ಶಿರ್ವ: ಕೋಡು ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಬಂಧಪಟ್ಟ ಮುಲ್ಕಾಡಿ ಮುದ್ದಣ್ಣಕೆರೆ ಪಂಚದೈವೀಕ ಸನ್ನಿಧಿಯಲ್ಲಿ ಶ್ರೀ ನಾಗಬ್ರಹ್ಮಾದಿ ಖಡ್ಗೇಶ್ವರೀ ಪರಿವಾರ ಶಕ್ತಿಗಳ ನವೀಕೃತ ನಾಗಾಲಯ ಸಮರ್ಪಣೆ, ಬಿಂಬ ಪುನಃಪ್ರತಿಷ್ಠೆ- ಬ್ರಹ್ಮಕಲಶೋತ್ಸವಾದಿ ಧಾರ್ಮಿಕ ಕಾರ್ಯಕ್ರಮ ಶುಕ್ರವಾರ ಸಂಪನ್ನಗೊಂಡಿತು.
ಕ್ಷೇತ್ರದ ತಂತ್ರಿ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಅವರ ನೇತೃತ್ವದಲ್ಲಿ ಕ್ಷೇತ್ರ ಅರ್ಚಕ ಮುಲ್ಕಾಡಿ ಹರಿದಾಸ ಭಟ್, ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಲೋಹಿತ್ ಭಟ್ ಅವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ಕ್ಷೇತ್ರದ ತಂತ್ರಿ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಅವರ ನೇತೃತ್ವದಲ್ಲಿ ಸಂಜೀವಿನಿ ಮೃತ್ಯುಂಜಯ ಮಹಾಯಾಗ ನಡೆಯಿತು. ಶ್ರೀ ನಾಗಬ್ರಹ್ಮ, ರಕ್ತೇಶ್ವರಿ, ನಂದಿಕೇಶ್ವರ, ಕ್ಷೇತ್ರಪಾಲ, ಶ್ರೀ ಖಡೆYàಶ್ವರೀ ಸಹಿತ ಇನ್ನಿತರ ಶಕ್ತಿಗಳ ಕ್ಷೇತ್ರ ಜೀರ್ಣೋದ್ಧಾರಗೊಂಡು ಪ್ರತಿಷ್ಠಾ ಕಲಶ, ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಶ್ರೀ ನಾಗ ಬ್ರಹ್ಮ ಖಡ್ಗೇಶ್ವರೀ ಶಕ್ತಿಗಳ ಬಿಂಬ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಿಲಕೂಷ್ಮಾಂಡ ಪವಮಾನ ಯಾಗ, ಸರ್ಪತ್ರಯ ಮಂತ್ರ ಹೋಮ, ಆಶ್ಲೇಷ ಬಲಿ ಹಾಗೂ ನಾಗಪಾತ್ರಿ ವೇ|ಮೂ| ಬೆಳ್ಳರ್ಪಾಡಿ ರಮಾನಂದ ಭಟ್ಟರಿಂದ ನಾಗಸಂದರ್ಶನ, ಅನ್ನಸಂತರ್ಪಣೆ ನಡೆಯಿತು.
ವೇ|ಮೂ| ಕಳತ್ತೂರು ಕರುಣಾಕರ ತಂತ್ರಿ, ಬೆಳ್ಳರ್ಪಾಡಿ ಗಣೇಶ್ ಭಟ್, ಕೇಂಜ ಭಾರ್ಗವ ತಂತ್ರಿ, ಕೋಡು ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸದಾಶಿವ ಹೆಗ್ಡೆ, ಮೊಕ್ತೇಸರರಾದ ಕೆ. ಜಯಚಂದ್ರ ಹೆಗ್ಡೆ, ಕೆ.ಸುಧೀರ್ ಹೆಗ್ಡೆ, ಶಿರ್ವ ಕೋಡು ಮನೆತನದ ಬಾಲಕೃಷ್ಣ ಹೆಗ್ಡೆ, ಸುಮತಿ ಹೆಗ್ಗಡ್ತಿ , ಶಾಂಭವಿ ಹೆಗ್ಗಡ್ತಿ , ಪ್ರೇಮಲತಾ ಸತೀಶ್ಚಂದ್ರ ಹೆಗ್ಡೆ, ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ, ಶಿರ್ವಕೋಡು ದಿನೇಶ್ ಹೆಗ್ಡೆ, ಮಂದಾರ ಮನೋಹರ ಶೆಟ್ಟಿ, ಕೋಡು ರವಿ ಹೆಗ್ಡೆ, ಕೋಡು ಸದಾನಂದ ಶೆಟ್ಟಿ, ಮನೋಹರ ಹೆಗ್ಡೆ,ಪಡುಮನೆ ಗುಣಪಾಲ ಶೆಟ್ಟಿ, ವಿಶ್ವನಾಥ ನಾಯಕ್, ಸಂತೋಷ್ ಶೆಟ್ಟಿ ಕೋಡು, ಸ್ಥಳವಂದಿಗರು, ಗ್ರಾಮಸ್ಥರು, ಭಕ್ತರು ಉಪಸ್ಥಿತರಿದ್ದರು.