Advertisement

ಮೂರನೇ ಒಂದರಷ್ಟು ಮಂದಿಗೆ ಆರ್ಥಿಕ ಹಿಂಜರಿಕೆಯಿಂದ ತೊಂದರೆ

09:49 PM Jan 02, 2023 | Team Udayavani |

ವಾಷಿಂಗ್ಟನ್‌: ಶೀಘ್ರವೇ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿರುವ ಆರ್ಥಿಕ ಹಿಂಜರಿತ ಜಗತ್ತಿನ ಮೂರನೇ ಒಂದರಷ್ಟು ಮಂದಿಗೆ ತೊಂದರೆಯಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥೆ ಕ್ರಿಸ್ಟಿಲಾ ಜಾರ್ಜಿಯೇವಾ ಎಚ್ಚರಿಸಿದ್ದಾರೆ.

Advertisement

ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಚೀನಾಕ್ಕೆ ನೇರವಾಗಿ ಅದರ ಬಿಸಿ ತಟ್ಟಲಿದೆ ಎಂದು ಹೇಳಿದ್ದಾರೆ. ಸಿಬಿಎಸ್‌ ಸುದ್ದಿ ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕ ಹಿಂಜರಿತ ಕಾಡದೇ ಇದ್ದ ರಾಷ್ಟ್ರಗಳಿಗೆ ಕೂಡ ಅದರ ಪ್ರತಿಕೂಲ ಪರಿಣಾಮ ಪರೋಕ್ಷವಾಗಿ ಉಂಟಾಗಲಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಐಎಂಎಫ್ ಜಗತ್ತಿನ ಆರ್ಥಿಕ ಬೆಳವಣಿಗೆಯ ದರವನ್ನು ತಗ್ಗಿಸಿತ್ತು. ಈ ವರ್ಷ ಜಗತ್ತಿನ ಆರ್ಥಿಕ ಬೆಳವಣಿಗೆ ಶೇ.2.7 ಆಗಲಿದೆ ಎಂದು ಮುನ್ಸೂಚನೆ ನೀಡಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next