Advertisement

Graduate ಶಿಕ್ಷಕರ ನೇಮಕಾತಿ; ಏನೇ ಹೇಳಿದರೂ ನ್ಯಾಯಾಂಗ ನಿಂದನೆ:ಸಚಿವ ಮಧು

03:17 PM Jan 05, 2024 | Team Udayavani |

ಶಿವಮೊಗ್ಗ:ಪದವೀಧರ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟಿನ ಆದೇಶ ಬಂದಿದ್ದು ಈಗ ಏನೇ ಹೇಳಿದರೂ ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

13 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಸುಪ್ರೀಂ ಕೋರ್ಟ್ ತಡೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ನಿನ್ನೆ ಸುಪ್ರೀಂ ಕೋರ್ಟಿನ ಆದೇಶ ಬಂದಿದ್ದು,ಆ ಕುರಿತು ತತ್ ಕ್ಷಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೇನೆ. ಇಲಾಖೆಯಿಂದ ಅಡ್ವೋಕೇಟ್ ಜನರಲ್ ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದೇವೆ. ತೆಗೆದುಕೊಳ್ಳುತ್ತಿದ್ದೇವೆ.ಕೋರ್ಟಿನಲ್ಲಿ ನಮ್ಮ ಕೆಲಸ ಏನಿದೆ ಅದನ್ನು ಮಾಡುತ್ತೇವೆ.ಈಗಾಗಲೇ ಹಿರಿಯ ವಕೀಲರಿಂದ ಕೇಸ್ ಮುಂದುವರಿಸುತ್ತಿದ್ದೇವೆ.ಏನು ಎಂಬುದು ಇನ್ನು ಎರಡು ದಿನಗಳಲ್ಲಿ ಗೊತ್ತಾಗಲಿದೆ ಎಂದರು.

ಈ ದೇಶದಲ್ಲಿ ನಮಗೆ ನಿಮಗೆ ಕೋರ್ಟ್ ಗೆ ಕೇಳುವ ಅಧಿಕಾರ ಇದೆಯಾ? ನಾನು ಏನು ಹೇಳಿದರೂ ನ್ಯಾಯಾಂಗ ನಿಂದನೆ ಆಗುತ್ತದೆ.ಈ ವಿಚಾರವಾಗಿ ಕೋರ್ಟಿನಲ್ಲಿ ಹೊರಾಡುತ್ತೇವೆ. ಅಡ್ವೋಕೇಟ್ ಜನರಲ್ ಏನು ನಿರ್ದೇಶನ ಕೊಡುತ್ತಾರೋ ಆ ರೀತಿ ಮಾಡುತ್ತೇವೆ ಎಂದರು.

ಪಾಪದ ಕೆಲಸ
ಬಿಜೆಪಿಯವರು ನನ್ನನ್ನು ಬಂಧಿಸಿ ಎಂದು ಹೋರಾಟ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಅವರೇನೋ ಪಾಪದ ಕೆಲಸ ಮಾಡಿರಬೇಕು. ನನ್ನನ್ನು ಬಂಧಿಸಿ ಎಂದು ಯಾರು ಹೇಳುತ್ತಾರೆ.ತಪ್ಪು ಮಾಡಿದವರು ಹೇಳುತ್ತಾರೆ.ಕಾನೂನಿನಲ್ಲಿ ಅವರು ತಪ್ಪು ಮಾಡಿದರೆ ಬಂಧಿಸಲಿ.ತಪ್ಪು ಮಾಡಿಲ್ಲ ಎಂದರೆ ಬಿಟ್ಟುಬಿಡಲಿ. ನಮ್ಮ ದೇಶದಲ್ಲಿ ಎಲ್ಲಾ ಜಾತಿ ಧರ್ಮಗಳು ಬದುಕಿ ಬಾಳುವ ವ್ಯವಸ್ಥೆ ಇದೆ. ಸರಕಾರಗಳು ಚುನಾಯಿತವಾಗಿರುವುದರಿಂದ ಸರಕಾರದ ನಿರ್ಧಾರಗಳಿಗೆ ಗೌರವ ಕೊಡಬೇಕಾಗುತ್ತದೆ. ಚುನಾವಣೆಗಾಗಿ ಈ ರೀತಿಯ ಹೋರಾಟಗಳು ಮಾಡುತ್ತಿದ್ದಾರೆ” ಎಂದರು.

”ಹಿಂದೂ ಕಾರ್ಯಕರ್ತ ಅಂತ ಕೇಸ್ ಇದೆಯಾ? ಮಾಧ್ಯಮದಲ್ಲೂ ಬಂಧನವಾದವರ ಹಿನ್ನೆಲೆ ಏನು ಎನ್ನುವುದನ್ನು ತೋರಿಸಿದ್ದೀರಿ.ಕಾನೂನು ರೀತಿಯಲ್ಲಿ ಎಲ್ಲಾ ಆಗಿದೆ” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next