Advertisement
ಮಂಗಳಾದೇವಿಯ ರಂಗಮಂದಿ ರದಲ್ಲಿ ದ.ಕ. ಜಿಲಾಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಥಾಬಿಂದು ಪ್ರಕಾಶನ ಮತ್ತು ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ್ದ ಸಂಗೀತ ಸಾಹಿತ್ಯ ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಪಿ.ವಿ. ಪ್ರದೀಪ್ ಕುಮಾರ್ ಅವರ “ಆ ಒಂದು ದಿನ’ 57ನೇ ಕೃತಿಯನ್ನು ಧಾರವಾಡ, ರಾಜ್ಯ ಹೈಕೋರ್ಟ್ ನ್ಯಾಯವಾದಿ ಡಾ| ರೇವಣ್ಣ ಬಳ್ಳಾರಿ ಬಿಡುಗಡೆಗೊಳಿಸಿದರು.
ನಾಡಿನ ಸಾಧಕರಾದ ಕೇಶವ ಶಕ್ತಿನಗರ (ಯಕ್ಷಗಾನ), ಡಾ| ಕೆ.ಆರ್. ನಾಥ್ (ಸಮಾಜ ಸೇವೆ), ಬಿ.ಕೆ. ಮಾಧವರಾವ್ (ಚಿತ್ರಕಲೆ), ಡಾ| ಸತೀಶ್ ಎನ್. ಬಂಗೇರ (ಸಮಾಜ ಸೇವೆ), ಜಯರಾಮ್ ಉಡುಪ (ಧಾರ್ಮಿಕ), ಡಿ.ಬಿ. ನಾಯಕ್ (ಸಮಾಜಸೇವೆ), ಪದ್ಮಾವತಿ ಸಚ್ಚಿದಾನಂದ ಗುಪ್ತ (ಅಲಂಕಾರ), ಶಾಂತಾ ಕುಂಟಿನಿ (ಸಾಹಿತ್ಯ), ಚಂದ್ರಹಾಸ ದೇವಾಡಿಗ (ಸಂಘಟನೆ), ಶಿಲ್ಪಿ ಕೆ. ಶಿವರಾಮ ಆಚಾ ರ್ಯ (ಕಲೆ), ಪರಂಜ್ಯೋತಿ ಕೃತಿಗೆ ವಿಶೇಷ ಪುರಸ್ಕಾರ ಲೇಖಕಿ ಕೆ. ಲಕ್ಷ್ಮೀಯವರಿಗೆ ಹಾಗೂ ಸ್ನಿತಿಕ್, ಸನ್ವಿತ್ ಕುಲಾಲ್, ಅನನ್ಯಾ, ಶೃಜನ್ಯಾ, ಆದ್ಯಾ ಅವರಿಗೆ ಕರ್ನಾಟಕ ಚೇತನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ತೀಯಾ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಾಡ, ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಡುಪಿ ಪತ್ರಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ಡಾ| ಶೇಖರ ಅಜೆಕಾರು, ಭುವನಾಭಿರಾಮ ಉಡುಪ, ತಾರಸಿ ಕೃಷಿಕ ಡಾ| ಪಡ್ಡಂಬೈಲು ಕೃಷ್ಣಪ್ಪಗೌಡ ಹಾಗೂ ಯಶ್ವಿತ್ ಕಾಳಮ್ಮನೆ ಮತ್ತು ಸುಧಾರಾಜು, ಸುನೀತಾ, ಪ್ರದೀಪ್‌ಕುಮಾರ್ ಉಪಸ್ಥಿತರಿದ್ದರು.
Related Articles
ಕವಿಗೋಷ್ಠಿಯಲ್ಲಿ ಸೋಮಶೇಖರ ಹಿಪ್ಪರಗಿ, ಇಬ್ರಾಹಿಂ ಖಲೀಲ್, ಅಪ್ನಾನ್ ಕರಾಯಾ, ಪ್ರೀತಮ್ ಮಿಜಾರು, ಅನ್ಸಾಲ್ ಚಿಪ್ಪಾರ್, ಗಣೇಶ್ ಅದ್ಯಪಾಡಿ, ಯಶವಂತ್ ಕುದ್ರೋಳಿ, ಡಾ| ಜಯಶ್ರೀ ಕದ್ರಿ, ಬಶೀರ್ ಅಹ್ಮದ್ ಬಂಟ್ವಾಳ, ಕೆ.ಆರ್. ಹಲಗಿ ಅವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಬದ್ರುದ್ದೀನ್ ಕೂಳೂರು ಅಧ್ಯಕ್ಷತೆ ವಹಿಸಿದ್ದರು.
Advertisement