Advertisement
ಆನೆಗೊಂದಿ ರಾಜವಂಶಸ್ಥ ಶ್ರೀಕೃಷ್ಣದೇವರಾಯ ದಂಪತಿಗಳು ಸೇರಿ 9 ದಂಪತಿಗಳು ಮಹಾ ಗಣಪತಿ,ನವಗ್ರಹ ಹೋಮದಲ್ಲಿ ಪಾಲ್ಗೊಂಡಿದ್ದರು. ಪಂಪಾಸರೋವರದ ಜೀರ್ಣೋದ್ಧಾರ ಕಾಮಗಾರಿ ಕೈಗೊಂಡಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ದಂಪತಿಗಳು ಶ್ರೀಚಕ್ರ, ಜಯಲಕ್ಷ್ಮಿ ಮೂರ್ತಿಗಳಿಗೆ ಕ್ಷೀರಾಭಿಷೇಕ ಮಾಡಿ ಕಳಶ ಪೂಜೆಯನ್ನು ಮಾಡಿದರು.
Related Articles
Advertisement
ಕಾರ್ಯಕ್ರಮದಲ್ಲಿ ರಾಜವಂಶಸ್ಥರಾದ ಲಲಿತರಾಣಿಶ್ರೀರಂಗದೇವರಾಯಲು, ಹರಿಹರದೇವರಾಯಲು, ಶಾಸಕ ಪರಣ್ಣ ಮುನವಳ್ಳಿ, ತಹಸೀಲ್ದಾರ್ ಯು.ನಾಗರಾಜ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಬಿಜೆಪಿ ಮುಖಂಡರಾದ ಜೋಗದ ಹನುಮಂತಪ್ಪ, ಕೆಲೋಜಿ ಸಂತೋಷ, ಮುಖಂಡರಾದ ಜೋಗದ ನಾರಾಯಣಪ್ಪ, ವಡ್ರಟ್ಟಿ ವೀರಭದ್ರಪ್ಪ ನಾಯಕ, ಮಾರೆಪ್ಪ ನಾಯಕ, ಪಂಪಣ್ಣ ನಾಯಕ, ಪುರಾತತ್ವ ಇಲಾಖೆಯ ಅಭಿಯಂತರರಾದ ಚಂದ್ರಶೇಖರ ಮಸಾಳೆ, ಕುಬೇರಪ್ಪ ಸೇರಿ ಅನೇಕರಿದ್ದರು.
################################################################
ಜೀರ್ಣೋದ್ಧಾರ ಶ್ರದ್ಧೆ,ಭಕ್ತಿಯಿಂದ ಮಾಡಿದ್ದೇನೆ.ಯಾವುದೇ ತನಿಖೆಯಾದರೂ ಸಿದ್ಧ: ಬಿ.ಶ್ರೀರಾಮುಲು
ಗಂಗಾವತಿ: ಇತಿಹಾಸ ಪ್ರಸಿದ್ಧ ಪುರಾತನ ಪಂಪಾಸರೋವರ ನಮ್ಮೆಲ್ಲರ ಹೆಮ್ಮೆಯಾಗಿದೆ. ಈ ಕ್ಷೇತ್ರ ವೀಕ್ಷಣೆ ಮಾಡಲು ನಿತ್ಯವೂ ನೂರಾರು ಜನರು ಬರುತ್ತಾರೆ. ದೇಗುಲ ಶೀಥಿಲವಾಗಿತ್ತು. ಸ್ಥಳೀಯರ ಮನವಿ ಹಿನ್ನೆಲೆಯಲ್ಲಿ ಸ್ನೇಹಿತರ ಆರ್ಥಿಕ ನೆರವಿನೊಂದಿಗೆ ಪಂಪಾಸರೋವರವನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಜೀರ್ಣೋದ್ಧಾರ ಕಾಮಗಾರಿಯನ್ನು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ನಿಗಾದಲ್ಲಿ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಸೇರಿ ಬೇರೆಯವರು ಆರೋಪಿಸುವಂತೆ ನಿಧಿಗಾಗಿ ಜೀರ್ಣೋದ್ಧಾರ ಕಾರ್ಯ ಮಾಡಿಲ್ಲ. ನ್ಯಾಯಾಂಗ ಸೇರಿ ಯಾವುದೇ ತನಿಖೆಗೂ ತಾವು ಸಿದ್ಧ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಅವರು ಬುಧವಾರ ಪಂಪಾಸರೋವರದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನಾ ಕಾರ್ಯದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
