Advertisement

ದೇಶದಲ್ಲಿ ಒಂದೇ ದಿನ ದಾಖಲೆಯ 52,123 ಜನರಿಗೆ ಸೋಂಕು ದೃಢ: 10 ಲಕ್ಷ ಮಂದಿ ಗುಣಮುಖ

01:47 PM Jul 30, 2020 | Mithun PG |

ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದೇ ಮೊದಲ ಬಾರಿಗೆ ಕಳೆದ 24 ಗಂಟೆಯಲ್ಲಿ 52,123 ಹೊಸ ಪ್ರಕರಣಗಳು ದಾಖಲಾಗಿದ್ದು 775 ಜನರು ಮೃತಪಟ್ಟಿದ್ದಾರೆ.

Advertisement

ಜು.23ರಂದು 50,904 ಕೇಸ್ ಹಾಗೂ 1,1790 ಸಾವು ದಾಖಲಾಗಿದ್ದು  ಈವರೆಗಿನ ಗರಿಷ್ಠ ಎನಿಸಿಕೊಂಡಿತ್ತು. ಆ ಬಳಿಕ ದೈನಂದಿನ ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗಿತ್ತಾದರೂ ಬುಧವಾರ ಮತ್ತೊಮ್ಮೆ 50 ಸಾವಿರ ಗಡಿ ದಾಟಿ ಹೊಸ ದಾಖಲೆ ಸೃಷ್ಟಿಯಾಗಿದೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,83,792 ಕ್ಕೆ ಜಿಗಿದಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ 5.28 ಲಕ್ಷದಷ್ಟಿದೆ.  ಸುಮಾರು 10.20 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆ ಮೃತಪಟ್ಟವರ ಸಂಖ್ಯೆ 34 ಸಾವಿರದ ಗಡಿ ದಾಡಿದೆ.

ಮಹಾರಾಷ್ಟ್ರದಲ್ಲಿ 3.9 ಲಕ್ಷ ಮಂದಿಗೆ ಸೊಂಕು ತಗುಲಿದ್ದು 14,165 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 2.2 ಲಕ್ಷ ಮಂದಿಗೆ ಸೋಕು ದೃಢವಾಗಿದ್ದು, 3,659 ಜನರು ಬಲಿಯಾಗಿದ್ದಾರೆ. ದೆಹಲಿಯಲ್ಲಿ ಕೂಡ ಸೋಂಕಿನ ಆರ್ಭಟ ಮುಂದುವರೆದಿದ್ದು 1.3 ಲಕ್ಷ ಜನರಿಗೆ ವೈರಾಣು ದೃಢವಾಗಿ 3,881 ಮಂದಿ ಪ್ರಾಣತ್ಯೆಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next