Advertisement

Reclassification: ಮರು ವಿಂಗಡಣೆ: ಜಿಪಂ 29, ತಾಪಂ 107 ಕ್ಷೇತ್ರ

04:27 PM Sep 09, 2023 | Team Udayavani |

ಕೋಲಾರ: ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗವು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಗಡಿಗಳನ್ನು ಗುರುತಿಸಿ ಗಡಿ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ಪಟ್ಟಿಯನ್ನು ಪ್ರಕಟಿಸಿದೆ.

Advertisement

ಸೆ.5 ರಂದು ಪ್ರಕಟಿಸಿರುವ ಈ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದ್ದು, ಸೆ.19 ಸಂಜೆ 5 ಗಂಟೆಯೊಳಗಾಗಿ ಆನ್‌ಲೈನ್‌, ಅಂಚೆ ಅಥವಾ ಖುದ್ದಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

ಜಿಪಂ, ತಾಪಂ ಕ್ಷೇತ್ರಗಳು: ಕೋಲಾರ ಜಿಲ್ಲೆ ಯಲ್ಲಿ ಒಟ್ಟು 29 ಜಿಪಂ ಕ್ಷೇತ್ರಗಳು ಹಾಗೂ 107 ತಾಪಂ ಕ್ಷೇತ್ರಗಳನ್ನು ಸೃಜಿಸಲಾಗಿದ್ದು, ಕ್ಷೇತ್ರದ ಹೆಸರು ಮತ್ತು ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಪಟ್ಟಿ ಯನ್ನು ಕರ್ನಾಟಕ ಸರ್ಕಾರದ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. 2016 ರಲ್ಲಿ ಜಿಪಂ, ತಾಪಂ ಚು ನಾವಣೆ ನಡೆದ ಸಂದರ್ಭದಲ್ಲಿ ಕೋಲಾರ ಜಿಲ್ಲೆಯಲ್ಲಿ 30 ಜಿಪಂ ಕ್ಷೇತ್ರಗಳು ಹಾಗೂ 111 ತಾಪಂ ಕ್ಷೇತ್ರಗಳಿದ್ದವು. ಇದಕ್ಕೆ ಹೋಲಿಸಿದರೆ ಈಗ 1 ಜಿಪಂ ಕ್ಷೇತ್ರ ಹಾಗೂ 4 ತಾಪಂ ಕ್ಷೇತ್ರಗಳು ಕಡಿಮೆಯಾಗಿವೆ. ಕೋಲಾರ ತಾಲೂಕಿನಲ್ಲಿ ವೇಮಗಲ್‌ ಅನ್ನು ಪಟ್ಟಣ ಪಂಚಾಯ್ತಿ ಮಾಡಿರುವುದರಿಂದ 1 ಜಿಪಂ ಮತ್ತು ಕೆಜಿಎಫ್‌ ತಾಲೂಕು ಹೊಸದಾಗಿ ಸೃಷ್ಟಿಯಾಗಿರುವುದರಿಂದ 4 ತಾಪಂ ಕ್ಷೇತ್ರಗಳು ಕಡಿಮೆಯಾಗುವಂತಾಗಿದೆ.

ಬಿಜೆಪಿ ಸರ್ಕಾರವು ಒಮ್ಮೆ ಕ್ಷೇತ್ರಗಳ ಅಧಿಸೂಚನೆ ಪ್ರಕಟಿಸಿತ್ತು. ನಂತರ ಕ್ಷೇತ್ರಗಳ ಮೀಸಲಾತಿ ಯನ್ನು ನಿಗದಿಪಡಿಸಿತ್ತು. ಆನಂತರ ಆ ಪಟ್ಟಿ ಬದಲಾಗಿ ಮತ್ತೂಂದು ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರವು ಹೊಸ ಪಟ್ಟಿಯನ್ನು ಪ್ರಕಟಿಸಿದೆ. ಕ್ಷೇತ್ರದ ಹೆಸರುಬಹುತೇಕ ಅದೇ ಇದ್ದರೂ, ಕ್ಷೇತ್ರದ ಗಡಿಗಳಲ್ಲಿ ಗ್ರಾಮಗಳಲ್ಲಿ ಕೊಂಚ ವ್ಯತ್ಯಾಸಗಳಾಗಿವೆ. ಕೋಲಾರ ತಾಲೂಕಿನಲ್ಲಿ ಸೃಷ್ಟಿಸಿದ್ದ ಖಾದ್ರಿಪುರ ಜಿಪಂ ಕ್ಷೇತ್ರವನ್ನು ತೆಗೆದು ಯಥಾ ಪ್ರಕಾರ ನರಸಾಪುರ ಕ್ಷೇತ್ರವನ್ನು ಉಳಿಸಿಕೊಳ್ಳಲಾಗಿದೆ.

