Advertisement

ಇಂದು ಭಾರತದಲ್ಲಿ ರಿಯಲ್ಮೆ 8, ರಿಯಲ್ಮೆ 8 ಪ್ರೊ ಬಿಡುಗಡೆ : ವಿಶೇಷತೆಗಳೇನು..?

02:35 PM Mar 24, 2021 | Team Udayavani |

ನವ ದೆಹಲಿ :  ರಿಯಲ್ ಮಿ 8 ಸಿರೀಸ್ ಅನಾವರಣವು ಇಂದು(ಮಾರ್ಚ್ 24) ಭಾರತದಲ್ಲಿ ನಡೆಯಲಿದೆ. ಅನಾವರಣವು ಲೈವ್‌ ಸ್ಟ್ರೀಮ್ ಮೂಲಕ ನಡೆಯಲಿದೆ.

Advertisement

ಕಳೆದ ವರ್ಷ ರಿಯಲ್ ಮಿ 7 ಸಿರೀಸ್ ನ ನವೀಕರಣಗಳೊಂದಿಗೆ ರಿಯಲ್ ಮಿ 8 ಮತ್ತು ರಿಯಲ್ ಮಿ 8 ಪ್ರೊ ಇಂದು ಅನಾವರಣ ಆಗುವ ನಿರೀಕ್ಷೆಯಿದೆ. ರಿಯಲ್ ಮಿ 8 ಸಿರೀಸ್ ಸೂಪರ್ ಅಮೋಲೆಡ್ ಡಿಸ್ಪ್ಲೇ ಮತ್ತು ಸ್ಪೀಡ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಓದಿ :  ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ : ಮನೆಗೆ ನುಗ್ಗುತ್ತಿವೆ ಹಾವು-ಜೇಡಗಳು!

ರಿಯಲ್ ಮಿ 8 ಸಿರೀಸ್ ನ ಅನಾವರಣ ಲೈವ್ ಸ್ಟ್ರೀಮ್ ಸಂಜೆ 7: 30 ಕ್ಕೆ ಪ್ರಾರಂಭವಾಗಲಿದೆ. ರಿಯಲ್ ಇಂಡಿಯಾ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಲೈವ್‌ ಸ್ಟ್ರೀಮ್ ಆಗುತ್ತದೆ.

ರಿಯಲ್ ಮಿ 8 ಮತ್ತು ರಿಯಲ್ ಮಿ 8 ಪ್ರೊ ಇಂಡಿಯಾದ ಬೆಲೆ ವಿವರಗಳನ್ನು ಕಂಪನಿಯು ಇನ್ನೂ ಪ್ರಕಟಿಸಿಲ್ಲ. ಆದರೆ, ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಬಿಡುಗಡೆಗೊಂಡ ರಿಯಲ್‌ ಮಿ 7 ಸಿರೀಸ್ ನ್ನು ರೂ. 14,999 ಗೆ ನೀಡಿತ್ತು, ರಿಯಲ್ ಮಿ 8 ಸಿರೀಸ್ ಕೂಡ ಸಿರೀಸ್ 7 ನ ಆಸು ಪಾಸಿನ ಬೆಲೆಯಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ರಿಯಲ್ ಮಿ 8 ಬೆಲೆ 15,000 ರೂ. ಹಾಗೂ ರಿಯಲ್ ಮಿ 8 ಪ್ರೊ ಎಲ್ಲೋ ರೂ. 25,000 ರೂ ಇರಬಹುದು ಎಂದು ಅಂದಾಜಿಸಲಾಗಿದೆ.

Advertisement

ರಿಯಲ್ ಮಿ 8, ರಿಯಲ್ ಮಿ 8 ಪ್ರೊ ವಿಶೇಷತೆಗಳು :

ರಿಯಲ್‌ ಮಿ 8 ರಲ್ಲಿ 6.4 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇ, ಮೀಡಿಯಾ ಟೆಕ್ ಹೆಲಿಯೊ ಜಿ 95 ಎಸ್‌ ಒ ಸಿ, 64 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 30 ಡಬ್ಲ್ಯೂ ಡಾರ್ಟ್ ಚಾರ್ಜ್ ಹೊಂದಿರುವ 5,000 ಎಮ್‌ ಎ ಹೆಚ್ ಬ್ಯಾಟರಿ ಇರುತ್ತದೆ ಎಂದು ರಿಯಲ್ ಮಿ ಈಗಾಗಲೇ ದೃಢಪಡಿಸಿದೆ.

ರಿಯಲ್ ಮಿ 8 ಪ್ರೊ 108 ಮೆಗಾಪಿಕ್ಸೆಲ್ ಸ್ಯಾಮ್‌ ಸಂಗ್ ಎಚ್‌ ಎಂ 2 ಪ್ರೈಮರಿ ಕ್ಯಾಮೆರಾ ಸೆನ್ಸಾರ್ ನೊಂದಿಗೆ ಬಿಡುಗಡೆಯಾಗಲು ಸಿದ್ಧವಾಗಿದೆ ಮತ್ತು 65W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 4,500 ಎಮ್‌ ಎ ಹೆಚ್ ಬ್ಯಾಟರಿಯನ್ನು ಹೊಂದಿದೆ. ಈ ಸಿರೀಸ್ ನ ಉತ್ತಮ ಮಾದರಿಯು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 720 ಜಿ SoC ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಓದಿ :   ತುಂಬಿ ತುಳುಕುತ್ತಿದೆ ಪ್ರಗತಿಯ ಕೊಡ : ಖಾನಾಪುರ ತಾಲೂಕಿನ ಮಾದರಿ ಗ್ರಾಪಂ

Advertisement

Udayavani is now on Telegram. Click here to join our channel and stay updated with the latest news.

Next