ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಮುದರಂಗಡಿ ಗ್ರಾ. ಪಂ. ವ್ಯಾಪ್ತಿಯಲ್ಲಿನ ಕೊಳವೆ ಬಾವಿಗಳನ್ನು ಪುನಃಶ್ಚೇತನಗೊಳಿಸಲು ಮುಂದಾಗಿದೆ. ಪಂಚಾಯತ್‌ಗೆ ಈ ಕುರಿತಾದ ದೃಢೀಕರಣ ಪತ್ರವನ್ನು ಜೂ. 17ರಂದು ಹಸ್ತಾಂತರಿಸಿದೆ.
ಮುದರಂಗಡಿ ಪಂಚಾಯತ್ ವಠಾರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು ದೃಢೀಕರಣ ಪತ್ರವನ್ನು ಪಂಚಾಯತ್‌ಅಧ್ಯಕ್ಷ ಡೇವಿಡ್ ಡಿ’ಸೋಜ ಅವರಿಗೆ ಹಸ್ತಾಂತರಿಸಿದರು.
ಜಿಲ್ಲೆಯಲ್ಲಿನ ನೀರಿನ ಅಭಾವವನ್ನು ಪರಿಗಣಿಸಿ, ಮುಂಬರುವ ಮಳೆಗಾಲದಲ್ಲಿ ನೀರನ್ನು ಸಂರಕ್ಷಿಸುವ ಕ್ರಮವನ್ನು ಕೈಗೊಳ್ಳಬೇಕಾಗಿರುವುದರಿಂದ ಕೊಳವೆ ಬಾವಿ ರಿಚಾರ್ಜ್ ಕೆಲಸವನು ್ನಅದಾನಿ ಸಂಸ್ಥೆಯು ಸಿಎಸ್‌ಆರ್ ಯೋಜನೆಯಡಿಯಲ್ಲಿ ಹಮ್ಮಿಕೊಳ್ಳುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ತಿಳಿಸಿದರು.
ಗ್ರಾ. ಪಂ. ಅಧ್ಯಕ್ಷ ಡೇವಿಡ್ ಡಿ’ಸೋಜ ಮಾತನಾಡಿ ಅದಾನಿ ಯುಪಿಸಿಎಲ್ ಸಂಸ್ಥೆಯು ಕಾಮಗಾರಿಯ ಕುರಿತ ತಮ್ಮ ಮನವಿ ಪರಿಗಣಿಸಿ ಪಂಚಾಯತ್ ವ್ಯಾಪ್ತಿಯ 10 ಬೋರ್‌ವೆಲ್ಗಳನ್ನು ಪುನಃಶ್ಚೇತನಗೊಳಿಸುತ್ತಿರುವುದಕ್ಕಾಗಿ ಅಭಿನಂದಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್, ಪಂಚಾಯತ್‌ಉಪಾಧ್ಯಕ್ಷೆ ಜಯಂತಿ ಪೂಜಾರ್ತಿ, ಪಂಚಾಯತ್ ಸದಸ್ಯರಾದ ಶೋಭಾ ಫೆರ್ನಾಂಡಿಸ್, ವಿನೋದಾ ಪೂಜಾರ್ತಿ, ಗ್ಯಾಬ್ರಿಯಲ್ ಮಥಾಯಿಸ್, ಗ್ರಾಮಸ್ಥರಾದ ಜಯಂತ್ ಪೂಜಾರಿ, ಯುಪಿಸಿಎಲ್ ಸಂಸ್ಥೆಯ ಎಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್. ಜೇರೆ, ಅದಾನಿ ಫೌಂಡೇಶನ್‌ನ ಸಿಬಂದಿ ವರ್ಗದವರಾದ ವಿನೀತ್ ಅಂಚನ್, ಸುಕೇಶ್ ಸುವರ್ಣ, ಧೀರಜ್ ದೇವಾಡಿಗ, ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.