ಚುನಾವಣೆ ನಡೆದು ಏಳು ವರ್ಷವಾಯಿತು: ಸಾಮಾನ್ಯವಾಗಿ ಜಿಪಂ ತಾಪಂಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು. ಆದರೆ, ಈ ಬಾರಿ ಚುನಾವಣೆ ನಡೆದು ಏಳು ವರ್ಷವಾದರೂ ಹೊಸದಾಗಿ ಆಡಳಿತ ಮಂಡಳಿಗಳು ಜಿಪಂ, ತಾಪಂಗಳಿಗೆ ಆಯ್ಕೆಯಾಗಿಲ್ಲ. ಸರ್ಕಾರಗಳಿಗೆ ಜಿಪಂ ಮತ್ತು ತಾಪಂ ಆಡಳಿತ ಮಂಡಳಿಗಳನ್ನು ಆಯ್ಕೆ ಮಾಡುವಲ್ಲಿ ಆಸಕ್ತಿ ತೋರಿಸದಿರುವುದೇ ಇದಕ್ಕೆ ಕಾರಣವಾಗಿದೆ. ಕ್ಷೇತ್ರ ಪುನರ್‌ ವಿಂಗಡನೆ ನೆಪದಲ್ಲಿ ಜಿಪಂ ತಾಪಂ ಕ್ಷೇತ್ರಗಳ ಪಟ್ಟಿಯನ್ನು ಅಂತಿಮಗೊಳಿಸದೆ, ಕ್ಷೇತ್ರಗಳ ಮೀಸಲಾತಿ ನಿಗದಿಪಡಿಸದ ಕಾರಣದಿಂದ ಚುನಾವಣೆಗಳು ವಿಳಂಬವಾಗುತ್ತಲೇ ಇದೆ. ಬಿಜೆಪಿ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅಷ್ಟಾಗಿ ಆಸಕ್ತಿ ತೋರಿಸಿರಲಿಲ್ಲ. ಅದೇ ರೀತಿಯಲ್ಲಿಯೇ ಗ್ಯಾರಂಟಿಗಳ ಅನುಷ್ಠಾನಕ್ಕೆ ಗಮನ ಹರಿಸುತ್ತಿರುವ ಕಾಂಗ್ರೆಸ್‌ ಸರ್ಕಾರವು ಜಿಪಂ, ತಾಪಂಗಳನ್ನು ಆಡಳಿತಾಧಿಕಾರಿಗಳ ಆಡಳಿತದಲ್ಲಿಯೇ ನಡೆಸಲು ಬಿಟ್ಟಿದೆ. ಒಂದು ಅಂದಾಜಿನ ಪ್ರಕಾರ ಜಿಪಂ, ತಾಪಂ ಚುನಾವಣೆ ಲೋಕಸಭಾಚುನಾವಣೆಗೂಮುನ್ನವೇ ನಡೆಯಬೇಕು. ಲೋಕಸಭಾ ಚುನಾವಣೆ ನಿಗದಿತ ವೇಳೆಗಿಂತಲೂ ಮುಂಚಿತವಾಗಿ ನಡೆದಲ್ಲಿ ಜಿಪಂ, ತಾಪಂ ಚುನಾವಣೆ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆಗಳು ಇವೆ.

Advertisement

ಕೋಲಾರ ಜಿಲ್ಲೆಯ ತಾಲೂಕು ಪಂಚಾಯ್ತಿ ಕ್ಷೇತ್ರದ ಹೆಸರು:

ಕೋಲಾರ(20): ಶಾಪೂರು, ಹುತ್ತೂರು, ವಡಗೂರು, ಮಣಿಘಟ್ಟ, ಹೋಳೂರು, ಮುದುವಾಡಿ, ಅರಹಳ್ಳಿ, ಸುಗಟೂರು, ತೊಟ್ಲಿ, ಮದ್ದೇರಿ, ಬೀಚಗೊಂಡನಹಳ್ಳಿ, ಕ್ಯಾಲನೂರು, ರಾಜಕಲ್ಲಹಳ್ಳಿ, ನರಸಾಪುರ, ಬೆಳ್ಳೂರು, ಅರಾಭಿಕೊತ್ತ ನೂರು, ಕೊಂಡರಾಜನಹಳ್ಳಿ, ಛತ್ರಕೋಡಿಹಳ್ಳಿ, ಮುದುವತ್ತಿ, ವಕ್ಕಲೇರಿ.

