Advertisement

ನೈಸರ್ಗಿಕ ಕೃಷಿಯಿಂದ ಪುನಶ್ಚೇತನ  

04:13 PM Feb 09, 2021 | Team Udayavani |

ಕೊಟ್ಟಿಗೆಹಾರ: ನೈಸರ್ಗಿಕ ಕೃಷಿಯಿಂದ ಕೃಷಿ ಕ್ಷೇತ್ರದ ಪುನಶ್ಚೇತನ ಸಾಧ್ಯವಾಗುತ್ತದೆ ಎಂದು ನೈಸರ್ಗಿಕ ಕೃಷಿಕರಾದ ಚಂದ್ರಶೇಖರ್‌ ನಾರಣಾಪುರ ಹೇಳಿದರು.

Advertisement

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ “ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು’ ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಸಹಜ ಕೃಷಿ ಕೃತಿಯ ಬಗ್ಗೆ ಅವರು ಮಾತನಾಡಿದರು.

ನೆಲದ ಉಳುಮೆ ಇಲ್ಲದೆ, ರಾಸಾಯನಿಕ ಗೊಬ್ಬರ ಬಳಕೆ ಇಲ್ಲದೆ, ಕ್ರಿಮಿನಾಶಕಗಳ ಸಿಂಪಡಣೆ ಇಲ್ಲದೆ, ಕಳೆಗಳ ನಿರ್ಮೂಲನೆ ಇಲ್ಲದೆ ಇರುವುದು ಪುಕೋಕ ಅವರ ನೈಸರ್ಗಿಕ ಕೃಷಿ ನಾಲ್ಕು ತತ್ವಗಳಾಗಿವೆ. ಪುಕೋಕ ಅವರ ಕೃಷಿ ಚಿಂತನೆಗಳು ಇಂದಿಗೂಪ್ರಸ್ತುತ ಎಂಬುದನ್ನು ತೇಜಸ್ವಿ ಅವರು  ಸಹಜ ಕೃಷಿ ಕೃತಿಯಲ್ಲಿ ವಿವರಿಸಿದ್ದಾರೆ ಎಂದರು.

ನೈಸರ್ಗಿಕ ಕೃಷಿ ಎಂದರೆ ಯಾರನ್ನೂ ಅವಲಂಬಿಸದೆ ಸ್ವಯಂ ಭೂಮಿಯನ್ನು ಫಲವತ್ತತೆ ಮಾಡುವ ಕ್ರಿಯೆ. ನೈಸರ್ಗಿಕ ಕೃಷಿ ಸದೃಢವಾದ ಭೂಮಿಯ ಸುಸ್ಥಿರತೆಯನ್ನು ಬೆಳೆಸುವ ರೈತರ ಬದುಕನ್ನು ಸುಸ್ಥಿತಗೊಳಿಸುವಂತಹ ಕೃಷಿ ಪದ್ಧತಿಯಾಗಿದೆ. ತೇಜಸ್ವಿ ಅವರು ಸಹಜ ಕೃಷಿ ಕೃತಿಯಲ್ಲಿ ಆಡಳಿತಾತ್ಮಕವಾದ ವಿಡಂಬಣೆಗಳು, ರೈತರ ದಾಸ್ಯಸ್ಥಿತಿ, ರಾಸಾಯನಿಕ ಕೃಷಿಯಿಂದ ಆದಂತಹ ಅನಾಹುತಗಳನ್ನು ಸವಿಸ್ಥಾರವಾಗಿ ವಿವರಿಸಿದ್ದಾರೆ ಎಂದರು.

ಇದನ್ನೂ ಓದಿ:ಇನ್ನೆರಡು ದಿನದಲ್ಲಿ ಸಾರಿಗೆ ನೌಕರರ ಸಂಬಳ ನೀಡುತ್ತೇವೆ: ಲಕ್ಷಣ ಸವದಿ

Advertisement

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್‌, ಕಾರ್ಯಕ್ರಮದ ಸಂಯೋಜಕ ನಂದೀಶ್‌ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್‌ ಹ್ಯಾರಿಸ್‌, ಪ್ರಜ್ವಲ್‌, ಪ್ರತಿಷ್ಠಾನದ ಸಿಬ್ಬಂದಿ ಸತೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next