Advertisement

ಇಸ್ಲಾಮಾಬಾದ್‌ ರಕ್ತಪಾತ:ಪೊಲೀಸರ ಧಾರ್ಮಿಕ ಭಾವನೆಗಾದ ಘಾಸಿ ಕಾರಣ?

03:57 PM Nov 30, 2017 | Team Udayavani |

ಇಸ್ಲಾಮಾಬಾದ್‌ : ರಾಷ್ಟ್ರ ರಾಜಧಾನಿಯ ಹೊರ ವಲಯದಲ್ಲಿ ಕಳೆದ ವಾರ ಪ್ರತಿಭಟನಕಾರರೊಂದಿಗೆ ಭಾರೀ ಹಿಂಸಾತ್ಮಕ ಕಾದಾಟ ಉಂಟಾಗಲು ಪ್ರತಿಭಟನಕಾರರು ಅತ್ಯಂತ ಪ್ರಚೋದನಾತ್ಮಕವಾಗಿ ಬೆಂಕಿ ಉಗುಳುವ ರೀತಿಯಲ್ಲಿ  ಭಾಷಣ ಮಾಡಿ ಭದ್ರತಾ ಸಿಬಂದಿಗಳ ಧಾರ್ಮಿಕ ಭಾವನೆಯನ್ನು ನೋಯಿಸಿದ್ದೇ ಕಾರಣ ಎಂದು ಇಸ್ಲಾಮಾಬಾದ್‌ ಪೊಲೀಸರು ಪಾಕ್‌ ಸುಪ್ರೀಂ ಕೋರ್ಟಿಗೆ ಹೇಳಿದ್ದಾರೆ.

Advertisement

ಕಳೆದ ವಾರ ರಾಜಧಾನಿ ಇಸ್ಲಾಮಾಬಾದ್‌ ತಲುಪುವ ಮುಖ್ಯ ಹೆದ್ದಾರಿಯನ್ನು ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಕಾರರು ತಡೆದಿದ್ದರು. ಅವರನ್ನು ತೆರವು ಗೊಳಿಸುವ ಕಾರ್ಯಾಚರಣೆಯಲ್ಲಿ ಒಬ್ಬ ಭದ್ರತಾ ಸಿಬಂದಿ ಮಡಿದು ಇತರ ಸುಮಾರು 250 ಮಂದಿ ಗಾಯಗೊಂಡಿದ್ದರು.

ಪ್ರತಿಭಟನಕಾರರು ಪಾಕ್‌ ಕಾನೂನು ಸಚಿವ ಝಾಹಿದ್‌ ಹಮೀದ್‌ ಅವರ ರಾಜೀನಾಮೆಯನ್ನು ಆಗ್ರಹಿಸುತ್ತಿದ್ದರು. ಕಳೆದ ಸೆಪ್ಟಂಬರ್‌ನಲ್ಲಿ ಪಾಸಾಗಿದ್ದ 2017 ಚುನಾವಣಾ ಕಾಯಿದೆಯಲ್ಲಿ ಪ್ರವಾದಿತ್ವದ ಅಂತಿಮ ಪ್ರಮಾಣ ವಚನವಾದ ಖತ್‌ಮ್‌-ಇ-ನಬುವತ್‌ ಬಗ್ಗೆ ಬದಲಾವಣೆ ತಂದುದಕ್ಕಾಗಿ ಕಾನೂನು ಸಚಿವರ ರಾಜೀನಾಮೆಯನ್ನು ಪ್ರತಿಭಟನಕಾರರು ಆಗ್ರಹಿಸುತ್ತಿದ್ದರು.

ಪ್ರತಿಭಟನಕಾರರ ಉಗ್ರ ವಿರೋಧಕ್ಕೆ ಮಣಿದು ಪಾಕ್‌ ಸರಕಾರ ಕೊನೆಗೂ ಕಾನೂನು ಸಚಿವರ ರಾಜೀನಾಮೆಯನ್ನು ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next