Advertisement

ಜೀವಶಕ್ತಿ ಕೋಟೆ ಮರು ನಿರ್ಮಾಣ!

10:16 AM Jul 21, 2019 | Team Udayavani |

ಬಾಗಲಕೋಟೆ: ಏಷ್ಯಾದಲ್ಲೇ ಹಿನ್ನೀರಿನಲ್ಲಿ ಮುಳುಗಡೆಯಾದ 2ನೇ ಜಿಲ್ಲಾ ಕೇಂದ್ರ ಎಂಬ ಖ್ಯಾತಿ ಪಡೆದ ಬಾಗಲಕೋಟೆಯ ಜೀವಶಕ್ತಿಯಂತಿರುವ, ಸದ್ಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ

Advertisement

ಅನಾಥವಾಗಿರುವ ಮುಳುಗಡೆ ಕೋಟೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ.

ನಗರಕ್ಕೆ ಜೀವಶಕ್ತಿಯಾಗಿ ನಿಂತಿದ್ದ ಇಲ್ಲಿನ ಕೋಟೆ, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಆಗಿ 20 ವರ್ಷಗಳೇ ಕಳೆದಿವೆ. ಗತ ಇತಿಹಾಸ ಹೊಂದಿದ್ದ ಹಾಗೂ ನಗರಕ್ಕೆ ಕೋಟೆನಾಡು ಎಂಬ ಹೆಸರು ತಂದಿದ್ದ ಕೋಟೆಗಳೇ ಮುಳುಗಿದಾಗ, ಅದರ ಪಳಿಯುಳಿಕೆ ಉಳಿಸಿಕೊಳ್ಳುವ ಪ್ರಯತ್ನ ನಡೆಯಲಿಲ್ಲ. ಆದರೆ, ಇದೀಗ ಇಂತಹವೊಂದು ಪ್ರಯತ್ನ ಚಿಗುರೊಡೆದಿದೆ.

ಬಾಗಿಲದ ಮೆರಗು ಈ ಕೋಟೆ: ನಗರದ ಘಟಪ್ರಭಾ ನದಿ ದಡದಲ್ಲಿ ಐದು ಬಾಗಿಲುಗಳು ಇರುವ ಕೋಟೆ ಇದೆ. ಇದನ್ನು ಇಂದಿಗೂ ನೋಡಲು ಸಿಗುತ್ತದೆ. ಹಿನ್ನೀರು ಬಂದಾಗ, ಶೇ. 80 ನೀರಿನಲ್ಲಿ ಮುಳುಗಿ, ತನ್ನ ಗೋಪುರವನ್ನು ಜನರಿಗೆ ತೋರಿಸಿ, ಸುಂದರತೆ ಮರೆಯುತ್ತದೆ. ಆದರೆ, ಈ ವರೆಗೆ ಈ ಕೋಟೆಯ ಬಗ್ಗೆ ಯಾರೂ ಗಮನ ಹರಿಸಿಲ್ಲ. ಅದಕ್ಕೊಂದು ಹೊಸ ರೂಪ ಕೊಡಲು ಅಥವಾ ಬಾಗಲಕೋಟೆ ಎಂಬ ನಗರದ ಹೆಸರಿನ ಕೊನೆಯ ಅಕ್ಷರಗಳು ಕೋಟೆ ಎಂದು ಬರಲು, ಇದೇ ಸ್ಮಾರಕ ಕಾರಣ ಎಂಬುದು ಗೊತ್ತಿದ್ದರೂ, ಅದರ ಮಹತ್ವ, ಮಾಹಿತಿ ಪಡೆದು, ಸ್ಮಾರಕವಾಗಿ ಉಳಿಸಿಕೊಳ್ಳುವ ಪ್ರಯತ್ನ ನಡೆದಿರಲಿಲ್ಲ.

