Advertisement
ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೆಲವು ಸಂಸ್ಥೆಗಳು ಬಂಡವಾಳ ಸಂಗ್ರಹಿಸಿವೆ ಮತ್ತು ಇನ್ನು ಕೆಲವು ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿವೆ. ಕೊರೊನಾ ಪರಿಸ್ಥಿತಿ ನಿವಾರಣೆಯಾದ ಬಳಿಕ ಕೇಂದ್ರ ಸರಕಾರ ಹಲವು ಕ್ರಮಗಳನ್ನು ಪ್ರಕಟಿಸಬೇಕಿದೆ. ಸೋಂಕಿನ ಪರಿಸ್ಥಿತಿಯ ಈ ವೇಳೆಯೂ ದೇಶ ಅತ್ಯುತ್ತಮ ವಿತ್ತೀಯ ನಿಲುವುಗಳನ್ನು ಅನುಷ್ಠಾನಿಸಿದೆ ಎಂದಿದ್ದಾರೆ.
ಇದೇವೇಳೆ ಆರ್ಥಿಕತೆಯಲ್ಲಿ ಚೇತರಿಕೆ ಉಂಟು ಮಾಡಲು ಕೇಂದ್ರ ಸರಕಾರವು ಇನ್ನೊಂದು ಸುತ್ತಿನ ಪ್ರೋತ್ಸಾಹಕ ಪ್ಯಾಕೇಜ್ ಘೋಷಿ ಸುವ ಸಾಧ್ಯತೆ ಇದೆ ಎಂದು ವಿತ್ತೀಯ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿರುವುದಾಗಿ ಆಂಗ್ಲ ಪತ್ರಿಕೆ ಯೊಂದು ವರದಿ ಮಾಡಿದೆ. ಈ ವಾರದ ಆರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಇಂಥ ಸಾಧ್ಯತೆಯ ಬಗ್ಗೆ ಮಾತನಾಡಿದ್ದರು.