ನವ ದೆಹಲಿ : ದೇಶದ ಅತ್ಯಂತ ದೊಡ್ಡ ಟೆಲಿಕಾಂ ನೆಟ್ ವರ್ಕ್ ಸಂಸ್ಥೆ ರಿಲಯನ್ಸ್ ಜಿಯೋ ಕಂಪೆನಿಯು ಮತ್ತೊಂದು ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.
ಟೆಲಿಕಾಂ ನೆಟ್ ವರ್ಕ್ ನಲ್ಲಿನ ದೈತ್ಯ ಕಂಪನಿಗಳ ಭಾರಿ ಪೈಪೋಟಿಯ ನಡುವೆ ರಿಲಯನ್ಸ್ ಜಿಯೋ ‘ಎಮೆರ್ಜೆನ್ಸಿ ಡೇಟಾ ಲೋನ್’ ಅಥವಾ ತುರ್ತು ಡೇಟಾ ಸಾಲ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದು ಯಾವುದೇ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಪ್ರಯೋಜನವಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಇದನ್ನೂ ಓದಿ : ಕೋವಿಡ್ ಸೋಂಕನ್ನು ಹೊರದೇಶದಿಂದ ತಂದಿದ್ದು ನರೇಂದ್ರ ಮೋದಿ: ಧ್ರುವನಾರಾಯಣ್
ಜಿಯೋ ಗ್ರಾಹಕರು ಮೈ ಜಿಯೋ ಅಪ್ಲಿಕೇಶನ್ ಮೂಲಕ ಈ ಯೋಜನೆಯ ಲಾಬವನ್ನು ಪಡೆದುಕೊಳ್ಳಬಹುದಾಗಿದೆ. ಕೇವಲ 11 ರೂ ಗೆ 1 ಜಿಬಿ ಡೇಟಾ ವನ್ನು ಸಾಲದ ರೂಪದಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ. ಹೀಗೆ ಮೈ ಜಿಯೋ ಅಪ್ಲಿಕೇಶನ್ ಮೂಲಕ ಹನ್ನೊಂದು ರೂಪಾಯಿಯ 1 ಜಿಬಿ ಡೇಟಾವನ್ನು ಒಬ್ಬ ಗ್ರಾಹಕ ಅಂದರೇ, ಒಂದು ನಂಬರ್ ಗೆ ಐದು ಬಾರಿ ಪಡೆದುಕೊಳ್ಳಬಹುದಾಗಿದೆ.
ಗರಿಷ್ಠ ವೇಗದ ನಿತ್ಯದ ಡೇಟಾ ಮಿತಿಯು ಮುಗಿದ ತಕ್ಷಣವೇ ರಿಚಾರ್ಜ್ ಮಾಡಿಸಲು ಸಾಧ್ಯವಾಗದೇ ಇರುವವರಿಗೆ ಜಿಯೊದ ಹೊಸ ಯೋಜನೆಯಿಂದ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ಟೆಲಿಕಾಂ ತಜ್ಷರು ಅಭಿಪ್ರಾಯ ಪಟ್ಟಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಮಲ್ಲೇಶ್ವರಂ ಕ್ಷೇತ್ರದಲ್ಲಿ ಲಸಿಕಾ ಅಭಿಯಾನ ತ್ವರಿತಗೊಳಿಸಲು ಅಶ್ವತ್ಥ ನಾರಾಯಣ ಒತ್ತು