Advertisement
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ಸ್ಪಷ್ಟ ನೆ ನೀಡಿದ್ದು, ರಾಜ್ ಕುಮಾರ್ ಅವರ ಸಮಾಧಿ ಎದುರುಗಡೆ ಇರುವ ಸರಕಾರಿ ಜಾಗದಲ್ಲಿ ಅಂಬರೀಶ್ ಅವರ ಸಮಾಧಿ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.
Related Articles
Advertisement
ತೀರ್ಮಾನ ಮಾಡಲು ನಾವ್ಯಾರು? ರಾಘವೇಂದ್ರ ರಾಜ್‌ಕುಮಾರ್ ಅವರು ಅಂತಿಮ ದರ್ಶನಕ್ಕೆ ಆಗಮಿಸಿದ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಇದೆಲ್ಲಾ ತೀರ್ಮಾನ ಮಾಡಲಿಕ್ಕೆ ನಾವು ಯಾರು ? ಸರಕಾರ, ಕಲಾವಿದರ ಸಂಘ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾವು ಬದ್ಧ ಎಂದಿದ್ದಾರೆ. ಅಂಬರೀಶ್ ಅವರು ಚಿತ್ರರಂಗಕ್ಕೆ ತಂದೆಯ ಸಮಾನವಾಗಿದ್ದರು. ದಿನದ 24 ಗಂಟೆಯೂ ಚಿತ್ರ ರಂಗದ ಬಗ್ಗೆ ಯೋಚನೆ ಮಾಡುತ್ತಿದ್ದರು. ಅವರ ದೇಹ ಹೋಗಿರಬಹುದು ಆದರೆ ಆತ್ಮ ಸದಾ ನಮ್ಮೊಂದಿಗೆ ಇರುತ್ತದೆ ಎಂದರು.