Advertisement

Record;ಅಮರನಾಥ ಯಾತ್ರೆಗೆ 4.65 ಲಕ್ಷ ಭಕ್ತರು

12:46 AM Jul 30, 2024 | Team Udayavani |

ಶ್ರೀನಗರ: ಈ ವರ್ಷದ ಅಮರನಾಥ ಯಾತ್ರೆಯಲ್ಲಿ 4.65 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು, ಕಳೆದ ವರ್ಷದ ದಾಖಲೆಯನ್ನು ಮೀರಿಸಿದೆ. ಮಾಹಿತಿಯ ಪ್ರಕಾರ, ಸೋಮವಾರ ಒಂದೇ ದಿನ 7,500 ಮಂದಿ ಭಕ್ತರು ಈ 3,880 ಮೀ. ಎತ್ತರದಲ್ಲಿರುವ ಶಿವಲಿಂಗದ ದರ್ಶನ ಪಡೆದಿದ್ದಾರೆ. ಇದರೊಂದಿಗೆ ಈ ವರ್ಷ 4,66,342 ಮಂದಿ ಯಾತ್ರೆ ಕೈಗೊಂಡಂತಾಗಿದೆ. ಕಳೆದ ವರ್ಷ 4.59 ಲಕ್ಷ ಮಂದಿ ಅಮರನಾಥ ಯಾತ್ರೆ ಕೈಗೊಂಡಿದ್ದರು. 31ನೇ ದಿನವಾದ ಸೋಮವಾರ 4,364 ಪುರುಷರು, 1791 ಮಹಿಳೆಯರು, 148 ಸಾಧುಗಳು ಹಾಗೂ ಒಬ್ಬ ಸಾಧ್ವಿ ಅಮರನಾಥ ದರ್ಶನ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next