Advertisement
ಗ್ರಾಹಕರಿಗೆ ಕೈಗೆಟುಕುವ ರೀಚಾರ್ಜ್ ಯೋಜನೆಗಳನ್ನು ತಂದಿದ್ದು, ಅವರ ಸಿಂಧುತ್ವವು 1 ವರ್ಷದವರೆಗೆ ಇರಲಿದೆ. ತಿಂಗಳಿಗೆ 125 ರೂ. ಗಳಿಗಿಂತ ಕಡಿಮೆ ಹೊಂದಿರುವ ರೀಚಾರ್ಚ್ ಇದಾಗಿದ್ದು. ಹಲವು ವಿಶೇಷತೆಗಳನ್ನು ಒಳಗೊಂಡಿದೆ.
Related Articles
Advertisement
ಇನ್ನು, ಜೀಯೋ ನೀಡುತ್ತಿರುವ ಈ ಭರ್ಜರಿ ಆಫರ್ ನಲ್ಲಿ 3,600 ಮೆಸೇಜ್ ಗಳು ಅಥವಾ ಸಂದೇಶಗಳು ಗ್ರಾಹಕರಿಗೆ ದೊರಕಲಿದ್ದು, 336 ದಿನಗಳವರೆಗೆ ಬಳಸಬಹುದಾಗಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಜಿಯೋ ಸಾವನ್, ಜಿಯೋ ಟಿವಿ, ಜಿಯೋ ಸಿನೆಮಾ ಮತ್ತು ಜಿಯೋ ಆಪ್ ಚಂದಾದಾರಿಕೆ ಸಹ ಲಭ್ಯವಿದೆ.
ದೇಶದ ದೈತ್ಯ ಟೆಲಿಕಾಂ ನೆಟ್ ವರ್ಕ್ ಏರ್ಟೆಲ್ ನ ಯೋಜನೆ :
ಏರ್ ಟೆಲ್ ಕೇವಲ 1,498 ರೂಗಳಿಗೆ ಪೂರ್ಣ ವರ್ಷದ ಮಾನ್ಯತೆ ಹೊಂದಿರುವ ರೀಚಾರ್ಚಜ್ ಆಫರ್ ನನ್ನು ನೀಡುತ್ತಿದೆ. ಅಂದರೆ, ಗ್ರಾಹಕರು ತಿಂಗಳಿಗೆ ಕೇವಲ 124.8 ರೂ. ಪಾವತಿಸಿದಂತಾಗುತ್ತದೆ. ಏರ್ ಟೆಲ್ ನ ಈ ಯೋಜನೆಯಲ್ಲಿ ಗ್ರಾಹಕರಿಗೆ 3,600 ಮೆಸೇಜ್ ಗಳನ್ನು ನೀಡಲಾಗಿದ್ದು, ಇದು ಒಂದು ವರ್ಷದ ಸಂಪೂರ್ಣ ಮಾನ್ಯತೆಯನ್ನು ಹೊಂದಿದೆ.
ಪೂರ್ಣ ವರ್ಷಕ್ಕೆ 24 ಜಿಬಿ ಡಾಟಾವನ್ನು ಈ ರೀಚಾರ್ಜ್ ಆಫರ್ ನೀಡುತ್ತಿದ್ದು, ಈ ರೀಚಾರ್ಜ್ ಯೋಜನೆಯಡಿಯಲ್ಲಿ, ಬಳಕೆದಾರರು ವರ್ಷವಿಡೀ ಯಾವುದೇ ನೆಟ್ ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡಬಹುದು. ಉಚಿತ ಹೆಲೋಟೂನ್ಸ್, ಏರ್ಟೆಲ್ ಎಕ್ಸ್ ಸ್ಟ್ರೀಮ್ ಆ್ಯಪ್ ಪ್ರೀಮಿಯಂ ಮತ್ತು ಅನಿಯಮಿತ ಡೌನ್ ಲೋಡ್ ಜೊತೆಗೆ ವಿಂಕ್ ಮ್ಯೂಸಿಕ್ ನ ಚಂದಾದಾರಿಕೆಯೂ ಕೂಡ ಲಭ್ಯವಿದೆ.
ವೊಡಾಫೋನ್-ಐಡಿಯಾ ನೀಡುತ್ತಿರುವ ಆಫರ್ ಹೇಗಿದೆ..?
ವೊಡಾಫೋನ್ ಐಡಿಯಾದಲ್ಲಿ ವರ್ಷಪೂರ್ತಿ ರೀಚಾರ್ಜ್ ಯೋಜನೆ ಬೆಲೆ ಕೇವಲ 1,499 ರೂ. ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ, ಅಂದರೆ ಇದರ ಬೆಲೆ ತಿಂಗಳಿಗೆ ಕೇವಲ 124.91 ರೂ. ವೊಡಾಫೋನ್ ಐಡಿಯಾದಈ ಯೋಜನೆಯು ವರ್ಷಕ್ಕೆ 3,600 ಸಂದೇಶಗಳನ್ನು ಮತ್ತು 24 ಜಿಬಿ ಡೇಟಾವನ್ನು ಒದಗಿಸುತ್ತದೆ. ಇದರ ಅಡಿಯಲ್ಲಿ, ಬಳಕೆದಾರರು ಯಾವುದೇ ನೆಟ್ ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯಬಹುದು.
ಓದಿ : 10 ಸಾವಿರ ರೂ. ಪರಿಹಾರ ನೀಡಲು ನಾವು ದುಡ್ಡು ಪ್ರಿಂಟ್ ಮಾಡ್ತೀವಾ?: ಸಚಿವ ಈಶ್ವರಪ್ಪ