Advertisement

ರಾಹುಲ್ ಸ್ಥಾನಕ್ಕೆ ಯುವ ನಾಯಕರನ್ನು ನೇಮಿಸಿ

10:44 AM Jul 08, 2019 | mahesh |

ಚಂಡೀಗಡ: ದೇಶವ್ಯಾಪಿ ವರ್ಚಸ್ಸು ಹೊಂದಿರುವ ಒಬ್ಬ ಯುವ ನಾಯಕನನ್ನು ಪಕ್ಷದ ಅಧ್ಯಕ್ಷ ಹುದ್ದೆಗೇರಿಸಿದರಷ್ಟೇ ಕಾಂಗ್ರೆಸ್‌ ಪಕ್ಷವು ಮತ್ತೆ ಪುಟಿದೇಳಲು ಸಾಧ್ಯ ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾ.ಅಮರೀಂದರ್‌ ಸಿಂಗ್‌ ಹೇಳಿದ್ದಾರೆ. ಈ ಮೂಲಕ, ಪಕ್ಷದ ಹೈಕಮಾಂಡ್‌ ಹಿರಿಯ ನಾಯಕರಿಗೆ ಅಧ್ಯಕ್ಷ ಹುದ್ದೆ ನೀಡುವ ಬದಲು ಯುವ ನಾಯಕರಿಗೆ ಮಣೆ ಹಾಕಲಿ ಎಂಬ ಸಲಹೆಯನ್ನು ಅವರು ನೀಡಿದ್ದಾರೆ.

Advertisement

ರಾಹುಲ್ ಗಾಂಧಿ ಅವರ ರಾಜೀನಾಮೆ ದುರದೃಷ್ಟಕರ. ಈಗ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ)ಯು ವರ್ಚಸ್ಸುಳ್ಳ ಹಾಗೂ ದೇಶಾದ್ಯಂತ ಜನರಲ್ಲಿ ಹುರುಪು ಮೂಡಿಸುವಂಥ ಹೊಸ ತಲೆಮಾರಿನ ನಾಯಕನನ್ನು ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಬೇಕು. ಈಗಾಗಲೇ ರಾಹುಲ್ ಅವರು ಯುವ ನಾಯಕತ್ವಕ್ಕೆ ದಾರಿ ತೋರಿಸಿದ್ದಾರೆ. ಅಲ್ಲದೆ ಭಾರತವು ಅತಿದೊಡ್ಡ ಯುವ ಜನಸಂಖ್ಯೆಯುಳ್ಳ ದೇಶವಾಗಿದೆ. ಹೀಗಾಗಿ, ಯುವ ನಾಯಕರಿಗೆ ಅವಕಾಶ ಕಲ್ಪಿಸಿದರೆ, ಅವರು ಜನರ ಬಯಕೆಗಳು ಹಾಗೂ ನಿರೀಕ್ಷೆಗಳನ್ನು ಹೆಚ್ಚು ಪರಿಣಾಮ ಕಾರಿಯಾಗಿ ಅರ್ಥಮಾಡಿಕೊಳ್ಳಬಲ್ಲರು. ಪಕ್ಷದ ನಾಯಕತ್ವದಲ್ಲಿ ಆಗುವ ಯಾವುದೇ ಬದಲಾವಣೆಯೂ ಭಾರತದ ಸಾಮಾಜಿಕ ವಾಸ್ತವವನ್ನು ಪ್ರತಿಬಿಂಬಿಸುವಂತಿರಬೇಕು ಎಂದೂ ಹೇಳಿದ್ದಾರೆ ಕ್ಯಾಪ್ಟನ್‌.

ಸಭೆಗೆ ರಾಹುಲ್ ಗೈರು: ಕಾಂಗ್ರೆಸ್‌ನಲ್ಲಿ ನಾಯಕತ್ವದ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಪಕ್ಷದ ಹಿರಿಯ ನಾಯಕರು ದೆಹಲಿಯಲ್ಲಿ ಸಭೆ ಸೇರಿ, ಮುಂದಿನ ನಡೆಗಳ ಬಗ್ಗೆ ಚರ್ಚಿಸಿ ದ್ದಾರೆ. ಆದರೆ, ಈ ಸಭೆಗೆ ರಾಹುಲ್ ಗೈರಾ ಗಿದ್ದು, ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ಯಲ್ಲಿ ತಾನು ಯಾವುದೇ ಪಾತ್ರ ವಹಿಸಲು ಬಯಸುವುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next