Advertisement
ಪ್ರಸ್ತುತ ಆಸ್ತಿ ತೆರಿಗೆ ಪಾವತಿಸುವ ಕಟ್ಟಡಗಳ ಮಾಲೀಕರಿಗೆ ನಿಗದಿತ ಸಮಯದೊಳಗೆ ನಮೂನೆ-3 ಸಿಗದೆ ಪರದಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ನಮೂನೆ-3 ಕೈ ಬರಹದಲ್ಲೂ ನೀಡ ಲಾಗುತ್ತಿದೆ ಎಂಬ ಆರೋಪಗಳೂ ಇವೆ. ಆ ಹಿನ್ನೆಲೆಯಲ್ಲಿನಮೂನೆ-3 ಅನ್ನು ಸಕಾಲ ವ್ಯಾಪ್ತಿಗೆ ತರುವುದಕ್ಕೆ ರಾಜ್ಯಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದೆ.
Related Articles
Advertisement
ಕೈ ಬರಹದಲ್ಲಿ ನೀಡಿಕೆಗೆ ಕಡಿವಾಣ: ಕೈ ಬರಹಗಳಲ್ಲಿ ನಮೂನೆ-3 ನೀಡುತ್ತಿರುವುದರಿಂದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಆಸ್ತಿಗಳನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡು ನೋಂದಣಿ ಮಾಡಿಸುತ್ತಿರುವುದು, ಕೈ ಬರಹದಲ್ಲಿರುವುದನ್ನು ತಿದ್ದುವುದು ಕಂಡುಬಂದಿದೆ. ಇದರಿಂದ ಸಿವಿಲ್ ವ್ಯಾಜ್ಯಗಳು ಉದ್ಭವವಾಗುತ್ತಿದೆ.ಇದನ್ನು ತಪ್ಪಿಸುವ ಉದ್ದೇಶದಿಂದ ನಮೂನೆ-3 ಅನ್ನು ಅಧಿಕೃತವಾಗಿ ತಂತ್ರಾಂಶದ ಮೂಲಕ ಪಡೆದು ಸಕ್ಷಮ ಅಧಿಕಾರಿಯಿಂದ ದೃಢೀಕರಿಸಿದ ಫಾರಂ-3 ಪಡೆದು ನಂತರ ಆಸ್ತಿಯನ್ನು ನೋಂದಣಿ ಮಾಡುವಂತೆ ಸಂಬಂಧಿಸಿದ ಉಪ ನೋಂದಣಾಧಿಕಾರಿಗಳ ಕಚೇರಿಗೆ ಸೂಚನೆ ನೀಡುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಜಿಲ್ಲಾಡಳಿತ ಪತ್ರ ಬರೆದಿದೆ.
ಜಾಗೃತಿ ಫಲಕಕ್ಕೆ ಸೂಚನೆ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕಚೇರಿಗಳಲ್ಲಿ ಆಸ್ತಿ ತೆರಿಗೆ ಪಾವತಿಸಿದ ಕಟ್ಟಡ ಮಾಲೀಕರು ನಮೂನೆ-3 ಪಡೆಯುವ ಬಗ್ಗೆ ಜಾಗೃತಿ ಫಲಕಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಎಷ್ಟೋ ಜನರು ಆಸ್ತಿ ತೆರಿಗೆ ಪಾವತಿಸಿ ನಮೂನೆ-3 ಅನ್ನು ಪಡೆಯದೆ ರಸೀದಿ ಪಡೆದುಕೊಂಡು ಹೋಗುತ್ತಿದ್ದಾರೆ. ಕಟ್ಟಡ ಮಾಲೀಕರು ತಮ್ಮ ಆಸ್ತಿಯ ಎದುರು ನಿಂತು ಫೋಟೋ ತೆಗೆಸಿಕೊಂಡು ಬಳಿಕ ಆಸ್ತಿಯ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಿ ಅಪ್‌ಲೋಡ್ ಮಾಡುವ ವಿಧಾನವೇ ಗೊತ್ತಿಲ್ಲದೆ ಪರಿತಪಿಸುತ್ತಿದ್ದಾರೆ. ಕೆಲವರು ನಮೂನೆ-3 ಪಡೆಯಲು ತಿಂಗಳಾನುಗಟ್ಟಲೆ ಅಲೆದಾಡುತ್ತಿರುವ ವಿಷಯ ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿರುವುದರಿಂದ ನಗರಸಭೆ-ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿರುವ ಅವ್ಯವಸ್ಥೆ ಸರಿಪಡಿಸುವುದಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಕ್ಕೆ ಕಾರ್ಯೋನ್ಮುಖವಾಗಿದೆ.
-ಮಂಡ್ಯ ಮಂಜುನಾಥ್