ಮಿತವ್ಯಯದ ದರಕ್ಕೆ ತಕ್ಕಮಟ್ಟಿಗೆ ಉತ್ತಮ ಫೋನ್‌ಗಳನ್ನು ನೀಡುತ್ತಿದೆ.
Advertisement
ಈ ಕಂಪೆನಿಯ ಇನ್ನೊಂದು ಹೊಸ ಮೊಬೈಲ್ ರಿಯಲ್‌ಮಿ 3. ಇದು, 10-12 ಸಾವಿರ ರೂ. ವಲಯದ ಆರಂಭಿಕ ಮಧ್ಯಮ ದರ್ಜೆಯ ಫೋನ್ ಆಗಿದೆ. ಈ ಮೊಬೈಲ್ ಭಾರತಕ್ಕೆ ಬಿಡುಗಡೆಯಾಗಿ ಮೂರು ವಾರಗಳಾಗಿವೆ. ಈ ಅವಧಿಯಲ್ಲಿ 5 ಲಕ್ಷ ಫೋನ್‌ಗಳು ಮಾರಾಟವಾಗಿವೆ ಎಂದುಕಂಪೆನಿ ಹೇಳಿಕೊಂಡಿದೆ. ಫ್ಲಿಪ್ ಕಾರ್ಟ್‌ನಲ್ಲಿ ಫ್ಲಾಶ್‌ಸೇಲ್ ಮೂಲಕ ಮಾರಾಟ ಮಾಡಲಾಗುತ್ತಿದೆ. 23,500ಮಂದಿಯ ರೇಟಿಂಗ್‌ನಲ್ಲಿ 5ಕ್ಕೆ 4.5 ಸ್ಟಾರ್‌ಗಳ ರೇಟಿಂಗ್ ಇದಕ್ಕೆದೊರೆತಿದೆ. ಅಲ್ಲಿಗೇ ಇದನ್ನುಕೊಂಡ ಗ್ರಾಹಕರಿಗೆ ಈ ಮೊಬೈಲ್ ಮೆಚ್ಚುಗೆಯಾಗಿದೆ ಎಂಬುದು ಖಚಿತ.
ರಿಯಲ್‌ಮಿ 3 6.2 ಇಂಚಿನ ಎಚ್‌ಡಿ ಪ್ಲಸ್, (1520720 ಪಿಕ್ಸಲ್, 271 ಪಿಪಿಐ) ವಾಟರ್ ಡ್ರಾಪ್ ವಿನ್ಯಾಸದ ಪರದೆ ಹೊಂದಿದೆ. ಪರದೆ ಮತ್ತು ಬೆಜೆಲ್ಸ್‌ನ ಅನುಪಾತ 19:9 ಇದೆ. 4 ಜಿಬಿ ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹ ಹಾಗೂ 3ಜಿಬಿ ರ್ಯಾಮ್ ಹಾಗೂ 32 ಜಿಬಿ ಆಂತರಿಕ ಸಂಗ್ರಹದ ಎರಡು ಆವೃತ್ತಿಗಳಿವೆ.
ಇದು ಮೀಡಿಯಾಟೆಕ್ ಹೀಲಿಯೋ ಪಿ70 ಎಂಟು ಕೋರ್‌ಗಳ ಪ್ರೊಸೆಸರ್ ಹೊಂದಿದೆ. (2.1 ಗಿ.ಹ. ಕ್ಲಾಕ್ ಸ್ಪೀಡ್) ಒಪ್ಪೋ, ವಿವೋ ಮಾತೃ ಕಂಪೆನಿಯದ್ದಾದ ಕಲರ್ ಆಪರೇಟಿಂಗ್ ಸಿಸ್ಟಂ ಒಳಗೊಂಡಿದೆ. ನೂತನ ಆಂಡ್ರಾಯ್ಡ 9 ಪೈ ಆವೃತ್ತಿ ಹೊಂದಿದೆ. ಎರಡು ಸಿಮ್ ಹಾಕಿಕೊಂಡು, ಮೆಮೊರಿ ಕಾರ್ಡ್ ಕೂಡ ಹಾಕಿಕೊಳ್ಳಬಹುದು. ಎರಡು ಸಿಮ್ ಸ್ಲಾಟ್ ಗಳಲ್ಲೂ 4ಜಿ ಸಿಮ್ ಹಾಕಿಕೊಳ್ಳಬಹುದು. ಅರ್ಥಾತ್ ಜಿಯೋ ವೋಲ್ಟ್ ಸಿಮ್ ಹಾಕಿ ಬಳಸಬಹುದು. ಕ್ಯಾಮರಾ ವಿಭಾಗಕ್ಕೆ ಬಂದರೆ 13 ಮತ್ತು 2 ಮೆಗಾ ಪಿಕ್ಸಲ್ ಹಿಂಬದಿ ಪ್ರಾಥಮಿಕ ಕ್ಯಾಮರಾ ಇದೆ. ಸೆಲ್ಫಿಗಾಗಿ 13 ಮೆಗಾಪಿಕ್ಸಲ್ ಕ್ಯಾಮರಾ ಇದೆ.