Advertisement

‘ವಿದ್ಯೆಯ ದುರ್ಬಳಕೆ ವಿನಾಶಕ್ಕೆ  ಕಾರಣ’

03:09 PM Oct 06, 2017 | Team Udayavani |

ಬೆಳ್ತಂಗಡಿ: ನ್ಯಾಯವಾದ ಹಾದಿಯಲ್ಲಿ ಸಾಗಿದರೆ ಪರಿವರ್ತನೆ ಯಶಸ್ಸು ದೊರೆಯುತ್ತದೆ. ವಿದ್ಯೆಯ ದುರ್ಬಳಕೆ ವಿನಾಶಕ್ಕೆ ಹೇತುವಾಗುತ್ತದೆ ಎನ್ನುವುದಕ್ಕೆ ವಾಲ್ಮೀಕಿ ಉತ್ತಮ ಉದಾಹರಣೆ ಎಂದು ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ| ಗಣಪತಿ ಭಟ್‌ ಕುಳಮರ್ವ ಹೇಳಿದ್ದಾರೆ.

Advertisement

ಅವರು ಗುರುವಾರ ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್‌, ನಗರ ಪಂಚಾಯತ್‌, ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಪ್ರಧಾನ ಉಪನ್ಯಾಸ ನೀಡಿದರು.

ವಾಲ್ಮೀಕಿ ಜಯಂತಿ
ಜಿ.ಪಂ. ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾಹುಲ್‌ ಹಮೀದ್‌ ಕೆ.ಕೆ. ಉದ್ಘಾಟಿಸಿ, ಸೀತೆಯ ಪಾವಿತ್ರ್ಯ, ರಾಮನ ವ್ಯಕ್ತಿತ್ವ, ಲಕ್ಷ್ಮಣನ ವಿಧೇಯದ ಕುರಿತು ಮಾತನಾಡುವವರಿದ್ದಾರೆ. ಆದರೆ ಅಂತಹ ಉದಾತ್ತ ಚಿತ್ರಣ ನೀಡಿದ ವಾಲ್ಮೀಕಿಯನ್ನು ಕೂಡ ಸ್ಮರಿಸುವಂತೆ ಮಾಡಿದ್ದು ಇಂತಹ ಜಯಂತಿ ಆಚರಣೆ ಎಂದರು.

ಸಮ್ಮಾನ
ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಹೇಮಾ, ಅಪೂರ್ವಾ ಟಿ.ಪಿ., ಗಿರಿಯಪ್ಪ ಎಂ.ಕೆ. ಅವರನ್ನು ಸಮ್ಮಾನಿಸಲಾಯಿತು. ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್‌ ಪಿ.ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್‌  ಸದಸ್ಯ ಶೇಖರ್‌ ಕುಕ್ಕೇಡಿ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್‌ ಆರ್‌. ಸುವರ್ಣ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಬಸವರಾಜ ಅಯ್ಯಣ್ಣನವರ್‌, ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌, ನಗರ ಪಂಚಾಯತ್‌ ಮುಖ್ಯಾಧಿಕಾರಿ ಜೆಸಿಂತಾ ಲೂವಿಸ್‌ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ. ಮೋಹನ್‌ ಕುಮಾರ್‌ ಸ್ವಾಗತಿಸಿ, ಹೇಮಲತಾ ಕಾರ್ಯಕ್ರಮ
ನಿರ್ವಹಿಸಿದರು.

Advertisement

ಬದುಕಿಗೆ ಸಂದೇಶ
ಹೊಗಳಿಕೆ, ಟೀಕೆಯನ್ನು ಸಮರ್ಥವಾಗಿ ಮೆಟ್ಟಿನಿಂತು ಇಂದಿಗೂ ಕೀರ್ತಿಗೆ ಭಾಜನವಾದ ಕೃತಿಯಿದ್ದರೆ ಅದು ರಾಮಾಯಣ. ಪಾಪಿಗೂ ಉದ್ಧಾರವಿಹುದು ಎಂದು ಕುವೆಂಪು ಹೇಳಿದಂತೆ ಅಹಲ್ಯೆಯಂತಹ ಕನ್ಯೆಗೆ ಶಾಪವಿಮೋಚನೆ‌ ನೀಡಿ ಅದರಲ್ಲೊಂದು ಬದುಕಿಗೆ ಸಂದೇಶ ಸಾರುವಂತೆ ಕಾವ್ಯವನ್ನು ಹೆಣೆದದ್ದು ವಾಲ್ಮೀಕಿಯ ಸಾಮರ್ಥ್ಯ.
ಪ್ರೊ| ಗಣಪತಿ ಭಟ್‌
ಕುಳಮರ್ವ, ಪ್ರಾಚಾರ್ಯ ಸ.ಪ್ರ.
ದ. ಕಾ.ಪುಂಜಾಲಕಟ್ಟೆ

ತಾ.ಪಂ. ಸದಸ್ಯರು ಗರಂ
ವೇದಿಕೆಯಲ್ಲಿ ಅಧ್ಯಕ್ಷತೆ, ಉಪಸ್ಥಿತಿ ಸಹಿತ ತಾ.ಪಂ. ಸದಸ್ಯರಿಗೆ ಸೂಕ್ತ ಗೌರವ ನೀಡಲಿಲ್ಲ ಎಂದು ಸದಸ್ಯೆ ಧನಲಕ್ಷ್ಮೀ ಅಸಮಾಧಾನ ವ್ಯಕ್ತಪಡಿಸಿದರು. ದೀಪ ಬೆಳಗಲು ಆಹ್ವಾನಿಸಿದಾಗ ಗರಂ ಆಗಿ ಉತ್ತರಿಸಿದರು. ಈ ಸಂದರ್ಭ ಜಿ.ಪಂ. ಸದಸ್ಯರು ಜಿ.ಪಂ. ಕಾರ್ಯಕ್ರಮದಲ್ಲಿ ಭಾಗವಹಿಸಲಿ, ಇಲ್ಲಿ ತಾ.ಪಂ. ಸದಸ್ಯರಿಗೆ ಆದ್ಯತೆ ನೀಡಿ ಎಂದರು. ಇದು ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಅವರನ್ನು ಕೆರಳಿಸಿತು. ನಾವು ಸಭಿಕರಾಗಿಯೇ ಆಗಮಿಸಿದ್ದು, ತಾ.ಪಂ. ಸದಸ್ಯರು ಯಾರೂ ಸಮಯಕ್ಕೆ ಸರಿಯಾಗಿ ಬಂದಿರದ ಕಾರಣ, ತಾ. ಪಂ. ಅಧ್ಯಕ್ಷ , ಉಪಾಧ್ಯಕ್ಷರುಗೈರಾದ ಕಾರಣ ಅಧಿಕಾರಿಗಳ ಆಗ್ರಹದ ಮೇರೆಗೆ ನಾವು ವೇದಿಕೆಯೇರಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next