Advertisement

ದಾಖಲೆಯ 1 ಲಕ್ಷ ನೇಮಕ ಪತ್ರ ಹಸ್ತಾಂತರ : ಪ್ರಧಾನಿ ಮೋದಿ

12:46 AM Feb 13, 2024 | Team Udayavani |

ಹೊಸದಿಲ್ಲಿ: ಹಿಂದಿನ ಕಾಂಗ್ರೆಸ್‌ ಸರಕಾರಕ್ಕೆ ಹೋಲಿಸಿದರೆ 10 ವರ್ಷಗಳಲ್ಲಿ ಬಿಜೆಪಿ ಸರಕಾರ 1.5 ಪಟ್ಟು ಹೆಚ್ಚು ಉದ್ಯೋಗ ಸೃಷ್ಟಿ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹೊಸದಿಲ್ಲಿ ಯಲ್ಲಿ ನಡೆದ ರೋಜ್‌ಗಾರ್‌ ಮೇಳ ಕಾರ್ಯಕ್ರಮದಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಪಾಲ್ಗೊಂಡಿದ್ದ ಮೋದಿ, ಒಂದು ಲಕ್ಷಕ್ಕೂ ಹೆಚ್ಚು ಯುವಕರಿಗೆ ಸರಕಾರಿ ಉದ್ಯೋಗಗಳ ನೇಮಕಾತಿ ಪತ್ರ ವಿತರಿಸಿದ ಬಳಿಕ ಮಾತನಾ ಡಿದ್ದಾರೆ. ಏಕಕಾಲಕ್ಕೆ ಇಷ್ಟೊಂದು ಸಂಖ್ಯೆಯ(1 ಲಕ್ಷಕ್ಕೂ ಹೆಚ್ಚು) ಮಂದಿ ಗೆ ನೇಮಕಾತಿ ಪತ್ರ ಹಸ್ತಾಂತರಿಸಿದ್ದು ಇದೇ ಮೊದಲು ಎನ್ನಲಾಗಿದೆ. ನೇಮಕಾತಿ ಪ್ರಕ್ರಿಯೆಗಳಿಗಾಗಿ ದೀರ್ಘ‌ ಸಮಯ ತೆಗೆದುಕೊಳ್ಳುತ್ತಿದ್ದ ಕಾಂಗ್ರೆಸ್‌ ಸರಕಾರವನ್ನು ಮೋದಿ ಟೀಕಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next