ಹೊಸದಾಗಿ ಜಿಲ್ಲೆಗೆ ಬಂದಿರುವ ಯುವ ಐಎಎಸ್‌ ಅಧಿಕಾರಿ ಆರ್‌. ರಾಮಚಂದ್ರನ್‌, ಈ ನಗರಕ್ಕೆ ಕರೆಯುತ್ತಿದ್ದ ಹೆಸರಿನ ಗೊಂದಲದತ್ತ ಪ್ರಮುಖ ನೋಟ ಹರಿಸಿದ್ದರು. ಕೆಲವರು ಬಾಗಲಕೋಟ ಎಂದರೆ ಕರೆದರೆ, ಇನ್ನೂ ಕೆಲವರು ಬಾಗಲಕೋಟೆ ಎಂದು ಕರೆಯುತ್ತಿದ್ದರು. ಸರ್ಕಾರಿ ಅಧಿಕಾರಿಗಳೂ ಇಂತಹ ಬೇರೆ ಬೇರೆ ಹೆಸರಿನಲ್ಲಿ ಉಲ್ಲೇಖೀಸಿ, ಪತ್ರ ವ್ಯವಹಾರ ಮಾಡುತ್ತಿದ್ದರು. ಇದನ್ನು ಮನಗಂಡು, ಬಾಗಲಕೋಟ ಎಂಬ ಹೆಸರನ್ನು ಶಾಶ್ವತವಾಗಿ ಬಾಗಲಕೋಟೆ ಎಂದು ಮರು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದಾರೆ. ಜತೆಗೆ ಈ ಹೆಸರಿನ ಮೂಲ ಸ್ಥಳದ ಅಭಿವೃದ್ಧಿಗೆ ವಿಶೇಷ ಒತ್ತು ಕೊಡಲು ಮುಂದಾಗಿದ್ದಾರೆ.

Advertisement

ಸಮಗ್ರ ಮಾಹಿತಿ ಪಡೆದ ಜಿಲ್ಲಾಧಿಕಾರಿ: ಐದು ಬಾಗಿಲುಗಳ ಕೋಟೆಯನ್ನು ಹೊಸ ಜಿಲ್ಲಾಧಿಕಾರಿ ನೋಡಿರಲಿಲ್ಲ. ಶನಿವಾರ ಉತ್ತರ ಕರ್ನಾಟಕದ ಏಳು ಜನ ಫೋಟೋಗ್ರಾಫರ್‌ಗಳು ಕಸಾಪ ಆವರಣದಲ್ಲಿ ಫೋಟೋ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಲ್ಲಿ ಉದಯವಾಣಿಯ ಫೋಟೋಗ್ರಾಫರ್‌ ವಿಠuಲ ಮೂಲಿಮನಿ ಸೆರೆ ಹಿಡಿದ ಕೋಟೆ ಚಿತ್ರ ಕಂಡು, ಅಚ್ಚರಿಯಿಂದ ವೀಕ್ಷಿಸಿದರು. ಜತೆಗೆ ಕೋಟೆ ಬಾಗಿಲು ಇರುವ ಸ್ಥಳ, ಅದರ ವಿಶೇಷತೆ ಕುರಿತು ವಿಠuಲ ಅವರಿಂದ ಮಾಹಿತಿ ಪಡೆದರು.

ಪ್ರವಾಸೋದ್ಯಮಕ್ಕೆ ಹಸ್ತಾಂತರ: ಹಿನ್ನೀರಿನಲ್ಲಿ ಮುಳುಗಡೆಯಾದ ಭೂಮಿ ಹಾಗೂ ಕಟ್ಟಡಗಳು ಸದ್ಯ ಬಿಟಿಡಿಎ ಅಧೀನದಲ್ಲಿದ್ದು, ಕೋಟೆ ಕೂಡ ಅದರ ವ್ಯಾಪ್ತಿಗಿದೆ. ಅದನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಧನಪಾಲ್ ಅವರನ್ನು ಕರೆಯಿಸಿ, ಕೋಟೆ ಸಂರಕ್ಷಣೆ, ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಬೇಕಾದ ಅನುದಾನದ ಸಮಗ್ರ ವಿವರ ನೀಡಲು ನಿರ್ದೇಶನ ನೀಡಿದ್ದಾರೆ. ಹೀಗಾಗಿ ಹಲವು ವರ್ಷಗಳಿಂದ ಅನಾಥವಾಗಿದ್ದ ಬಾಗಲಕೋಟೆಯ ಕೋಟೆ, ಪ್ರವಾಸಿ ತಾಣವಾಗಿ ರೂಪುಗೊಳ್ಳುವ ನಿರೀಕ್ಷೆ ಚಿಗುರೊಡೆದಿದೆ.

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next