ಮೊಬೈಲ್‌ನ ಹಿಂಬದಿಯಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. 3.5 ಎಂ.ಎಂ. ಆಡಿಯೋ ಜಾಕ್ ಇದೆ. ಮೈಕ್ರೋ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹೊಂದಿದೆ. ಎಲ್ಲ ಸರಿ, ಬ್ಯಾಟರಿ ಎಷ್ಟು ಎಂಬ ,ಕುತೂಹಲ ಇದ್ದೇ ಇರುತ್ತದೆ. ನಿಮ್ಮ ಕುತೂಹಲಕ್ಕೆ ಈ ಮೊಬೈಲ್ ಮೋಸ ಮಾಡುವುದಿಲ್ಲ. ಇದು 4230 ಎಂಎಎಚ್ ಬ್ಯಾಟರಿ ಹೊಂದಿದೆ! ನಾನು ಹೆವಿ ಯೂಸರ್. ನನಗೆ ಜಾಸ್ತಿ ಬ್ಯಾಟರಿ ಇರುವ ಮೊಬೈಲ್ ಬೇಕು ಎನ್ನುವಂಥವರು ಈ ಮೊಬೈಲ್ ಅನ್ನು ಸಹ ಪರಿಗಣಿಸಬಹುದು.
Related Articles
ಪ್ರೊಸೆಸರ್ ಬಳಸುತ್ತವೆ. ಸ್ನಾಪ್‌ಡ್ರಾಗನ್ ಗೆ ಹೋಲಿಸಿದರೆ ಮೀಡಿಯಾಟೆಕ್ ಪ್ರೊಸೆಸರ್ ಗಳು ಕಾರ್ಯಾಚರಣೆಯಲ್ಲಿ ಅಷ್ಟೊಂದು ಮುಂದಿಲ್ಲ. ಇನ್ನು, ರಿಯಲ್‌ಮಿಯಲ್ಲಿ ಇನ್ನೊಂದು ಇಷ್ಟವಾಗದ ಅಂಶವೆಂದರೆ, ಸಾಮಾನ್ಯವಾಗಿ ಈಗಿನ ಮೊಬೈಲ್‌ಗಳೆಲ್ಲಾ ಲೋಹದ ದೇಹ ಅಥವಾ ಗಾಜಿನ ದೇಹ ಹೊಂದಿರುತ್ತವೆ. ಕಡಿಮೆ ದರಕ್ಕೆ ಕೊಡುವ ಸಲುವಾಗಿ ರಿಯಲ್‌ಮಿ ಪ್ಲಾಸ್ಟಿಕ್
ಪ್ಯಾನೆಲ್‌ಗಳನ್ನು ಬಳಸುತ್ತಿದೆ.
Advertisement
ರಿಯಲ್‌ಮಿ 3 ಕೂಡ ಪ್ಲಾಸ್ಟಿಕ್ ದೇಹದ ಫೋನ್. ನಿಮಗೆ ಲೋಹ ಅಥವಾ ಗಾಜಿನ ಅನುಭವ ಇದರಲ್ಲಿ ದೊರಕುವುದಿಲ್ಲ. ಈ ದರಕ್ಕೆ ಅನೇಕ ಫೋನ್‌ಗಳು ಫುಲ್ ಎಚ್ ಡಿ ಪ್ಲಸ್ (19201080) ಪರದೆ ನೀಡುತ್ತಿವೆ. 401 ಪಿಪಿಐ (ಪಿಕ್ಚರ್ ಪರ್ ಇಂಚ್) ಯ ಸಮೃದ್ಧ ಚಿತ್ರಗಳು ದೊರಕುತ್ತವೆ. ಆದರೆ ರಿಯಲ್‌ಮಿ 3 ಯಲ್ಲಿ 1520720 ರೆಸ್ಯೂಲೇಶನ್‌ನ 271 ಪಿಪಿಐ ಪರದೆ ಇದೆ. ಅಂದರೆ ಪರದೆಯಲ್ಲಿ ವಿಡಿಯೋ ಮತ್ತು ಫೋಟೋಗಳು ಅತಿಹೆಚ್ಚು ಸೂಕ್ಷ್ಮತೆ, ಸ್ಪಷ್ಟತೆ ಹೊಂದಿರುವುದಿಲ್ಲ.
ಕೆ.ಎಸ್. ಬನಶಂಕರ ಆರಾಧ್ಯ