Advertisement
ಚಿತ್ರರಂಗದ ಹಾಗೆಯೇ ರಾಜಕೀಯದಲ್ಲೂ ಉನ್ನತ ಹುದ್ದೆಗೇರಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಅಂಬರೀಶ್, ಇತ್ತೀಚಿನ ರಾಜಕೀಯದಲ್ಲಿನ ಬೆಳವಣಿಗೆಗಳಿಂದ ಬೇಸರಗೊಂಡು ತಟಸ್ಥರಾಗಿ ಉಳಿದಿದ್ದರು. ಆದರೆ, ರಾಜಕಾರಣದಲ್ಲಿ ಅವರ ತಾರಾ ವರ್ಚಸ್ಸು ಸಾಕಷ್ಟು ಕೆಲಸ ಮಾಡುತ್ತಿತ್ತು. ಅದರ ಪರಿಣಾಮ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ದೊರೆತ ಫಲಿತಾಂಶವೇ ಸಾಕ್ಷಿಯಾಗಿದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಮಾಜಿ ಸಂಸದ ಜಿ. ಮಾದೇಗೌಡ ನಂತರ ಮಂಡ್ಯ ಕಾಂಗ್ರೆಸ್‌ನಲ್ಲಿ ಅಂಬರೀಶ್ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದರು. ಜನತಾದಳದಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದರೂ ಎಸ್.ಎಂ. ಕೃಷ್ಣ ಅವರ ವಿರುದ್ಧ ದಿಕ್ಕಿನಲ್ಲಿ ರಾಜಕಾರಣ ಮಾಡಿ, ಜಿಲ್ಲೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈಗ ಅಂಬರೀಶ್ ಅವರ ಅಕಾಲಿಕ ನಿಧನದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪಕ್ಷವನ್ನು ಮುನ್ನಡೆಸುವಂತಹ ನಾಯಕರ ಕೊರತೆ ಇದೆ.