ನೇಮಕಾತಿಗೆ ಈಗ ಕಾರ್ಯಕಲ್ಪ ಬಂದಿದ್ದು ಸ್ಥಳ ನಿಯುಕ್ತಿ ಕೌನ್ಸೆಲಿಂಗ್‌ ಜಿಲ್ಲೆಗಳ ಡಿಡಿಪಿಯು ಕಚೇರಿಯ ಕೇಸ್ವಾನ್‌ ಕೇಂದ್ರಗಳಲ್ಲಿ ನಡೆಯುತ್ತಿದೆ.

Advertisement

ಹೈದರಾಬಾದ್‌ ಕರ್ನಾಟಕೇತರ ಪ್ರದೇಶಗಳಲ್ಲಿ ಆಯ್ಕೆಯಾದ ವಿವಿಧ ವಿಷಯಗಳ ಭಾವೀ ಉಪನ್ಯಾಸಕರಿಗೆ ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್‌ ಕೇಂದ್ರಗಳಲ್ಲಿ ಆ. 20ರಿಂದ ನೇಮಕಾತಿ ಕೌನ್ಸೆಲಿಂಗ್‌ ನಡೆಯಲಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ ಹಮ್ಮಿಕೊಳ್ಳಲಾಗಿದ್ದು, ಕೊಡಗು ಸಹಿತ ಕರಾವಳಿ ಕರ್ನಾಟಕದಿಂದ ಇಂಗ್ಲಿಷ್‌ ಉಪನ್ಯಾಸಕರಾಗಿ ಕೊಳಲಗಿರಿಯ ರಾಜೇಶ್‌ ಆನಂದ್‌ ಮಾತ್ರ ಆಯ್ಕೆಯಾಗಿದ್ದರೆ. ಇವರು ಈ ಹಿಂದೆ ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿದ್ದರು. ಇಂಗ್ಲಿಷ್‌ ವಿಷಯದ ಉತ್ತಮ ಸಂಪನ್ಮೂಲ ವ್ಯಕ್ತಿಯಾದ ಇವರು ಇಂಗ್ಲಿಷ್‌ ಸಾಹಿತ್ಯದಲ್ಲಿ ಪಿಎಚ್‌.ಡಿ. ಮಾಡುತ್ತಿದ್ದಾರೆ.

ಆಸಕ್ತಿ ಕ್ಷೀಣ
ಕರಾವಳಿ ಭಾಗದ ಮಂದಿ ಸ್ಪರ್ಧಾತ್ಮಕ ಪರೀಕ್ಷೆಗಳು, ಸರಕಾರಿ ನೇಮಕಾತಿಗಳಿಗೆ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪಿಯು ಉಪನ್ಯಾಸಕರ ನೇಮಕಾತಿಗೆ 50 ಮಂದಿ ಆಕಾಂಕ್ಷಿಗಳ ಅಗತ್ಯವಿತ್ತು. ಆದರೆ ಬೆರಳೆಣಿಕೆಯ ಮಂದಿ ಮಾತ್ರ ಕರಾವಳಿ ಭಾಗದಿಂದ ಅರ್ಜಿ ಸಲ್ಲಿಸಿದ್ದರು. ಬೆಂಗಳೂರು, ಮೈಸೂರು ಭಾಗಗಳಿಂದ ಅಧಿಕ ಮಂದಿ ಸ್ಪರ್ಧೆ ಬಯಸಿ ಬಂದು ಆಯ್ಕೆಯಾಗಿದ್ದಾರೆ ಎನ್ನುತ್ತಾರೆ ರಾಜೇಶ್‌ ಆನಂದ್‌.

Advertisement

Udayavani is now on Telegram. Click here to join our channel and stay updated with the latest news.

Next