ಬ್ರಿಸ್ಬೇನ್: ಸದ್ಯ ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದಲ್ಲಿ ಗಾಯಾಳುಗಳ ಸಂಖ್ಯೆ 11ಕ್ಕೇರಿದೆ. ಇದು ಹಿಂದಿನ ಯಾವುದೇ ವಿದೇಶಿ ಅಥವಾ ಸ್ವದೇಶಿ ಸರಣಿಗಳಲ್ಲೇ ಅತಿ ಗರಿಷ್ಠ ! ವಿಶೇಷವೆಂದರೆ ಟೆಸ್ಟ್ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ಪ್ರಮುಖ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಮಾತ್ರ ನಾಲ್ಕೂ ಟೆಸ್ಟ್‌ನ 11ರ ಬಳಗದಲ್ಲಿ ಬದಲಾಗದ ಆಟಗಾರರು!
ಇದಕ್ಕೆ ಕಾರಣಗಳು ಹಲವಾರಿವೆ. ಮುಖ್ಯವಾಗಿ ಆಟಗಾರರಿಗಿರುವ ಕಾರ್ಯದೊತ್ತಡವನ್ನು ನಿಭಾಯಿಸಲು ವಿಫಲವಾಗಿರುವುದು, ತಂಡದ ಆಟಗಾರರನ್ನು ಆವರ್ತನ ಪದ್ಧತಿಯಂತೆ ಬದಲಾಯಿಸದೇ ಇರುವುದು, ಕೊರೊನಾ ಸಮಯದಲ್ಲಿನ ದೀರ್ಘ ವಿಶ್ರಾಂತಿ… ಇವೆಲ್ಲ ಗಾಯಗೊಳ್ಳಲು ಮುಖ್ಯ ಕಾರಣ. ಆಟಗಾರರನ್ನು ಆವರ್ತನ ಪದ್ಧತಿಯಂತೆ ಬದಲಾಯಿಸಿದರೆ ಅವರ ಮೇಲಿನ ಕಾರ್ಯದೊತ್ತಡವನ್ನು ತಪ್ಪಿಸಬಹುದು.
ಇದನ್ನೂ ಓದಿ:ಬ್ರಿಸ್ಬೇನ್ ಟೆಸ್ಟ್: ನಾಲ್ಕು ವಿಕೆಟ್ ಕಳೆದುಕೊಂಡ ಭಾರತ, ಪಂತ್- ಮಯಾಂಕ್ ಮೇಲಿದೆ ಒತ್ತಡ
ದೀರ್ಘ ವಿಶ್ರಾಂತಿಯಿಂದ ಹೊರ ಬಂದ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ, ಐಪಿಎಲ್ಲೂ ಸೇರಿ ಇದುವರೆಗೆ 205 ಓವರ್ ಗಳನ್ನು ಎಸೆದಿದ್ದಾರೆ. ಇದನ್ನು ಹೊರತುಪಡಿಸಿ ನೆಟ್‌ನಲ್ಲೂ ಅವರ ಬೌಲಿಂಗ್, ವ್ಯಾಯಾಮ ಎಂದಿನಂತೆ ಇದ್ದೇ ಇರುತ್ತದೆ! ಇದನ್ನು ಸಹಿಸಿಕೊಳ್ಳುವ ಶಕ್ತಿ ದೇಹ ಕ್ಕಿರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಇನ್ನೊಂದು ಸಮಸ್ಯೆಯೆಂದರೆ ಆಸ್ಟ್ರೇಲಿಯದ ಕ್ರಿಕೆಟ್ ಅಂಕಣದ 30 ಗಜದ ಹೊರ ಭಾಗದಲ್ಲಿ ಮರಳು ಸ್ವಲ್ಪ ಜಾಸ್ತಿಯಿದೆ. ಇದು ಆಟಗಾರರನ್ನು ಗಾಯಗೊಳಿ ಸುತ್ತಿದೆ. ಹಾಗೆಯೇ ಕೊರೊನಾ ವೇಳೆ ಎಷ್ಟೇ ತರಬೇತಿ ಪಡೆದಿದ್ದರೂ, ಸ್ಪರ್ಧಾತ್ಮಕ ಕ್ರಿಕೆಟ್‌ನ ಒತ್ತಡಕ್ಕೆ ಅವು ಸಾಕಾಗುವುದಿಲ್ಲ. ಈ ಎಲ್ಲ ಅಂಶ ಗಳನ್ನು ಪರಿಗಣಿಸಬೇಕು ಎಂದು ಶ್ರೀನಿವಾಸನ್, ಮೈಕೆಲ್ ಹಾರ್ಡಿಂಗ್ ರಂತಹ ತಜ್ಞರು ಹೇಳಿದ್ದಾರೆ.