Advertisement

ಸ್ಪೀಕರ್‌ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ 8 ರೆಬೆಲ್‌ ಶಾಸಕರು

10:48 AM Jul 11, 2019 | Vishnu Das |

ಮುಂಬಯಿ: ಶಾಸಕಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನುಸ್ಪೀಕರ್‌ ರಮೇಶ್‌ ಕುಮಾರ್‌ ಅವರು ತಿರಸ್ಕರಿಸಿದ ಹಿನ್ನಲೆಯಲ್ಲಿ 8 ಮಂದಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದಾರೆ.

Advertisement

ಅತೃಪ್ತ ಶಾಸಕರ ಪರವಾಗಿ ನ್ಯಾಯಾಲಯದಲ್ಲಿ ಹಿರಿಯ ವಕೀಲ ಮುಕುಲ್‌ ರೋಹ್ಟಗಿ ಅವರು ವಾದ ಮಂಡನೆ ನಡೆಸಲಿದ್ದಾರೆ.

ಸ್ಪೀಕರ್‌ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಮರೆತು ರಾಜೀನಾಮೆಗಳನ್ನು ಸ್ವೀಕರಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಪೀಠ ಅರ್ಜಿಯ  ವಿಚಾರಣೆಯನ್ನು ನಾಳೆ ಗುರುವಾರ ಕೈಗೆತ್ತಿಕೊಳ್ಳಲಿದೆ.

ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌, ಹುಣಸೂರು
ಜೆಡಿಎಸ್‌ ಶಾಸಕ ಎಚ್‌. ವಿಶ್ವನಾಥ್‌, ಗೋಕಾಕ್‌ ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ,ಅಥಣಿ ಕಾಂಗ್ರೆಸ್‌ ಶಾಸಕ ಮಹೇಶ್‌ ಕುಮಟಳ್ಳಿ,ಯಲ್ಲಾಪುರ ಕಾಂಗ್ರೆಸ್‌ ಶಾಸಕ ಶಿವರಾಮ್‌ ಹೆಬ್ಟಾರ್‌, ಹಿರೆಕೇರೂರು„ಕಾಂಗ್ರೆಸ್‌ ಶಾಸಕ ಬಿ.ಸಿ. ಪಾಟೀಲ್‌, ಕೆ.ಆರ್‌.ಪುರಕಾಂಗ್ರೆಸ್‌ ಶಾಸಕಬೈರತಿ ಬಸವರಾಜ್‌,-ರಾಜರಾಜೇಶ್ವರಿ ನಗರ ಕಾಂಗ್ರೆಸ್‌ ಶಾಸಕ ಮುನಿರತ್ನ ಅವರ ರಾಜೀನಾಮೆ ಕ್ರಮ ಬದ್ಧವಾಗಿಲ್ಲ ಎಂದು ಸ್ವೀಕರ್‌ ತಿರಸ್ಕರಿಸಿ, ಕ್ರಮ ಬದ್ಧವಲ್ಲವಾಗಿರುವುದರಿಂದ ಪರಿಷ್ಕರಣೆಗೂ ಅವಕಾಶ ನೀಡಿದ್ದಾರೆ. ಉಳಿದ ಐವರು ಶಾಸಕರ ರಾಜೀನಾಮೆ ಕ್ರಮ ಬದ್ಧವಾಗಿದೆ ಎಂದಿದ್ದರು.ಕರೆದೊಯ್ಯುತ್ತಾರೆ ಎಂದು ದೂರು ನೀಡಿದ ಹಿನ್ನಲೆಯಲ್ಲಿ ತಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next