Advertisement
ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ಹೆಚ್ಚಿನ ಅನುದಾನ ಕೊಟ್ಟಿದ್ದರೆ ಅಂಕಿಅಂಶ ಸಹಿತ ತಿಳಿಸಲಿ. ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರದಿಂದ ಈವರೆಗೆ ನಯಾಪೈಸೆ ಕೊಟ್ಟಿಲ್ಲ. ಜಿಎಸ್‌ಟಿ ಹಣ ನಮಗೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.ಸಂಸದ ಡಿ.ಕೆ. ಸುರೇಶ್ ಹೇಳಿಕೆಯನ್ನು ಬೇರೆ ರೀತಿ ಅರ್ಥೈಸಲಾಗುತ್ತಿದೆ. ನಮ್ಮ ಭಾಗದಲ್ಲಿ ಅಭಿವೃದ್ಧಿ ಕುಂಠಿತ ಆಗುತ್ತಿವೆ. ಒಂದೇ ಭಾಗಕ್ಕೆ ಹೆಚ್ಚಿನ ಅನುದಾನ ಕೊಡುತ್ತಿದ್ದಾರೆ. ಹೀಗಾದರೆ ಬೇರೆ ರಾಷ್ಟ್ರ ಬೇಕು ಎಂದು ಜನ ದಂಗೆ ಏಳಬಹುದು ಎಂಬ ದಾಟಿಯಲ್ಲಿ ಅವರು ಹೇಳಿದ್ದಾರೆ. ಪ್ರತ್ಯೇಕ ರಾಷ್ಟ್ರ ಆಗಬೇಕೆಂದು ಹೇಳಿಲ್ಲ. ಅವರ ಹೇಳಿಕೆ ತಿರುಚುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಮದ್ಯದ ದರವನ್ನು ಹೆಚ್ಚಿಸಿಲ್ಲ. ಅಂಥ ಯೋಚನೆಯೂ ಇಲ್ಲ. ಮದ್ಯದ ದರ ಹೆಚ್ಚಿಸುವುದಾದರೆ ಮೊದಲೇ ಹೇಳುತ್ತೇವೆ. ಸದ್ಯ ಶೇ.10ರಷ್ಟು ಬಿಯರ್ ಬೆಲೆ ಹೆಚ್ಚಾಗಿದೆ. ಅಬಕಾರಿ ಇಲಾಖೆಗೆ ಯಾವುದೇ ಟಾರ್ಗೆಟ್ ಕೊಟ್ಟಿಲ್ಲ ಎಂದು ಹೇಳಿದರು.