Advertisement

ಮಹಾರಾಷ್ಟ್ರದಲ್ಲಿ ದಾಖಲೆಯ ಹತ್ತಿ ಸಂಗ್ರಹ

03:18 PM Jul 25, 2020 | Suhan S |

ಮುಂಬಯಿ, ಜು. 24: ಕೋವಿಡ್ ಸೋಂಕು ಮತ್ತು ಮಾನ್ಸೂನ್‌ ಆರಂಭದ ಹೊರತಾಗಿಯೂ ಮಹಾರಾಷ್ಟ್ರದಲ್ಲಿ 218.73 ಲಕ್ಷ ಕ್ವಿಂಟಲ್‌ ಹತ್ತಿ ಸಂಗ್ರಹಿಸಲಾಗಿದೆ. ಇದು ಕಳೆದ ಹತ್ತು ವರ್ಷಗಳಲ್ಲೇ ಅತ್ಯಧಿಕ ಹತ್ತಿ ಸಂಗ್ರಹವಾಗಿದೆ ಎಂದು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಿಳಿಸಲಾಯಿತು ಎಂದು ಮುಖ್ಯಮಂತ್ರಿ ಕಚೇರಿಯ (ಸಿಎಂಒ) ಹೇಳಿಕೆ ತಿಳಿಸಿದೆ. ಖರೀದಿಸಿದ ಹತ್ತಿಯ ಮೌಲ್ಯ 11,776.89 ಕೋಟಿ ರೂ. ಆಗಿದ್ದು, ಅದರಲ್ಲಿ ರೈತರಿಗೆ ಈವರೆಗೆ 11,029.47 ಕೋಟಿ ರೂ. ಪಾವತಿಸಲಾಗಿದೆ.

Advertisement

ಕೋವಿಡ್ ಪ್ರಕೋಪಕ್ಕೆ ಮೊದಲು ಸಿಸಿಐ ಮತ್ತು ರಾಜ್ಯ ಹತ್ತಿ ಒಕ್ಕೂಟ ಕ್ರಮವಾಗಿ 91.90 ಲಕ್ಷ ಕ್ವಿಂಟಲ್‌ ಮತ್ತು 54.03 ಲಕ್ಷಕ್ವಿಂಟಲ್‌ ಹತ್ತಿಯನ್ನು ಖರೀದಿಸಿವೆ ಎಂದು ಅದು ಹೇಳಿದೆ. ಕೋವಿಡ್‌ ಪ್ರಕೋಪದ ಸಮಯದಲ್ಲಿ ಮಾರುಕಟ್ಟೆ ದರಗಳು ಸರಕಾರದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗಿಂತ ಕಡಿಮೆಯಾಗಿರುವುದರಿಂದ ರೈತರು ಹತ್ತಿವನ್ನು ಸರಕಾರಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಆದ್ಯತೆ ನೀಡಿದರು. ಕೋವಿಡ್‌ ಸಮಯದಲ್ಲಿ ಸಿಸಿಐ 35.70 ಲಕ್ಷ ಕ್ವಿಂಟಲ್‌ ಮತ್ತು ರಾಜ್ಯ ಹತ್ತಿ ಒಕ್ಕೂಟ 36.75 ಲಕ್ಷ ಕ್ವಿಂಟಲ್‌ ಹತ್ತಿಯನ್ನು ಖರೀದಿಸಿದೆ ಎಂದು ಅದು ಹೇಳಿದೆ. ಒಟ್ಟಾರೆಯಾಗಿ ಸರಕಾರ ಮತ್ತು ಖಾಸಗಿ ವ್ಯಾಪಾರಿಗಳು ಒಟ್ಟಾಗಿ 418.8 ಲಕ್ಷ ಕ್ವಿಂಟಲ್‌ ಹತ್ತಿಯನ್ನು ಖರೀದಿಸಿದ್ದಾರೆ. 8,64,072 ರೈತರಿಂದ ಖರೀದಿಯನ್ನು ಮಾಡಲಾಗಿದೆ.

ನಿಸರ್ಗಾ ಚಂಡಮಾರುತ ಪೀಡಿತರಿಗೆ ಪರಿಹಾರ ಘೊಷಣೆ : ರತ್ನಗಿರಿ ಮತ್ತು ರಾಯಗಢ ಜಿಲ್ಲೆಗಳಲ್ಲಿ ನಿಸರ್ಗಾ ಚಂಡಮಾರುತದಿಂದ ಅಡಿಕೆ ಮತ್ತು ತೆಂಗಿನ ತೋಟಗಳಿಗೆ ಉಂಟಾದ ಹಾನಿಗೆ ಪರಿಹಾರವನ್ನು ನೀಡಲು ಗುರುವಾರ ನಡೆದ ಸಭೆಯಲ್ಲಿ ರಾಜ್ಯ ಸಚಿವ ಸಂಪುಟವು ನಿರ್ಧರಿಸಿತು. ಪ್ರತಿ ಹೆಕ್ಟೇರ್‌ಗೆ 50,000 ರೂ.ಗಳ ಪರಿಹಾರದ ಬದಲು ನಾಶವಾದ ಪ್ರತಿ ಅಡಿಕೆ ಮರಕ್ಕೆ 50 ರೂ. ಮತ್ತು ನಾಶವಾದ ತೆಂಗಿನ ಮರಕ್ಕೆ 250 ರೂ.ಗಳ ಪರಿಹಾರವನ್ನು ನೀಡಲು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next