Advertisement

ಕೊಡಗಿನ ಗೌರಮ್ಮ ಹೆಸರಿನಲ್ಲಿ ಟ್ರಸ್ಟ್‌, ಸ್ಮಾರಕ ನಿರ್ಮಾಣಕ್ಕೆ ಸಲಹೆ​

12:30 AM Feb 05, 2019 | Team Udayavani |

ಮಡಿಕೇರಿ: ಕೊಪಗಿನ ಹೆಸರಾಂತ ಸಾಹಿತಿ ಗೌರಮ್ಮ ಹೆಸರಿನಲ್ಲಿ ಗೌರಮ್ಮ ಟ್ರಸ್ಟ್‌ ಆರಂಭಿಸುವಂತಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಅವರು ಮನವಿ ಮಾಡಿದ್ದಾರೆ. 

Advertisement

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಕೊಡಗು ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಸುನಿತಾ ಲೋಕೇಶ್‌ ಅವರು ಬರೆದಿರುವ ಲಲಿತ ಪ್ರಬಂಧ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
  
ಕೊಡಗು ಜಿಲ್ಲೆಯ ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ಕೊಡಗಿನ ಗೌರಮ್ಮ ಮೊದಲಿಗರು. ಗೌರಮ್ಮ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸುವುದರ ಜೊತೆಗೆ ಗೌರಮ್ಮ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವಂತಾಗಬೇಕು. ಈ ಬಗ್ಗೆ ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕಕ್ಕೆ ಸಲಹೆ ಮಾಡಿದ ವಸುಂಧರ ಭೂಪತಿ ಅವರು ರಾಜ್ಯ ಮಟ್ಟದಲ್ಲಿ ಈ ಸಂಬಂಧ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.
 
ಕನ್ನಡ ಸಾಹಿತ್ಯ ಪರಿಷತ್‌ ಸಮಕಾಲಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಮಾಡುತ್ತಿದೆ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಎಂಬ ವಿಷಯದಡಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ನುಡಿದರು. ಮಹಿಳೆಯರು ಜಾನಪದ ಸಂಸ್ಕೃತಿ ಮೂಲಕ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದನ್ನು ಅನಾದಿ ಕಾಲದಿಂದಲೂ ಕಾಣಬಹುದಾಗಿದೆ. ನಂತರ ಅಕ್ಕಮಹಾದೇವಿ, ಸತ್ಯಕ್ಕ, ಹಾಲ್ದಕ್ಕಿ ಲಕ್ಕಮ್ಮ ಸೇರಿದಂತೆ 30 ಕ್ಕೂ ಹೆಚ್ಚು ಮಹಿಳೆಯರು ವಚನ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಿಳಾ ಸಾಹಿತ್ಯದಲ್ಲಿ ಬೆಳಕಿಗೆ ಬಂದರು ಎಂದು ವಸುಂಧರ ಭೂಪತಿ ಅವರು ವಿವರಿಸಿದರು. ಕೊಡಗು ಜಿಲ್ಲೆಯಲ್ಲಿ ಮಹಿಳಾ ಕನ್ನಡ ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದೆ. ಆ ದಿಸೆಯಲ್ಲಿ ವಿಮರ್ಶೆಗಳು ಸಹ ಹೆಚ್ಚಾಗಬೇಕು. ಆದರೆ ಮಹಿಳಾ ಸಾಹಿತ್ಯ ವಿಮರ್ಶೆ ಮೂಲೆ ಗುಂಪಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಸುಂಧರ ಭೂಪತಿ ಅವರು ಹೇಳಿದರು. 

ಕಾರ್ಯಕ್ರಮಕ್ಕೆ ಚಾಲನೆ ನೀಡಿದಮಾಜಿ ಸಚಿವೆ,  ಅಕ್ಕಮಹಾದೇವಿ ಅಧ್ಯಯನ ಪೀಠದ ಅಧ್ಯಕ್ಷರಾ¨ರಾಜ್ಯದ ರಾಜಧಾನಿಯಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ 18 ರಷ್ಟು ಮಾತ್ರ, ಇದು ಒಳ್ಳೆಯ ಬೆಳವಣಿಗೆಯಲ್ಲ, ಸಮಾಜ ಅಭಿವೃದ್ಧಿ ಹೊಂದುವುದರ ಜೊತೆಗೆ, ಮಾತೃ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಇಲ್ಲದಿದ್ದಲ್ಲಿ ಕನ್ನಡಿಗರು ಮೂಲೆ ಗುಂಪಾಗುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು. 

ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ್‌ ಮಾಧ್ಯಮ ಶಾಲೆ ಆರಂಭ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇಂಗ್ಲೀಷ್‌ ಮಾಧ್ಯಮಕ್ಕಿಂತ ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಒಳ್ಳೆಯದು. ನಾನು ಸಹ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದೇನೆ, ನನಗೂ ನಾಲ್ಕು ಭಾಷೆ ಮಾತನಾಡಲು ಬರುತ್ತದೆ. ಇಚ್ಚಾಶಕ್ತಿ ಇದ್ದಲ್ಲಿ ಯಾವುದೇ ಭಾಷೆಯನ್ನು ಕಲಿಯಬಹುದು, ಆ ನಿಟ್ಟಿನಲ್ಲಿ ಆಂಗ್ಲ ಭಾಷೆಗೆ ಜೋತು ಬೀಳುವುದು ಬೇಡ, ಕನ್ನಡ ಭಾಷೆಯ ಶಬ್ದಗಳು ಮಾಯವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದು ಲೀಲಾದೇವಿ ಆರ್‌.ಪ್ರಸಾದ್‌ ಅವರು ಕಿವಿಮಾತು ಹೇಳಿದರು. 

