Advertisement

ಬಡ ರೋಗಿಗಳ ಕಾಣಿಕೆ ಸ್ವೀಕರಿಸಿ,ಪರವಾಗಿಲ್ಲ: ರಮೇಶ್‌ ಕುಮಾರ್‌ 

05:55 AM Jul 20, 2017 | Team Udayavani |

ಶಿಡ್ಲಘಟ್ಟ: “ಸರಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ, ಅವರು ಪ್ರೀತಿಯಿಂದ ಏನಾದರೂ ನೀಡಿದರೆ ಅದನ್ನು ತೆಗೆದುಕೊಳ್ಳಿ, ತಮ್ಮ ಅಭ್ಯಂತರವಿಲ್ಲ’ ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್‌ ವೈದ್ಯರಿಗೆ ಸಲಹೆ ನೀಡಿದ್ದಾರೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬುಧವಾರ ತುರ್ತು ವಾಹನಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

“ಶ್ರೀಮಂತರು ಸರಕಾರಿ ಆಸ್ಪತ್ರೆಗಳಿಗೆ ಬರುವುದಿಲ್ಲ. ಬರುವವರು ಬಡವರೇ. ಬಡವರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿ, ಅವರು ಪ್ರೀತಿಯಿಂದ ಏನನ್ನಾದರೂ ನೀಡಿದರೆ ತೆಗೆದುಕೊಳ್ಳಿ, ನನ್ನ ಅಭ್ಯಂತರ ವಿಲ್ಲ. ಆದರೆ, ಚಿಕಿತ್ಸೆಯ ಹೆಸರಿನಲ್ಲಿ ಬಡವರನ್ನು ಸುಲಿಗೆ ಮಾಡಿ ರಕ್ತ ಹೀರುವ ಕೆಲಸ ಮಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ‘ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next