Advertisement

ಸಹಾಯಕ ಪ್ರಾಧ್ಯಾಪಕ ನೇಮಕಕ್ಕೂ ಮರುಪರೀಕ್ಷೆಯಾಗಲಿ

10:35 AM May 07, 2022 | Team Udayavani |

ಬೆಂಗಳೂರು: ಪಿಎಸ್‌ಐ ಪರೀಕ್ಷೆಯ ಅಕ್ರಮದ ಬಿಸಿ ಹೆಚ್ಚಾಗಿರುವಂತೆಯೇ, ಅತ್ತ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯನ್ನೂ ಹೊಸದಾಗಿ ಮಾಡಬೇಕು ಎಂದು ನೊಂದ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

Advertisement

ಇತ್ತೀಚೆಗಷ್ಟೇ ನಡೆದಿರುವ ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಪ್ರಶ್ನೆ ಪತ್ರಿಕೆ ಸಿದ್ಧಗೊಳಿಸಿರುವವರೇ ಸೋರಿಕೆ ಮಾಡಿದ್ದಾರೆ. ಹೀಗಾಗಿ ಮರು ಪರೀಕ್ಷೆ ಮಾಡಿ ಅರ್ಹರಿಗೆ ನ್ಯಾಯ ಕೊಡಿಸಬೇಕು.  ಭೂಗೋಳಶಾಸ್ತ್ರದ ಜತೆಗೆ ಬೇರೆ ಪತ್ರಿಕೆಗಳೂ ಸೋರಿಕೆಯಾಗಿರಬಹುದು ಅಥವಾ ಅಕ್ರಮಗಳಾಗಿರಬಹುದು. ಹೀಗಾಗಿ ಮರುಪರೀಕ್ಷೆಯೇ ಉತ್ತಮ  ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸೌಮ್ಯ ತಾನು ಪರೀಕ್ಷೆ ಬರೆಯುವ ಜತೆಗೆ ಹಲವರಿಗೆ ಪ್ರಶ್ನೆಪತ್ರಿಕೆ ರವಾನಿಸಿದ್ದಾರೆ. ಇದರಿಂದ ರಾಜ್ಯದ ಇತರ ಭಾಗದಲ್ಲಿರುವ ಅರ್ಹ ಆಕಾಂಕ್ಷಿಗಳಿಗೆ ಸರಕಾರದಿಂದಲೇ  ದ್ರೋಹ ಬಗೆದಂತಾಗುತ್ತದೆ. ಮರು ಪರೀಕ್ಷೆ ನಡೆಸಿದರೆ ಉಳಿದ ಅಭ್ಯರ್ಥಿಗಳಿಗೆ ನ್ಯಾಯ ದೊರೆಯಲಿದೆ ಎಂಬುದು ಆಕಾಂಕ್ಷಿಗಳ ಮನವಿಯಾಗಿದೆ.

ಸ್ವತಃ ಮಾಹಿತಿ ಸಂಗ್ರಹ
ಅಕ್ರಮ ನಡೆದಿರುವ ಮತ್ತು ಅಕ್ರಮಕ್ಕೆ ಭಾಗಿಯಾಗಿರುವವರ ಬಗ್ಗೆ ಪತ್ತೆ ಹಚ್ಚಲು ಸ್ವತಃ ಅಭ್ಯರ್ಥಿಗಳೇ ಕಣಕ್ಕಿಳಿಯಲಿದ್ದಾರೆ. ಇದಕ್ಕಾಗಿ ರಾಜ್ಯಾದ್ಯಂತ ಅಕ್ರಮದಲ್ಲಿ ಭಾಗಿಯಾಗಿರು ವವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಅಕ್ರಮದ ಬಗ್ಗೆ ಮಾತನಾಡುವವರು, ಹಣ ನೀಡಿ ಮೋಸ ಹೋಗಿರುವವರು, ಹಣ ನೀಡಲು ಪ್ರೇರಣೆ ನೀಡಿದವರು, ಹಣ ಸಂಗ್ರಹ ಮಾಡಿಕೊಂಡವರು ಹೀಗೆ ಹಲವು ರೀತಿಯಲ್ಲಿ ಅಕ್ರಮದ ಹಾದಿಯನ್ನು ಪತ್ತೆ ಹಚ್ಚಲು ನಾವೇ ಮುಂದಾಗಿದ್ದೇವೆ ಎಂದು  ಅಭ್ಯರ್ಥಿಗಳು ಹೇಳುತ್ತಿದ್ದಾರೆ.

Advertisement

ಎಲ್ಲ ವಿಷಯದ ಬಗ್ಗೆಯೂ ತನಿಖೆ ಅಗತ್ಯ
ವರ್ಷಗಟ್ಟಲೆ ಕಟ್ಟಪಟ್ಟು ಓದಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗುತ್ತಿಲ್ಲ. ಭೂಗೋಳಶಾಸ್ತ್ರ ಮಾತ್ರವಲ್ಲದೆ ಎಲ್ಲ  ವಿಷಯ

ಗಳ ಬಗ್ಗೆಯೂ  ಸೂಕ್ತ ತನಿಖೆ ನಡೆಸಬೇಕು. ಆದರೆ ಸರಕಾರ ಪ್ರತಿಯೊಂದಕ್ಕೂ ದಾಖಲೆ ಕೊಡಿ ಎಂದು ಅಕ್ರಮವನ್ನು ಪ್ರಶ್ನಿಸುವವರನ್ನೇ ಕೇಳುತ್ತಿದೆ. ಇದಕ್ಕೆ ಸಮರ್ಪಕ ದಾಖಲೆಗಳನ್ನು ಹುಡುಕಬಹುದೇ ಎಂಬ ಬಗ್ಗೆ ಪ್ರಯತ್ನಿಸಲು ಅಭ್ಯರ್ಥಿಗಳು ಪಣ ತೊಟ್ಟಿದ್ದಾರೆ. ಹೀಗೆ ಲಭ್ಯವಾಗುವ ಮಾಹಿತಿಯನ್ನು ರಾಜ್ಯ ಸರಕಾರ, ಪೊಲೀಸ್‌ ಹಾಗೂ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಿ ತನಿಖೆ ಚುರುಕುಗೊಳ್ಳುವಂತೆ ಮಾಡುವ ಉದ್ದೇಶವನ್ನೂ ಪರೀûಾರ್ಥಿಗಳು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಪಿಎಸ್‌ಐ ಮಾತ್ರವಲ್ಲ,ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲೂ  ಕೋಟ್ಯಂತರ ರೂ.ಗಳ ಅವ್ಯವಹಾರ ನಡೆದಿದೆ. ಇದು ಪಿಎಸ್‌ಐಗಿಂತಲೂ ದೊಡ್ಡ ಹಗರಣ. ಪಿಎಸ್‌ಐ ಪರೀಕ್ಷೆಯ ಕಿಂಗ್‌ಪಿನ್‌ ಅನ್ನು ಮುಟ್ಟಿದ ಮರುಕ್ಷಣದಲ್ಲೇ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಪತನವಾಗಲಿದೆ.
– ಎಚ್‌.ಡಿ.ಕುಮಾರಸ್ವಾಮಿ,ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next