ಹಂಪಿ, ಕೋದಂಡ ರಾಮದೇವರ ಗುಡಿ, ಸೂರ್ಯದೇವರ ಗುಡಿ, ಕೋಟಿ ಮಲ್ಲೇಶ್ವರ ಗುಡಿ ಸೇರಿ ಹಲವು ಪುರಾತನ ದೇವಾಲಯಗಳನ್ನು ಪುರಾತತ್ವ ಇಲಾಖೆಯ ಪರವಾನಿಗೆಯೊಂದಿಗೆ ಜೀರ್ಣೋದ್ಧಾರ ಮಾಡಲಾಗಿದ್ದು ಅಲ್ಲಿ ಇಲ್ಲದ ಗೊಂದಲ ವಿವಾದ ಪಂಪಾಸರೋವರದಲ್ಲಿ ಯಾಕೆ ಬಂದಿದೆ. ಗೊತ್ತಿಲ್ಲ. ನಾನಂತು ಪ್ರಮಾಣಿಕವಾಗಿ ಭಕ್ತಿ ಶ್ರದ್ಧೆಯಿಂದ ಜೀರ್ಣೋದ್ಧಾರ ಕಾರ್ಯ ಮಾಡುತ್ತಿದ್ದೇನೆ, ನನ್ನ ಸ್ನೇಹಿತರು ಧನಸಹಾಯ ಮಾಡುತ್ತಾರೆ. ನಾನೂ ಮುಂದೆ ನಿಂತು ಈ ಕಾರ್ಯ ಮಾಡುತ್ತಿದ್ದೇನೆ. ನಾನೇದರೂ ತಪ್ಪು ಮಾಡಿದರೆ ದೇವರೇ ಶಿಕ್ಷೆ ಕೊಡಲಿ, ಆನೆಗೊಂದಿ ರಾಜವಂಶಸ್ಥರ ಮತ್ತು ಸಮಸ್ತ ಜನರ ವಿಶ್ವಾಸದೊಂದಿಗೆ ಕಾಮಗಾರಿಯನ್ನು ಮಾಡುತ್ತಿದ್ದೇನೆ. ನಾನು ದೇವರು ಧಾರ್ಮಿಕ ವಿಷಯದಲ್ಲಿಪೂರ್ಣ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದು ಧರ್ಮ ದ್ರೋಹಿ ಕಾರ್ಯ ಮಾಡುವುದಿಲ್ಲ. ಇದೀಗ ಈ ಭಾಗದ ಜನಪ್ರತಿನಿಧಿಗಳ ಆನೆಗೊಂದಿ ರಾಜಮನೆತನದವರು ಸ್ಥಳೀಯರು ಸೇರಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ಶ್ರದ್ಧೆಯಿಂದ ಮಾಡಿ ಮುಂದಿನ 6 ತಿಂಗಳಲ್ಲಿ ಪೂರ್ಣ ಪಂಪಾಸರೋವರದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸುವ ಯೋಜನೆ ಇದೆ. ವಾಲೀಕಿಲ್ಲಾದ ಶ್ರೀ ಆದಿಶಕ್ತಿ ದೇವಾಲಯದ ಜೀರ್ಣೋದ್ಧಾರ ಕಾರ್ಯವೂ ಶೀಘ್ರ ಪೂರ್ಣಗೊಳಿಸಲಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ಕಲ್ಲಿನ ಅನಾಭವಿದ್ದು ಬೇರೆಡೆಯಿಂದ ಕಲ್ಲು ತರಿಸಿ ಕೆತ್ತನೆ ಕಾರ್ಯ ಮಾಡಿ ಆದಿಶಕ್ತಿ ದೇಗುಲಕ್ಕೆ ರವಾನೆ ಮಾಡಿ ಜೋಡಿಸಬೇಕಾಗಿದ್ದು ಪ್ರಸ್ತುತ ವಿಳಂಭವಾಗುತ್ತಿದೆ. ಅಲ್ಲಿಯೂ ಶೀಘ್ರವೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡರಾದ ಕೆಲೋಜಿ ಸಂತೋಷ, ಜೋಗದ ಹನುಮಂತಪ್ಪ, ಜೋಗದ ನಾರಾಯಣಪ್ಪ ಸೇರಿ ಅನೇಕರಿದ್ದರು.