Advertisement

ಚಿನ್ನದ ಪದಕ ಸಿಗದಿದ್ದರೆ ಕೋರ್ಟ್‌ಗೆ ಮೊರೆ

02:45 PM Feb 14, 2017 | |

ಧಾರವಾಡ: ಎಂ.ಎ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದರೂ ಚಿನ್ನದ ಪದಕದಿಂದ ವಂಚಿತ ಮಾಡಲಾಗುತ್ತಿದ್ದು, ಫೆ.18ರಂದು ನಿಗದಿ ಮಾಡಿರುವ ಕವಿವಿ ಸಿಂಡಿಕೇಟ್‌ ಸಭೆಯಲ್ಲಿ ನ್ಯಾಯ ಸಿಗದಿದ್ದರೆ ನ್ಯಾಯಾಂಗದ ಮೊರೆ ಹೋಗುವುದಾಗಿ ಎಂ.ಎ ವಿದ್ಯಾರ್ಥಿ ಶಂಕರ ಚಿಕ್ಕೋಡಿ ಎಚ್ಚರಿಸಿದ್ದಾರೆ. 

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಡ್‌ ನಂತರ ವಿವಿಧ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಬೌದ್ಧಿಕ ಸಾಮರ್ಥ್ಯ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಚಿನ್ನದ ಪದಕ ನೀಡುವುದಿಲ್ಲ ಎಂಬ ಕವಿವಿ ಕುಲಪತಿ ಸುತ್ತೋಲೆ ಖಂಡನೀಯ. 

ಪ್ರವೇಶ ಪಡೆಯುವ ಪೂರ್ವದಲ್ಲಿಯೇ ಸುತ್ತೋಲೆ ಹೊರಡಿಸಿದ್ದರೆ ನಾವಿಂದು ಪ್ರಶ್ನೆ ಮಾಡುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಕನ್ನಡ ವಿಭಾಗದಲ್ಲಿ ಶೇ.80.30 ಅಂಕ ಪಡೆದಿದ್ದರೆ ಜಾನಪದ ವಿಭಾಗದಲ್ಲಿ ಶೇ. 82ರಷ್ಟು ಅಂಕ ಪಡೆದ ಸುಷ್ಮಿತಾ ಹಳ್ಳೇದ ಸೇರಿದಂತೆ ಉರ್ದು ಹಾಗೂ  ಹಿಂದಿ ವಿಷಯದಲ್ಲಿ ಹೆಚ್ಚು ಅಂಕ ಪಡೆದವರು ಪದಕದಿಂದ ವಂಚಿತರಾಗಿದ್ದಾರೆ.

ಬಿಎಡ್‌ ಹಾಗೂ ಇತರ ಪದವಿ ಪಡೆದು, ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮೊದಲಿನಿಂದಲೂ ಕವಿವಿ ಚಿನ್ನದ ಪದಕ ನೀಡುತ್ತಿದೆ. ಆದರೆ ಈ ಬಾರಿ ದಿಢೀರ್‌ ಬದಲಾವಣೆ ಮಾಡಿರುವ ಕ್ರಮ ಖಂಡನೀಯ ಎಂದರು. ಅಂಕಗಳ ಆಧಾರದ ಮೇಲೆ ನನಗೆ 8 ಚಿನ್ನದ ಪದಕ ಸಿಗಲಿವೆ.

ಆದರೆ ಬಿಎಡ್‌ ಮಾಡಿರುವ ನನಗೆ ಬೌದ್ಧಿಕ ಮಟ್ಟ ಹೆಚ್ಚಳ ಇರುವ ಕಾರಣ ನೀಡಿ ನನ್ನಂತೆ ಬಿಎಡ್‌ ಮಾಡಿದ ವಿದ್ಯಾರ್ಥಿಗಳನ್ನು ಚಿನ್ನದ ಪದಕಗಳಿಂದ ವಂಚಿತಗೊಳಿಸಲಾಗುತ್ತಿದೆ. ಈ ಕುರಿತು ಹಲವು ಬಾರಿ ಕುಲಪತಿ ಹಾಗೂ ಸಿಂಡಿಕೇಟ್‌ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದರೂ ಸಹ ಸೂಕ್ತ ಸ್ಪಂದನೆ ದೊರಕಿಲ್ಲ. ಹೀಗಾಗಿ ಫೆ.18ರಂದು ನಡೆಯುವ ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ನ್ಯಾಯಾಲಯ ಮೊರೆ ಹೋಗುವುದಾಗಿ ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next