Advertisement
ವಿವಿಯ ಇರ್ವಿಂಗ್ ಮೆಡಿಕಲ್ ಸೆಂಟರ್ ಈ ಬಗ್ಗೆ ವೈದ್ಯಕೀಯ ಇತಿಹಾಸ ಸರಣಿಯಲ್ಲಿ ಪ್ರಸ್ತಾಪಿಸಿದೆ.ಸುಶ್ರುತ ಸಂಹಿತೆಯಲ್ಲಿ 1,100ಕ್ಕೂ ಹೆಚ್ಚು ರೋಗಗಳನ್ನು ದಾಖಲಿಸಲಾಗಿದೆ. ಇದರಲ್ಲಿ ನೂರಾರು ಔಷಧೀಯ ಸಸ್ಯಗಳನ್ನೂ ಉಲ್ಲೇಖೀಸಲಾಗಿದೆ. ಹಲವು ರೀತಿಯ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ವಿಧಾನಗಳನ್ನೂ ಇದರಲ್ಲಿ ಉಲ್ಲೇಖೀಸಲಾಗಿದೆ. ಮೂರು ವಿಧದ ಚರ್ಮ ಕಸಿ ಹಾಗೂ ಮೂಗನ್ನು ಮರು ರೂಪಿಸುವ ಬಗ್ಗೆ ಸುಶ್ರುತ ಸಂಹಿತೆಯಲ್ಲಿ ಉಲ್ಲೇಖೀಸಲಾಗಿದೆ. ಆ ಕಾಲದಲ್ಲಿ ಕಳ್ಳತನ ಅಥವಾ ಇತರ ಅಪರಾಧಕ್ಕೆ ಮೂಗು ಕತ್ತರಿಸುವ ಶಿಕ್ಷೆ ನೀಡಲಾಗುತ್ತಿತ್ತು. ಇದಕ್ಕಾಗಿ ಮೂಗು ಮರುರೂಪಿಸುವ ಬಗ್ಗೆ ಸುಶ್ರುತ ಸಂಹಿತೆಯಲ್ಲಿ ಉಲ್ಲೇಖೀಸಲಾಗಿದೆ. ಚರ್ಮ ಕಸಿ ತಂತ್ರವನ್ನೇ ಈಗಿನ ವೈದ್ಯರು ಬಳಸುತ್ತಿದ್ದಾರೆ. ಇದನ್ನು 2500 ವರ್ಷಗಳ ಹಿಂದೆಯೇ ವಿವರವಾಗಿ ಸುಶ್ರುತ ಸಂಹಿತೆಯಲ್ಲಿ ವಿವರಿಸಲಾಗಿದೆ.