ಕೆಜಿಎಫ್‌(12): ಕೆಂಪಾಪುರ, ಮಾರಿಕುಪ್ಪ, ಪಾರಂಡಹಳ್ಳಿ, ಕ್ಯಾಸಂಬಳ್ಳಿ, ಪೀಲವಾರ, ರಾಮಸಾಗರ, ಎನ್‌.ಜಿ.ಹುಲ್ಕೂರು, ಸುಂದರಪಾಳ್ಯ, ಹಂಗಳ, ಬೇತಮಂಗಲ, ಕಮ್ಮಸಂದ್ರ, ಟಿ.ಗೊಲ್ಲಹಳ್ಳಿ.

ಮಾಲೂರು(20): ತೊರ್ನಹಳ್ಳಿ, ಶಿವಾರಪಟ್ಟಣ, ಸೊಣ್ಣಹಳ್ಳಿ, ಅರಳೇರಿ, ಕುಡಿಯನೂರು, ಹುಲಿಮಂಗಲ ಹೊಸಕೋಟೆ, ಲಕ್ಕೂರು, ಚಿಕ್ಕತಿರುಪತಿ, ಜಯಮಂಗಲ, ಡಿ.ಎನ್‌.ದೊಡ್ಡಿ, ಮಾಸ್ತಿ, ಸುಗ್ಗೊಂಡಹಳ್ಳಿ, ದಿನ್ನಹಳ್ಳಿ, ದೊಡ್ಡಕಲ್ಲಹಳ್ಳಿ, ನೂಟವೆ, ಬನಹಳ್ಳಿ, ಟೇಕಲ್‌, ಕಾವಲಗಿರಿಯಲಹಳ್ಳಿ. ಮುಳಬಾಗಿಲು(21): ಆವಣಿ, ದೇವರಾಯಸಮುದ್ರ, ಬಲ್ಲ, ಕನ್ನಸಂದ್ರ, ಯಳಚೇಪಲ್ಲಿ, ತಾಯಲೂರು, ಸೊನ್ನವಾಡಿ, ಪದ್ಮಘಟ್ಟ, ಆಲಂಗೂರು, ಗುಮ್ಮಕಲ್‌, ಎನ್‌.ಚಮಕಲಹಳ್ಳಿ, ನಂಗಲಿ, ಮುಷ್ಟೂರು, ಹೆಬ್ಬಣಿ, ಬೈರಕೂರು, ಗುಡಿಪಲ್ಲಿ, ಎಚ್‌.ಗೊಲ್ಲಹಳ್ಳಿ, ಆಂಬ್ಲಿಕಲ್‌, ದುಗ್ಗಸಂದ್ರ, ಉತ್ತನೂರು, ಅಗರ.

ಬಂಗಾರಪೇಟೆ(16) ಸೂಲಿಕುಂಟೆ, ಚಿಕ್ಕಅಂಕಂಡಹಳ್ಳಿ, ಹುನುRಂದ, ಕಾರಹಳ್ಳಿ, ದೊಡೂxರು ಕರಪನಹಳ್ಳಿ, ಚಿನ್ನಕೋಟೆ, ಬೆಂಗನೂರು, ದೊಡ್ಡವಲಗಮಾದಿ, ಹುಲಿಬೆಲೆ, ಬೂದಿಕೋಟೆ, ಯಳೇಸಂದ್ರ, ಗುಲ್ಲಹಳ್ಳಿ, ಬಲಮಂದೆ, ದೋಣಿಮಡಗು, ಕಾಮಸಮುದ್ರ, ಕೇತಗಾನಹಳ್ಳಿ.

ಶ್ರೀನಿವಾಸಪುರ(18): ಮುತ್ತಕಪಲ್ಲಿ, ಹೊದಲಿ, ಯಲ್ದೂರು, ದಳಸನೂರು, ಚಲ್ದಿಗಾನಹಳ್ಳಿ, ತಿಮ್ಮಸಂದ್ರ, ಅರಿಕುಂಟೆ, ತಾಡಿಗೋಳ್‌, ನೆಲವಂಕಿ, ಸೋಮಯಾಜಲಪಲ್ಲಿ, ಪುಲಗೂರುಕೋಟೆ, ಗೌಡತಾನಗಡ್ಡ, ರಾಯಲ್ಪಾಡು, ಮುದಿಮಡಗು, ಅಡ್ಡಗಲ್‌, ಗೌನಿಪಲ್ಲಿ, ಕುರಿಗೇಪಲ್ಲಿ.

