ಭಾರತೀಯ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪಾಸಾಗಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾಗಿ ಹೊರಬರುತ್ತಿರುವವರಲ್ಲಿ ಎಂಜಿನಿಯರ್‌ಗಳು ಮತ್ತು ವೈದ್ಯರೇ ಹೆಚ್ಚಾಗಿದ್ದಾರೆ. ಈ ಬಗ್ಗೆ ಸಂಸತ್‌ನ ಸ್ಥಾಯಿ ಸಮಿತಿ ಆತಂಕ ವ್ಯಕ್ತಪಡಿಸಿದ್ದು, ನಾವು ಈ ಮೂಲಕ ಉತ್ತಮ ಎಂಜಿನಿಯರ್‌ಗಳು ಮತ್ತು ವೈದ್ಯರ ಸೇವೆ ಕಳೆದುಕೊಳ್ಳುತ್ತಿದ್ದೇವೆ ಎಂದಿದೆ. ಹಾಗಾದರೆ, ಎಷ್ಟು ಮಂದಿ ಈ ವಲಯದಿಂದ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ? ಇಲ್ಲಿದೆ ಮಾಹಿತಿ…
ಎಂಜಿನಿಯರ್‌ಗಳೇ ಹೆಚ್ಚು
ಇತ್ತೀಚೆಗಷ್ಟೇ ಸಂಸತ್‌ನ ಸ್ಥಾಯಿ ಸಮಿತಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದೆ. ಅದರ ಪ್ರಕಾರ, 2011ರಿಂದ 2020ರ ವರೆಗೆ ದೇಶದಲ್ಲಿ ಒಟ್ಟು 10,679 ಮಂದಿ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ 5,880 ಅಥವಾ ಶೇ.55.06 ಮಂದಿ ಎಂಜಿನಿಯರ್‌ಗಳೇ ಆಗಿದ್ದಾರೆ. 1,130 ಮಂದಿ ಅಥವಾ ಶೇ.10.58ರಷ್ಟು ಮಂದಿ ವೈದ್ಯರಿದ್ದಾರೆ. ಅಂದರೆ, ಈ ಎರಡೂ ವಲಯದಿಂದ 7,010 ಮಂದಿ ಅಥವಾ ಶೇ.65.64ರಷ್ಟು ಮಂದಿ ನಾಗರಿಕ ಸೇವೆಗೆ ಸೇರಿದ್ದಾರೆ.
ಮಾನವಿಕ ವಿಭಾಗಗಳಿಂದ ಕಡಿಮೆ
ವಿಚಿತ್ರವೆಂದರೆ, ಮೊದಲೆಲ್ಲಾ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಹೆಚ್ಚು ಪಾಸಾಗುತ್ತಿದ್ದುದೇ ಮಾನವಿಕ ವಿಭಾಗಗಳಿಗೆ ಸೇರಿದ ಅಭ್ಯರ್ಥಿಗಳು. ಅಂದರೆ, ಕಲೆ, ವಿಜ್ಞಾನ, ವಾಣಿಜ್ಯ ಸೇರಿದಂತೆ ಇತರೆ ವಿಭಾಗಗಳ ಅಭ್ಯರ್ಥಿಗಳು ಹೆಚ್ಚಾಗಿ ಸೇರ್ಪಡೆಯಾಗುತ್ತಿದ್ದರು. ಈಗ ಕೇವಲ 2,835 ಅಥವಾ ಶೇ.26.54ರಷ್ಟು ಮಾತ್ರ ಅಭ್ಯರ್ಥಿಗಳು ನಾಗರಿಕ ಸೇವೆಗೆ ಸೇರ್ಪಡೆಯಾಗುತ್ತಿದ್ದಾರೆ. ಉಳಿದಂತೆ 834 ಮಂದಿ ಅಥವಾ ಶೇ.7.8ರಷ್ಟು ಮಂದಿ ಇತರೆ ವಿಭಾಗಕ್ಕೆ ಸೇರಿದವರು.
ಎಂಜಿನಿಯರ್‌ಗಳ ಆಯ್ಕೆ
2012 – 408
2016 – 717
2017 – 699
ವೈದ್ಯರ ಆಯ್ಕೆ
2014 – 183
2020 – 33