Advertisement

ಪದ್ಮಾವತ್‌ ಆದೇಶ ಪುನರ್‌ ಪರಿಶೀಲಿಸಿ: ಸುಪ್ರೀಂ ಕೋರ್ಟ್‌ಗೆ ಮನವಿ

11:44 AM Jan 22, 2018 | Team Udayavani |

ಹೊಸದಿಲ್ಲಿ : ಸಂಜಯ್‌ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತ್‌ ಚಿತ್ರಕ್ಕೆ ನಿಷೇಧ ಹೇರಿರುವ ತಮ್ಮ ನಿಲುವಿನಿಂದ ಹಿಂದೆ ಸರಿಯದ ರಾಜಸ್ಥಾನ ಮತ್ತು ಮಧ್ಯ ಪ್ರದೇಶ ಸರಕಾರಗಳು ಇಂದು ಸೋಮವಾರ ಸುಪ್ರೀಂ ಕೋರ್ಟ್‌ ಮೆಟ್ಟಲೇರಿವೆ. 

Advertisement

ಪದ್ಮಾವತ್‌ ಚಿತ್ರದ ಮೇಲಿನ ನಿಷೇಧವನ್ನು ತೆರವುಗೊಳಿಸಿದ ತನ್ನ ಆದೇಶವನ್ನು ಪುನರ್‌ ಪರಿಶೀಲಿಸುವಂತೆ ಈ ರಾಜ್ಯಗಳು ಸುಪ್ರೀಂ ಕೋರ್ಟನ್ನು ವಿನಂತಿಸಿವೆ. 

ಅಂತೆಯೇ ಸುಪ್ರೀಂ ಕೋರ್ಟ್‌ ಈ ರಾಜ್ಯಗಳ ಮನವಿಯನ್ನು ನಾಳೆ ಮಂಗಳವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ. ಜನವರಿ 25ರಂದು ಪದ್ಮಾವತ್‌ ಬಿಡುಗಡೆಯನ್ನು ನಿರ್ಧರಿಸಲಾಗಿದೆ. 

ಮಧ್ಯ ಪ್ರದೇಶದ ಚಿತ್ರಮಂದಿಗಳು ತಾವು ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಜ.25ರಿಂದ ಪದ್ಮಾವತ್‌ ಚಿತ್ರ ಪ್ರದರ್ಶಿಸುವುದಾಗಿ ಈ ನಡುವೆ ಹೇಳಿವೆ. ಚಿತ್ರ ಮಂದಿರ ಮಾಲಕರ ಪ್ರಕಾರ ಮಧ್ಯಪ್ರದೇಶದಲ್ಲಿ  ಜನವರಿ 25ರಂದು ಸುಮಾರು 150 ಚಿತ್ರಮಂದಿರಗಳಲ್ಲಿ ಪದ್ಮಾವತ್‌ ಚಿತ್ರ ತೆರೆ ಕಾಣಲಿದೆ. 

ಚಿತ್ತೂರ್‌ಗಡ್‌ ದಲ್ಲಿ ಚೇತಾವನಿ ರಾಲಿ

Advertisement

ಈ ನಡುವೆ ಪದ್ಮಾವತಿ ಚಿತ್ರದ ಪ್ರದರ್ಶನವನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿ ರಾಜಸ್ಥಾನದ ಚಿತ್ತೂರ್‌ಗಡ್‌ ದಲ್ಲಿ  ಸಾವಿರಾರು ಸಂಖ್ಯೆಯ ಮಹಿಳೆಯರು ಕತ್ತಿಯನ್ನು ಝಳಪಿಸುತ್ತಾ ಚೇತಾವನಿ ರಾಲಿ ನಡೆಸಿ, ಚಿತ್ರ ಬಿಡುಗಡೆಯಾದಲ್ಲಿ ತಾವು ಸತೀ ಸಹಗಮನ (ಜೌಹರ್‌) ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ಸುಮಾರು 1.908 ಮಂದಿ ಮಹಿಳೆಯರು ಈಗಾಗಲೇ ತಾವು ಜೌಹರ್‌ ನಡೆಸುವುದಕ್ಕೆ ತಮ್ಮನ್ನು ನೋಂದಾವಣಿ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ. 

ಪ್ರತಿಭಟನಕಾರು ತಮ್ಮ ಜಾಥಾವನ್ನು ಚಿತ್ತೋರ್‌ಗಢ ಕೋಟೆಯಿಂದ ಪಟ್ಟಣದಲ್ಲಿನ ಮುಖ್ಯ ಮಾರುಕಟ್ಟೆ ಪ್ರದೇಶದ ವರೆಗೆ ನಡೆಸಿದರು. ಅನಂತರ ಅವರು ಜಿಲ್ಲಾಧಿಕಾರಿ ಇಂದ್ರಜಿತ್‌ ಸಿಂಗ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದಾರೆ. 

ರಾಣಿ ಪದ್ಮಿನಿಯ ಘನತೆ ಮತ್ತು ಗೌರವದ ರಕ್ಷಣೆಗಾಗಿ ನಾವು ಈ ರಾಲಿಯನ್ನು ನಡೆಸುತ್ತಿದ್ದೇವೆ; ಜನವರಿ 25ರಂದು ಪದ್ಮಾವತಿ ಚಿತ್ರ ಬಿಡುಗಡೆಯನ್ನು ಈಗಲೇ ರದ್ದುಗೊಳಿಸದಿದ್ದರೆ ಜನವರಿ 24ರಂದು ನಾವು ಜೌಹರ್‌ ನಡೆಸುತ್ತೇವೆ ಎಂಬ ಎಚ್ಚರಿಕೆಯನ್ನು ಮೆರವಣಿಗೆಯಲ್ಲಿ ನೀಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next