ಸಂವಿಧಾನದ ಪ್ರಕಾರ ಜಿಪಂ, ತಾಪಂಗೆ ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯಬೇಕಿತ್ತು. ಚುನಾವಣೆ ವಿಳಂಬವಾಗಲು ಆಡಳಿತದಲ್ಲಿ ಇರುವ ಯಾವುದೇ ಸರ್ಕಾರ ಕಾರಣವಾಗಿವೆ. ಈಗಲಾದರೂ ಚುನಾವಣೆ ನಡೆಸಿ ಜಿಪಂ, ತಾಪಂಗಳಿಗೆ ಆಡಳಿತ ಮಂಡಳಿ ಆಯ್ಕೆಯಾದರೆ ಗ್ರಾಮೀಣ ಭಾಗದಲ್ಲಿ ಕುಂಠಿತವಾಗಿರುವ ಅಭಿವೃದ್ಧಿ ಕಾರ್ಯ ಚುರುಕುಗೊಳ್ಳಲು ಸಾಧ್ಯವಾಗುತ್ತದೆ. ● ವರದೇನಹಳ್ಳಿ ವೆಂಕಟೇಶ್‌, ಮುಖಂಡಜಿಪಂ, ತಾಪಂ

ಆಡಳಿತ ಮಂಡಳಿ ಅವಧಿ ಮುಗಿದು ಎರಡು ವರ್ಷಗಳಾಗಿವೆ. ಚುನಾ ವಣೆ ನಡೆದು ಆಡಳಿತ ಮಂಡಳಿ ಆಯ್ಕೆಯಾದರೆ ಮಾತ್ರವೇ ಗ್ರಾಮೀಣಾಭಿವೃದ್ಧಿ ಚುರುಕಾಗಿ ಸಾಗಲು ಸಾಧ್ಯ. ಸರ್ಕಾರ ಕೂಡಲೇ ಜಿಪಂ, ತಾಪಂಗಳಿಗೆ ಚುನಾವಣೆ ನಡೆಸುವುದು ಸೂಕ್ತ. ● ಸಿ.ಎಸ್‌.ವೆಂಕಟೇಶ್‌, ಜಿಪಂ ಮಾಜಿ ಅಧ್ಯಕ್ಷ, ಕೋಲಾರ ಪಂಚಾಯತ್‌ ರಾಜ್‌

ವಿಕೇಂದ್ರಿಕರಣ ವ್ಯವಸ್ಥೆಯನ್ನು ಬಲಪಡಿಸಲು ಜಿಪಂ, ತಾಪಂ ಹಂತದಲ್ಲಿ ಸಕಾಲದಲ್ಲಿ ಚುನಾವಣೆ ನಡೆಯಬೇಕು. ಆಡಳಿತ ಮಂಡಳಿ ಆಯ್ಕೆಯಾದರೆ ಗ್ರಾಮೀಣ ನಾಯಕತ್ವಕ್ಕೆ ಅಧಿಕಾರ ದೊರೆಯುತ್ತದೆ. ಈಗ ಚುನಾವಣೆ ಇಲ್ಲದೆ ಗ್ರಾಮೀಣಾಭಿವೃದ್ಧಿ ನಿಂತ ನೀರಾಗಿದೆ. ಚುನಾವಣೆ ನಡೆಸಲು ಸರ್ಕಾರ ಮತ್ತು ಶಾಸಕರಿಗೂ ಆಸಕ್ತಿ ಇಲ್ಲ. ಹೆಚ್ಚು ಆಕಾಂಕ್ಷಿಗಳು ಕಾಯುತ್ತಿರುವುದರಿಂದ ಶಾಸಕರು ಚುನಾವಣೆ ಮುಂದೂಡುವುದರಲ್ಲಿ ಸಂತೋಷ ಕಾಣುತ್ತಿದ್ದಾರೆ. ● ವಕ್ಕಲೇರಿ ರಾಜಪ್ಪ, ಮುಖಂಡ, ಕೋಲಾರ

 -ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next