ಶಾಸಕ‌ ಎಂ.ಪಿ.ಅಪ್ಪಚ್ಚುರಂಜನ್‌ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್‌ ಚಟುವಟಿಕೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು.ಎಂದರು.   ವಿಧಾನ ಪರಿಷತ್‌ ಸದಸ್ಯೆ àಣಾ ಅಚ್ಚಯ್ಯ  ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ 0‌ು ಮಾತನಾಡಿಂದರು.  

Advertisement

ಕಸ್ತೂರಿ ಗೋವಿಂದಮಯ್ಯ, ಕಸಾಪ ಜಿಲ್ಲಾಧ್ಯಕ್ಷ‌ ಲೋಕೇಶ್‌ ಸಾಗರ್‌ ಮಾತನಾಡಿದರು. ಜಿ.ಪಂ.ಉಪಾಧ್ಯಕ್ಷೆ  ಲೋಕೇಶ್ವರಿ ಗೋಪಾಲ್‌,  ಪೂರ್ಣಿಮಾ ಗೋಪಾಲ್‌, ಮಂಜುಳಾ ಉಪಸ್ಥಿತರಿದ್ದರು.  

ಕನ್ನಡ ಬಳಸಿ ಬೆಳೆಸಿ
ಜಿ.ಪಂ.ಸಿಇಒ ಕೆ.ಲಕ್ಷಿ¾ಪ್ರಿಯ ಅವರು ಮಾತನಾಡಿ ಕನ್ನಡ ಭಾಷೆ ಕಲಿಯಲು ಎಲ್ಲರೂ ಉತ್ತೇಜನ ನೀಡುತ್ತಾರೆ. ತಪ್ಪಾದರೂ ತಿದ್ದಿಕೊಳ್ಳಲು ಸಲಹೆ ಮಾಡುತ್ತಾರೆ. ಆದರೆ ನಾವು ಕನ್ನಡ ಮಾತನಾಡಲು ಪ್ರಯತ್ನಿಸಿ ದರೂ ಇಂದಿನ ಮಕ್ಕಳು ಇಂಗ್ಲೀಷ್‌ ಭಾಷೆಯಲ್ಲಿ ಮಾತನಾಡುತ್ತಾರೆ ಅವರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸು ವಂತಾಗಬೇಕು ಎಂದರು. 

ಹೆಮ್ಮರವಾಗಿ ಬೆಳೆಸಿ  ಸಮ್ಮೇಳನಾಧ್ಯಕ್ಷರಾದ ವಿಜಯ ವಿಷ್ಣುಭಟ್‌ ಅವರು ಭಾಷಣ ಓದಿದರು. ಕನ್ನಡಿಗರಾದ ನಮಗೆ ಮಾತೃಭಾಷಾ ಪ್ರೀತಿ ಇರಬೇಕು. ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಕನ್ನಡವನ್ನು ಇನ್ನೂ ಹೆಮ್ಮರವಾಗಿ ಬೆಳೆಸಬೇಕು ಎಂದರು. 

ಕನ್ನಡ ಭಾಷೆಗೆ ಲಿಪಿ ಇದ್ದು, ಸರಳ, ಸುಂದರ, ನುಡಿದಂತೆ, ಬರೆದಂತೆ, ಓದಿದಂತೆ ಮಾತನಾಡಬಹುದಾಗಿದೆ. ಕನ್ನಡ ಭಾಷೆಗೆ ಲಿಪಿಗಳ ರಾಣಿ ಎಂದು ವಿನೋಬಭಾವೆ ಅವರು ಹೇಳಿದ್ದರು ಎಂದು ಅಧ್ಯಕ್ಷರು ಸ್ಮರಿಸಿದರು. 
 
ಇಂಗ್ಲೀಷ್‌ ಬದುಕು ಕಟ್ಟಿಕೊಡುವ ಭಾಷೆಯಾಗಿದ್ದರೂ ಸಹ ಮಾತೃ ಭಾಷೆಯನ್ನು ಬದಿಗೊತ್ತಬಾರದು, ಪ್ರಾರಂಭಿಕ ಶಿಕ್ಷಣ ಅಮ್ಮನನ್ನು ಅಪ್ಪಿಕೊಂಡಂತೆ ಎಂದು ಅವರು ನುಡಿದರು

ಬದುಕು ಕಲಿಸುತ್ತದೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಬದುಕಿನ ಕಣ್ಣುಗಳಿದ್ದಂತೆ, ಸಾಹಿತ್ಯ ಜ್ಞಾನ ಹೆಚ್ಚಿಸಿದರೆ,  ಸಂಸ್ಕೃತಿ ಬದುಕು ಕಲಿಸುತ್ತದೆ ಎಂದರು. ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾಗುತ್ತಿದೆ. ಶಾಪಿಂಗ್‌ ಎಂಬುದು ದೊಡ್ಡ ಪಿಡುಗಾಗಿದೆ ಎಂದು ಲೀಲಾದೇವಿ ಆರ್‌.ಪ್ರಸಾದ್‌ ಹೇಳಿದರು ಕೊಡಗು ಜಿಲ್ಲೆಯಲ್ಲಿ ಮಹಿಳೆಯರು ಹೆಚ್ಚಿನ ಅಧಿಕಾರ ಹೊಂದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.

ಸಮ್ಮೇಳನದಲ್ಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಮಾತನಾಡಿದರು. ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next